ರಸ್ತೆ ದುರಸ್ತಿಗೆ ಆಗ್ರಹಿಸಿ ಪಾಂಡವಪುರದಲ್ಲಿ ಪ್ರತಿಭಟನೆ
ಮಂಡ್ಯ

ರಸ್ತೆ ದುರಸ್ತಿಗೆ ಆಗ್ರಹಿಸಿ ಪಾಂಡವಪುರದಲ್ಲಿ ಪ್ರತಿಭಟನೆ

August 21, 2021

ಪಾಂಡವಪುರ, ಆ.20- ಇಲ್ಲಿನ ಪುರಸಭೆ ವ್ಯಾಪ್ತಿಯ ಕಾಮನ ಚೌಕ ಹಾಗೂ ಬೀರಶೆಟ್ಟಹಳ್ಳಿ ಸಂಪರ್ಕ ರಸ್ತೆ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಎತ್ತಿನಗಾಡಿ ಅಡ್ಡ ನಿಲ್ಲಿಸಿ ಪ್ರತಿಭಟಿಸಿದರು.

ಪಾಂಡವಪುರ ಟೌನ್ ಕಾಮನಚೌಕದಲ್ಲಿ ಬಿಜೆಪಿ ಮುಖಂಡ, ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಜಮಾಯಿಸಿ, ಹದಗೆಟ್ಟಿರುವ ರಸ್ತೆಯಲ್ಲಿ ಜೋಡೆತ್ತು ಹಾಗೂ ಎತ್ತಿನಗಾಡಿಯನ್ನು ನಿಲ್ಲಿಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾಂಡವಪುರ ಪಟ್ಟಣದ ಕಾಮನಚೌಕದಿಂದ ಬೀರಶೆಟ್ಟಹಳ್ಳಿ ಬಡಾವಣೆಗೆ ತೆರಳಲು ತುಂಬಾ ಕಷ್ಟವಾಗುತ್ತಿದೆ. ಪುರಸಭೆ ವ್ಯಾಪ್ತಿಗೆ ಸೇರಿದ ಎಲ್ಲಾ ರಸ್ತೆಗಳನ್ನು ಕೋಟಿಗಟ್ಟಲೆ ಅನುದಾನದಲ್ಲಿ ಡಾಂಬರೀ ಕರಣ ಮಾಡಲಾಗುತ್ತಿದೆ. ಆದರೆ ಉದ್ದೇಶ ಪೂರ್ವಕವಾಗಿ ಬೀರ ಶೆಟ್ಟಹಳ್ಳಿ ರಸ್ತೆಯನ್ನು ಅನೇಕ ವರ್ಷಗಳಿಂದ ನಿರ್ಲಕ್ಷ್ಯಿಸಲಾಗು ತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ತಕ್ಷಣ ರಸ್ತೆಯ ಡಾಂಬರೀಕಣ ಕಾಮಗಾರಿ ಪ್ರಾರಂಭಿಸದಿದ್ದರೆ ರಸ್ತೆಯಲ್ಲೇ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಹೆಚ್.ಎನ್.ಮಂಜುನಾಥ್ ಎಚ್ಚರಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಎಇಇ ಖಿಜರ್ ಅಹಮದ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಅವರಿಗೆ ಪ್ರತಿಭಟನಾಕಾರರು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಅಧಿಕಾರಿಗಳು ಕೆಲಕಾಲ ಚರ್ಚೆ ನಡೆಸಿ, ಪುರಸಭೆ ಅನು ದಾನದಲ್ಲಿ ಮುಂದಿನ ಸೋಮವಾರದಂದು ಬೀರಶೆಟ್ಟಹಳ್ಳಿ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಲಾಗುವುದು. ಅಷ್ಟರಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಬದಿಗಳಲ್ಲಿ ಚರಂಡಿ ನಿರ್ಮಿಸಿದರೆ ರಸ್ತೆ ವ್ಯವಸ್ಥಿತವಾಗಿರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಸ್ಪಷ್ಟಪಡಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಖಿಜರ್‍ಅಹಮದ್ ಮಾತ ನಾಡಿ, ಲೋಕೋಪಯೋಗಿ ಇಲಾಖೆಯಿಂದ ಚರಂಡಿ ನಿರ್ಮಿಸಲು ಇನ್ನೂ ಅನುದಾನ ಬಂದಿಲ್ಲ. ಚರಂಡಿ ನಿರ್ಮಿಸಲು ಪ್ರಕ್ರಿಯೆ ನಡೆಯು ತ್ತಿದೆ. ಆದಷ್ಟೂ ಬೇಗ ಕಾಮಗಾರಿಗೆ ಅನುಮೋದನೆ ಪಡೆದು ಕೊಂಡು ಕಾಮಗಾರಿ ಪ್ರಾರಂಭಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಸೋಮವಾರದಿಂದ ರಸ್ತೆಯ ಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಬೇಕೆಂದು ಎಚ್ಚರಿಸಿದ ಬಳಿಕ ಪ್ರತಿಭಟನಾ ಕಾರರು ಹೋರಾಟವನ್ನು ಹಿಂಪಡೆದರು. ರಸ್ತೆ ತಡೆ ನಡೆಸಿದ ಪರಿಣಾಮ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯೆ ಜಯಲಕ್ಷ್ಮಿ, ಬೀರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಧು, ಬಿಜೆಪಿ ಮುಖಂಡ ರಾದ ಪ.ಮ.ರಮೇಶ್, ದೊರೆಸ್ವಾಮಿ, ನೀಲನಹಳ್ಳಿ ಧನಂಜಯ, ಶ್ರೀನಿವಾಸ್ ನಾಯ್ಕ, ವಿಠಲ, ಅನಿಲ್ ಸೇರಿದಂತೆ ಅನೇಕರಿದ್ದರು.

Translate »