ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಡಿಸಿ ಭೇಟಿ, ಪರಿಶೀಲನೆ
ಚಾಮರಾಜನಗರ

ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಡಿಸಿ ಭೇಟಿ, ಪರಿಶೀಲನೆ

August 15, 2021

ಚಾಮರಾಜನಗರ, ಆ.14- ಗುಂಡ್ಲು ಪೇಟೆ ತಾಲೂಕಿನ ಗಡಿಭಾಗದಲ್ಲಿರುವ ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶನಿವಾರ ಭೇಟಿ ನೀಡಿ ತಪಾಸಣಾ ಕಾರ್ಯವನ್ನು ಪರಿಶೀಲಿಸಿದರು.

ಅರಣ್ಯ ಭಾಗದ ಕೆಕ್ಕನಹಳ್ಳ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿ ವಾಹನಗಳ ತಪಾಸಣಾ ಕಾರ್ಯವನ್ನು ಪರಿಶೀಲನೆ ನಡೆಸಿದರು. ಚೆಕ್‍ಪೋಸ್ಟ್ ಮೂಲಕ ಹಾದುಹೋಗಿ ರುವ ವಾಹನಗಳು, ಸರಕು ಸಾಗಾಣೆ ವಾಹನಗಳ ವಿವರ ಪರಿಶೀಲಿಸಿದರು. ಆರ್‍ಟಿಪಿಸಿಆರ್ ವರದಿ ಹಾಜರುಪಡಿಸದ ಎಷ್ಟು ವಾಹನಗಳನ್ನು ವಾಪಸ್ ಕಳುಹಿಸ ಲಾಗಿದೆ ಎಂಬ ಬಗ್ಗೆಯೂ ವಿವರ ಪಡೆದರು.

ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆ ಯೊಳಗೆ ಮಾಡಿಸಿದ ಆರ್‍ಟಿಪಿಸಿಆರ್ ನೆಗೆಟಿವ್ ಇರುವ ವರದಿ ಹಾಜರು ಪಡಿಸ ಬೇಕಿದೆ. ಇಂತಹವರಿಗೆ ಮಾತ್ರ ಪ್ರವೇಶಕ್ಕೆ ಅನು ಮತಿ ನೀಡಬೇಕು ಎಂದು ಸೂಚಿಸಿದರು.

ಸರಕು ಸಾಗಿಸುವ ವಾಹನಗಳ ಚಾಲ ಕರು, ಸಹಾಯಕರು ಸೂಚಿಸಲಾಗಿರುವ ಅವಧಿಯೊಳಗೆ ಪರೀಕ್ಷೆ ಮಾಡಿಸಿರುವ ವರದಿಯನ್ನು ಪರಿಶೀಲಿಸಬೇಕು. ಕಡ್ಡಾಯ ವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಕೋವಿಡ್ ಲಸಿಕೆಯ 2 ಡೋಸ್ ಪಡೆದಿ ರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. 24×7 ಅವಧಿಯಲ್ಲಿಯೂ ಕಟ್ಟೆಚ್ಚರ ವಹಿಸಿ ವಾಹನ ಗಳ ಸಂಚಾರ ತಪಾಸಣಾ ಕಾರ್ಯವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಚೆಕ್‍ಪೋಸ್ಟ್ ಮೂಲಕ ಹಾದುಹೋಗುವ ಎಲ್ಲಾ ಬಗೆಯ ವಾಹನಗಳ ವಿವರ ದಾಖಲು ಮಾಡಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ. ಸಿ.ರವಿ, ತಹಶೀಲ್ದಾರ್ ರವಿಶಂಕರ್, ಇತರೆ ಅಧಿಕಾರಿಗಳು ಹಾಜರಿದ್ದರು.

Translate »