ಹಿಂದುಳಿದ ವರ್ಗಗಳ ದಾರಿದೀಪ ಅರಸು
ಮಂಡ್ಯ

ಹಿಂದುಳಿದ ವರ್ಗಗಳ ದಾರಿದೀಪ ಅರಸು

August 21, 2021

ಕೆ.ಆರ್.ಪೇಟೆ,ಆ.20(ಶ್ರೀನಿವಾಸ್)-ಕರ್ನಾಟಕದ ಮುಖ್ಯಮಂತ್ರಿಗಳ ಸಾಲಿನಲ್ಲಿ ಸದಾ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ಡಿ. ದೇವರಾಜ ಅರಸು, ಹಿಂದುಳಿದ ವರ್ಗಗಳ ಸಮುದಾಯದ ಬದುಕಿನ ದಾರಿದೀಪ ವಾಗಿದ್ದಾರೆ ಎಂದು ತಹಸೀಲ್ದಾರ್ ಎಂ. ಶಿವಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿಧಾನಸೌಧದ ಆವರಣ ದಲ್ಲಿ ತಾಲೂಕು ಆಡಳಿತ ಮತ್ತು ಹಿಂದು ಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ದಿವಂಗತ ಡಿ.ದೇವರಾಜ ಅರಸು ಅವರ ಜಯಂತ್ಯೋ ತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯಮಂತ್ರಿಯಾಗಿ ಅತಿ ದೀರ್ಘಕಾಲ ಆಡಳಿತ ನಡೆಸಿದ ಅರಸು, ಸಮಾಜದ ಹಿಂದುಳಿದ ವರ್ಗಗಳು, ದಲಿತರು ಮತ್ತು ಬಡವರ ಆರ್ಥಿಕ ಸಬಲೀಕರಣಕ್ಕಾಗಿ ಅಗತ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ದರು. ರಾಜಕೀಯ ಮೀಸಲಾತಿಯ ಮೂಲಕ ಶೋಷಿತ ಸಮುದಾಯಗಳನ್ನು ಅಧಿಕಾರದ ಗದ್ದುಗೆ ಏರುವಂತೆ ಮಾಡಿದರು. ಉಳುವ ವನಿಗೆ ಭೂಮಿ ಎನ್ನುವ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ದುಡಿ ಯುವ ಗೇಣಿದಾರರ ಕೈಗೆ ಭೂಮಿಯನ್ನು ಒಪ್ಪಿಸಿ ಸ್ವಾವಲಂಬಿ ರೈತ ಸಮುದಾಯ ಸೃಷ್ಠಿಗೆ ಕಾರಣಕರ್ತರಾದರು ಎಂದರು.
ಜೀತ ಪದ್ಧತಿ ವಿಮೋಚನೆ, ಕೃಷಿ ಕಾರ್ಮಿಕ ರಿಗೆ ಕನಿಷ್ಠ ಕೂಲಿ, ವೃದ್ಧಾಪ್ಯ ವೇತನ, ಮಲ ಹೊರುವ ಪದ್ಧತಿ ನಿಷೇಧ, ಋಣ ಪರಿಹಾರ ಕಾರ್ಯಕ್ರಮ, ಬಡವರಿಗೆ ಅಗ್ಗದ ವಸತಿ ನಿರ್ಮಾಣ ಯೋಜನೆ ಮುಂತಾದ ಜನಪರ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು. ಅನ್ನ ಮತ್ತು ಅಕ್ಷರದ ಮಹತ್ವವನ್ನು ಅರಿತಿದ್ದ ಅರಸು ವಸತಿ ಶಾಲೆಗಳನ್ನು ಆರಂಭಿಸಿ ದರು. ಇದರ ಫಲವಾಗಿಯೇ ರಾಜ್ಯದ ಲಕ್ಷಾಂ ತರ ಮಕ್ಕಳು ವಿದ್ಯಾವಂತರಾಗಿ ಇಂದು ಉನ್ನತ ಹುದ್ದೆಗಳನ್ನು ಪಡೆಯುವಂ ತಾಯಿತು ಎಂದು ಹೇಳಿದರು.

ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಂ.ಕೆ. ಹರಿಚರಣ ತಿಲಕ್, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಡಿ. ದೇವರಾಜ ಅರಸು ವೇದಿಕೆಯ ಕೆ.ಮುರುಳೀ ಧರ್, ಪುರಸಭೆಯ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು.

ಅರಸು ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಹಿಂದು ಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ವೆಂಕಟೇಶ್, ಆಹಾರ ನಿರೀಕ್ಷಕ ಮಂಜುನಾಥ್, ಕಂದಾಯ ನಿರೀಕ್ಷಕಿ ಚಂದ್ರ ಕಲಾ ಪ್ರಕಾಶ್, ತಾಲೂಕು ಗ್ರಾಮ ಲೆಕ್ಕಾಧಿ ಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಅಗ್ನಿ ಶಾಮಕ ಠಾಣೆಯ ಅಧಿಕಾರಿ ಶಿವಣ್ಣ, ಪುರ ಸಭೆಯ ಶಹರಿ ರೋಜ್‍ಗಾರ್ ಯೋಜ ನೆಯ ಯೋಜನಾಧಿಕಾರಿ ಭಾರತಿ ಅನಂತ ಶಯನ, ಪುರಸಭೆಯ ಆರೋಗ್ಯ ಪರಿವೀ ಕ್ಷಕ ನರಸಿಂಹಶೆಟ್ಟಿ, ಆಸರೆ ಸೇವಾ ಸಮಾ ಜದ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತಾಲೂಕು ಖಜಾನಾಧಿಕಾರಿ ಶಿವಕುಮಾರ್, ಬಿಸಿಎಂ ಇಲಾಖೆಯ ಮೇಲ್ವಿಚಾರಕಿ ಪುಷ್ಪಾ, ಸವಿತಾ ಮಂಜುನಾಥ್ ಸೇರಿದಂತೆ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಮತ್ತು ಹಲವು ವಸತಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

Translate »