ಚಾಮರಾಜನಗರ

ಕುರ್ಚಿ ಮೇಲೆ ಕುಳಿತ ಅಪರೂಪದ ಡಾ.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ
ಚಾಮರಾಜನಗರ

ಕುರ್ಚಿ ಮೇಲೆ ಕುಳಿತ ಅಪರೂಪದ ಡಾ.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ

August 19, 2021

ಯಳಂದೂರು, ಆ.18- ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಕುರ್ಚಿ ಮೇಲೆ ಕುಳಿತಿರುವ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಪರೂಪದ ಪ್ರತಿಮೆಯನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು. ಈ ಪ್ರತಿಮೆ ದಕ್ಷಿಣ ಭಾರತದಲ್ಲೇ ವಿಶೇಷವಾದದ್ದು ಎಂದು ಹೇಳಲಾಗುತ್ತಿದೆ. 4.3 ಅಡಿ ಎತ್ತರದ ಪೀಠದಲ್ಲಿ 9.9 ಅಡಿ ಎತ್ತರದ ಅಂಬೇಡ್ಕರ್ ಕುರ್ಚಿಯ ಮೇಲೆ ಕುಳಿತಿರುವ ಪ್ರತಿಮೆ ಅಪರೂಪದ್ದಾಗಿದೆ. ದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಷನಲ್‍ನಲ್ಲಿ ಇರುವ ಭಂಗಿಯಲ್ಲಿ ಇದನ್ನು ರೂಪಿಸಲಾಗಿದೆ. ಫೈಬರ್‍ನಲ್ಲಿ ರೂಪಿತಗೊಂಡಿರುವ ಪ್ರತಿಮೆಯನ್ನು ನೆರೆಯ ಆಂಧ್ರಪ್ರದೇಶದ ಶಿಲ್ಪಿಗಳು ರೂಪಿಸಿದ್ದಾರೆ. ಒಟ್ಟು 15 ಲಕ್ಷ ರೂ…

ಮಾದಪ್ಪನ ಬೆಟ್ಟದಲ್ಲಿ ಪಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ
ಚಾಮರಾಜನಗರ

ಮಾದಪ್ಪನ ಬೆಟ್ಟದಲ್ಲಿ ಪಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ

August 19, 2021

ಹನೂರು, ಆ.18(ಸೋಮು)- ಮಲೆ ಮಹದೇಶ್ವರ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸ್ವಯಂ ಸೇವಾ ಸಂಸ್ಥೆ, ಪ್ರಾಧಿಕಾರದ ಆಡಳಿತ ಹಾಗೂ ಅರಣ್ಯ ಇಲಾಖೆಯು ಕೈಗೊಳ್ಳುವ ಅಭಿಯಾನದಲ್ಲಿ ಸಾಲೂರು ಬೃಹನ್ಮಠದ ಪಾಠಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಮಠದ ಪೀಠಾಧಿಪತಿ ವಿದ್ವಾನ್ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಸಂಬಂಧ ಮಂಗಳವಾರ ದಾಸೋಹ ಭವನದ ಆವರಣದಲ್ಲಿ ಸುರಪನೇನಿ ವಿದ್ಯಾಸಾಗರ್ ಫೌಂಡೇಷನ್ ವತಿಯಿಂದ ಆಯೋಜಿಸಿದ್ಧ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಲೆ…

ಉಡಿಗಾಲ: ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ
ಚಾಮರಾಜನಗರ

ಉಡಿಗಾಲ: ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

August 19, 2021

ಚಾಮರಾಜನಗರ, ಆ.18(ಎಸ್‍ಎಸ್)- 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಆರ್.ಉಮೇಶ್ ಅಭಿಮಾನಿ ಬಳಗ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಸುಮಾರು ಒಂದು ಸಾವಿರ ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಈ ಪೈಕಿ 210 ಮಂದಿಯನ್ನು…

ಸ್ಥಳೀಯರಿಗೂ ಕೌಶಲ ತರಬೇತಿ ಲಭಿಸಲಿ: ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ

ಸ್ಥಳೀಯರಿಗೂ ಕೌಶಲ ತರಬೇತಿ ಲಭಿಸಲಿ: ಶಾಸಕ ಪುಟ್ಟರಂಗಶೆಟ್ಟಿ

August 15, 2021

ಚಾಮರಾಜನಗರ, ಆ.14- ಕೋವಿಡ್- 19ರ ಹಿನೆÀ್ನಲೆ ಯಲ್ಲಿ ಹಲವು ಕಾರ್ಖಾನೆ, ಖಾಸಗಿ ಕಂಪನಿಗಳು ಆರ್ಥಿಕ ನಷ್ಟದಿಂದ ಕಾರ್ಯ ಸ್ಥಗಿತಗೊಳಿಸಿದ್ದರಿಂದ ಅನೇಕರು ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಉದ್ಯೋಗ ಮೇಳವನ್ನು ಜಿಲ್ಲೆಯಲ್ಲಿ ಆಯೋಜಿಸಿ ರುವುದು ಅನುಕೂಲವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೌಶಲ್ಯಾ ಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ…

ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಡಿಸಿ ಭೇಟಿ, ಪರಿಶೀಲನೆ
ಚಾಮರಾಜನಗರ

ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಡಿಸಿ ಭೇಟಿ, ಪರಿಶೀಲನೆ

August 15, 2021

ಚಾಮರಾಜನಗರ, ಆ.14- ಗುಂಡ್ಲು ಪೇಟೆ ತಾಲೂಕಿನ ಗಡಿಭಾಗದಲ್ಲಿರುವ ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶನಿವಾರ ಭೇಟಿ ನೀಡಿ ತಪಾಸಣಾ ಕಾರ್ಯವನ್ನು ಪರಿಶೀಲಿಸಿದರು. ಅರಣ್ಯ ಭಾಗದ ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ವಾಹನಗಳ ತಪಾಸಣಾ ಕಾರ್ಯವನ್ನು ಪರಿಶೀಲನೆ ನಡೆಸಿದರು. ಚೆಕ್‍ಪೋಸ್ಟ್ ಮೂಲಕ ಹಾದುಹೋಗಿ ರುವ ವಾಹನಗಳು, ಸರಕು ಸಾಗಾಣೆ ವಾಹನಗಳ ವಿವರ ಪರಿಶೀಲಿಸಿದರು. ಆರ್‍ಟಿಪಿಸಿಆರ್ ವರದಿ ಹಾಜರುಪಡಿಸದ ಎಷ್ಟು ವಾಹನಗಳನ್ನು ವಾಪಸ್ ಕಳುಹಿಸ ಲಾಗಿದೆ ಎಂಬ ಬಗ್ಗೆಯೂ ವಿವರ ಪಡೆದರು. ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಪ್ರಯಾಣಿಕರು ಕಡ್ಡಾಯವಾಗಿ 72…

ಸರಹದ್ದಿನ ಕಾದಾಟದಲ್ಲಿ ಹುಲಿ ಸಾವು
ಚಾಮರಾಜನಗರ

ಸರಹದ್ದಿನ ಕಾದಾಟದಲ್ಲಿ ಹುಲಿ ಸಾವು

August 14, 2021

ಚಾಮರಾಜನಗರ, ಆ.13-ವಾಸಸ್ಥಳದ ಸರಹದ್ದಿನ ಕಾದಾಟದಲ್ಲಿ ಹುಲಿಯೊಂದು ಸಾವನ್ನಪ್ಪಿ ರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಕುಂದುಕೆರೆ ವಲಯದ ಮಂಗಲ ಶಾಖೆಯ ಎಲಚೆಟ್ಟಿ ಗಸ್ತಿನ ಆಲದಮರದಹಳ್ಳ ಅರಣ್ಯ ಪ್ರದೇಶದ ಬಳಿ ಸುಮಾರು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಸದರಿ ಹುಲಿಯು ಬೇರೊಂದು ಹುಲಿಯ ಜೊತೆ ಕಾದಾಟದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಕಳೇಬರ ಮರೋಣೋತ್ತರ ಪರೀಕ್ಷೆ ವೇಳೆ ಹುಲಿಯ ದೇಹದಲ್ಲಿ ತೀವ್ರ ಗಾಯ ಗಳಾಗಿರುವುದು ಪತ್ತೆಯಾಗಿದೆ. ಹುಲಿಯ ಉಗುರು, ಹಲ್ಲುಗಳು…

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ
ಚಾಮರಾಜನಗರ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ

August 14, 2021

ಚಾಮರಾಜನಗರ, ಆ.13-75ನೇ ಸ್ವಾತಂತ್ರ್ಯೋ ತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತದಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು. ಸ್ವಾತಂತ್ರ ಹೋರಾಟಗಾರರಾಗಿರುವ ಚಾಮರಾಜನಗರ ತಾಲೂಕಿನ ಕರಿನಂಜನ ಪುರ ಗ್ರಾಮದ ಕೆ.ಎಂ.ತೋಟಪ್ಪ, ಕಾಗಲ ವಾಡಿ ಗ್ರಾಮದ ಡಿ.ಬಸವಯ್ಯ ಹಾಗೂ ಚಾಮರಾಜನಗರ ಪಟ್ಟಣ ವಾಸಿ ಲಲಿತಾ ಜಿ.ಟಾಗೆಟ್ ಅವರ ನಿವಾಸಗಳಿಗೆ ಜಿಲ್ಲಾಧಿ ಕಾರಿ ಡಾ.ಎಂ.ಆರ್. ರವಿ ಇಂದು ಭೇಟಿ ನೀಡಿ, ಜಿಲ್ಲಾಡಳಿತದಿಂದ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಗೌರವಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಮನೆಯಲ್ಲಿ…

