ವಿದ್ಯಾರ್ಥಿ, ಪೋಷಕರ ಆತ್ಮವಿಶ್ವಾಸ ವೃದ್ಧಿಗೆ ಸೂಚನೆ  ನಾಳೆಯಿಂದ 9 ರಿಂದ 12ನೇ ತರಗತಿ ಆರಂಭ
ಚಾಮರಾಜನಗರ

ವಿದ್ಯಾರ್ಥಿ, ಪೋಷಕರ ಆತ್ಮವಿಶ್ವಾಸ ವೃದ್ಧಿಗೆ ಸೂಚನೆ ನಾಳೆಯಿಂದ 9 ರಿಂದ 12ನೇ ತರಗತಿ ಆರಂಭ

August 22, 2021

ಚಾಮರಾಜನಗರ, ಆ.21- ಇದೇ ತಿಂಗಳ 23ರಿಂದ 9ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭೌತಿಕವಾಗಿ ಬೋಧನಾ ತರಗತಿಗಳು ಆರಂಭವಾಗಲಿರುವ ಹಿನ್ನೆಲೆ ಯಲ್ಲಿ ಕೋವಿಡ್ ಸಂಬಂಧಿ ಹೊರಡಿಸ ಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ)ವನ್ನು ಕಟ್ಟುನಿಟ್ಟಾಗಿ ಅನುಸರಿಸಿ ವಿದ್ಯಾರ್ಥಿಗಳು ಹಾಗೂ ಪೋಷಕ ರಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಶನಿವಾರ ಕೋವಿಡ್ ಹಾಗೂ ಶಾಲಾ ಆರಂಭದ ಹಿನೆÀ್ನಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತರಗತಿಗಳ ಆರಂಭಕ್ಕಾಗಿ ಕೈಗೊಳ್ಳಲಾಗಿ ರುವ ಮುಂಜಾಗ್ರತ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದ ಸಚಿವರು, ಯಾವುದೇ ಕಾರ ಣಕ್ಕೂ ಲೋಪವಾಗದಂತೆ ತರಗತಿಗಳನ್ನು ನಡೆಸಬೇಕು. ಕೋವಿಡ್ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಎಸ್‍ಒಪಿ ಅನ್ನು ಅತ್ಯಂತ ಬಿಗಿಯಾಗಿ ಜಾರಿಗೊಳಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆತ್ಮವಿಶ್ವಾಸ ಮೂಡಿಸುವ ಕ್ರಮಗಳು ಆಗಬೇಕು ಎಂದರು.

ಶಿಕ್ಷಕರು, ಉಪನ್ಯಾಸಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಯಾರಾ ದರೂ ಇನ್ನೂ ಲಸಿಕೆ ಪಡೆದಿಲ್ಲವಾದರೆ ಕೂಡಲೇ ಲಸಿಕೆ ಪಡೆದುಕೊಳ್ಳಲು ಸೂಚಿಸ ಬೇಕು. ಪ್ರತಿ ಕೊಠಡಿಗೆ ಶಿಕ್ಷಣ ಇಲಾಖೆ ಹೊರಡಿ ಸಿರುವ ಮಾರ್ಗಸೂಚಿ ಅನ್ವಯ ವಿದ್ಯಾರ್ಥಿ ಗಳು ಕುಳಿತುಕೊಳ್ಳಲು ವ್ಯವಸ್ಥೆ ಕೈಗೊಳ್ಳ ಬೇಕು. ಸೂಚಿಸಲಾಗಿರುವ ಅವಧಿ ಅನು ಸಾರ ತರಗತಿಗಳು ನಡೆಯಬೇಕು ಎಂದರು.

ಕೋವಿಡ್ ಸಂಬಂಧ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಿದ ಉಸ್ತುವಾರಿ ಸಚಿವರು, ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ಹೆಚ್ಚಿನ ಗಮನಹರಿಸಬೇಕೆಂದು ಸೂಚಿಸಿದರು. ಪ್ರಸ್ತುತ ಕೋವಿಡ್-19 ಪ್ರಕರಣಗಳು ನಿಯಂತ್ರಣ ದಲ್ಲಿರುವುದರಿಂದ ವಾರಾಂತ್ಯದ ಕಫ್ರ್ಯೂ ವಿನಾಯಿತಿ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಲಾ ಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಸಿ.ಪುಟ್ಟರಂಗ ಶೆಟ್ಟಿ, ಎನ್.ಮಹೇಶ್, ಸಿ.ಎಸ್.ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ ನಟರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಹರ್ಷಲ್ ಬೋಯರ್ ನಾರಾ ಯಣ ರಾವ್, ಎಎಸ್‍ಪಿ ಕೆ.ಎಸ್.ಸುಂದರ್ ರಾಜ್, ಡಿಹೆಚ್‍ಓ ಡಾ.ಎಂ.ಸಿ.ರವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಪಿ.ಮಂಜುನಾಥ್ ಇತರೆ ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮೊದಲು ಗುಂಡ್ಲುಪೇಟೆಯ ತಹಶೀಲ್ದಾರ್ ಕಚೇರಿಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋವಿಡ್ ಹಾಗೂ ಶಾಲಾ ಆರಂಭದ ಹಿನ್ನೆಲೆ ಯಲ್ಲಿ ಉಸ್ತುವಾರಿ ಸಚಿವರು ಸಭೆ ನಡೆಸಿದರು.

ಕೊರೊನಾ ತಡೆಗಟ್ಟುವುದು ಅಗತ್ಯವಾ ಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಸರ್ಕಾರದ ನಿಯಮಾನುಸಾರ ಆಗಸ್ಟ್ 23 ರಿಂದ 9 ರಿಂದ 12 ನೇ ತರಗತಿವರೆಗಿನ ಶಾಲಾ ಕಾಲೇಜು ಆರಂಭಗೊಳ್ಳಲಿದ್ದು ಇದಕ್ಕಾಗಿ ಪೂರ್ಣ ಪ್ರಮಾಣದ ಮುನ್ನೆಚ್ಚ ರಿಕೆ ಕ್ರಮಗಳನ್ನು ಅನುಸರಿಸಿ ಎಂದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತ ನಾಡಿ, ಗಿರಿಜನರ ಮನವೊಲಿಸಿ ಗರಿಷ್ಟ ಪ್ರಮಾಣದಲ್ಲಿ ಲಸಿಕೆ ಹಾಕಲು ಬೆಳಗ್ಗೆ ಮತ್ತು ಸಂಜೆ ಸಮಯ ಆಯ್ಕೆ ಮಾಡಿಕೊಳ್ಳಿ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಎಲ್ಲರ ಸಹಕಾರ ಪಡೆಯಿರಿ. ಆ. 23ರಿಂದ ಶಾಲೆ ಆರಂಭ ವಾಗಲಿದ್ದು, ಮಕ್ಕಳು ಮನೆಯಿಂದಲೇ ಕುಡಿಯಲು ಕಾಯಿಸಿ ಆರಿಸಿದ ಬಿಸಿನೀರು ತರುವಂತೆ ತಿಳಿಸಿ, ಶೌಚಾಲಯ ನಿರ್ವಹಣೆ ಕಡೆಗೆ ಗಮನ ಕೊಡಿ ಎಂದು ತಿಳಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪಿ. ಗಿರೀಶ್, ಉಪಾಧ್ಯಕ್ಷೆ ದೀಪಿಕ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಇತರೆ ಅಧಿಕಾರಿಗಳು ಹಾಜರಿದ್ದರು.

Translate »