ಶಾಸಕ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ ನೀಡುವಂತೆ ಆಗ್ರಹ
ಚಾಮರಾಜನಗರ

ಶಾಸಕ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ ನೀಡುವಂತೆ ಆಗ್ರಹ

August 13, 2021

ಚಾಮರಾಜನಗರ, ಆ.12- ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮಹೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಗುರುವಾರ ದಲಿತ ಸಂಘಟನೆಗಳ ಒಕ್ಕೂ ಟದ ವತಿಯಿಂದ ಪ್ರತಿಭಟನೆ ನಡೆಯಿತು. ನಗರ ಶ್ರೀಚಾಮರಾಜೇಶ್ವರ ದೇವಸ್ಥಾ ನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಶಾಸಕ ಎನ್.ಮಹೇಶ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹಾನಾಯಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಾಗೂ…

ಕೊಳ್ಳೇಗಾಲದ ಟ್ರೀ ಪಾರ್ಕ್‍ನಲ್ಲಿ `ಜಿಪ್‍ಲೈನ್’ ಆರಂಭ
ಚಾಮರಾಜನಗರ

ಕೊಳ್ಳೇಗಾಲದ ಟ್ರೀ ಪಾರ್ಕ್‍ನಲ್ಲಿ `ಜಿಪ್‍ಲೈನ್’ ಆರಂಭ

August 13, 2021

ಕೊಳ್ಳೇಗಾಲ, ಆ.12- ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಟ್ರೀ ಪಾರ್ಕ್‍ನಿಂದ ಮರಡಿಗುಡ್ಡದವರೆಗೆ ಸಾಹಸ ಕ್ರೀಡಾ ವಿಭಾಗದ `ಜಿಪ್‍ಲೈನ್’ ಚಟುವಟಿಕೆ ಆರಂಭಗೊಂಡಿದ್ದು, ಪಾಲ್ಗೊಂಡ ವರಿಗೆ ಅರಣ್ಯ ಪ್ರದೇಶದ ನಡುವೆ ತೇಲಿ ಹೋಗುವಂತಹ ಅನುಭವವನ್ನು ನೀಡು ತ್ತದೆ. `ವಿಶ್ವ ಆನೆಗಳ ದಿನ’ ಚಾಲನೆ ಪಡೆದಿ ರುವ ಈ `ಜಿಪ್‍ಲೈನ್’ ರಾಜ್ಯದಲ್ಲೇ ಅತ್ಯಂತ ದೊಡ್ಡ ಮಟ್ಟದ್ದಾಗಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಯ ಮುತ್ತತ್ತಿಯ ಭೀಮೇ ಶ್ವರಿಯಲ್ಲಿ ಅಳವಡಿಸಿರುವ `ಜಿಪ್‍ಲೈನ್’ ಗಿಂತ ಕೊಳ್ಳೇಗಾಲದ ಟ್ರೀ…

ಕೋವಿಡ್‍ನಿಂದ ಮೃತಪಟ್ಟ 171 ಮಂದಿಯ ಕುಟುಂಬಕ್ಕೆ ಶಾಸಕರಿಂದ ವೈಯಕ್ತಿಕ ಸಹಾಯ
ಚಾಮರಾಜನಗರ

ಕೋವಿಡ್‍ನಿಂದ ಮೃತಪಟ್ಟ 171 ಮಂದಿಯ ಕುಟುಂಬಕ್ಕೆ ಶಾಸಕರಿಂದ ವೈಯಕ್ತಿಕ ಸಹಾಯ

July 20, 2021

ಹನೂರು, ಜು.19(ಸೋಮು)- ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್‍ನಿಂದ ಮೃತಪಟ್ಟ 171 ಜನರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡುವುದರ ಮೂಲಕ ಆತ್ಮ ಸ್ಥೈರ್ಯದಿಂದ ಬದುಕುವಂತೆ ಧೈರ್ಯ ತುಂಬಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು. ತಾಲೂಕಿನ ಬಿದರಹಳ್ಳಿ, ಮಾರ್ಟಳ್ಳಿ, ಹೂಗ್ಯಂ, ಸತ್ಯಮಂಗಲ, ಮಾರಳ್ಳಿ ಹಾಗೂ ಈ ಭಾಗದ ಇನ್ನಿತರೆ ಗ್ರಾಮಗಳಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಕುಟುಂಬ ಸ್ಥರನ್ನು ಸೋಮವಾರ ಭೇಟಿ ಮಾಡಿ, ಸಾಂತ್ವನ ಹೇಳುವುದರ ಮೂಲಕ ವೈಯಕ್ತಿಕ ಪರಿ ಹಾರ ನೀಡಿ ಅವರು ಮಾತನಾಡಿದರು….

1 5 6 7 8 9 141
Translate »