ಸ್ಥಳೀಯರಿಗೂ ಕೌಶಲ ತರಬೇತಿ ಲಭಿಸಲಿ: ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ

ಸ್ಥಳೀಯರಿಗೂ ಕೌಶಲ ತರಬೇತಿ ಲಭಿಸಲಿ: ಶಾಸಕ ಪುಟ್ಟರಂಗಶೆಟ್ಟಿ

August 15, 2021

ಚಾಮರಾಜನಗರ, ಆ.14- ಕೋವಿಡ್- 19ರ ಹಿನೆÀ್ನಲೆ ಯಲ್ಲಿ ಹಲವು ಕಾರ್ಖಾನೆ, ಖಾಸಗಿ ಕಂಪನಿಗಳು ಆರ್ಥಿಕ ನಷ್ಟದಿಂದ ಕಾರ್ಯ ಸ್ಥಗಿತಗೊಳಿಸಿದ್ದರಿಂದ ಅನೇಕರು ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಉದ್ಯೋಗ ಮೇಳವನ್ನು ಜಿಲ್ಲೆಯಲ್ಲಿ ಆಯೋಜಿಸಿ ರುವುದು ಅನುಕೂಲವಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಕೌಶಲ್ಯಾ ಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಗುರುವಾರ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಕಚೇರಿ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಿನಿ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಕೆಲವು ಕೈಗಾರಿಕೆಗಳಲ್ಲಿ ಉತ್ತಮ ಕೌಶಲ ಹೊಂದಿರುವ ಕಾರಣದಿಂದ ಹೊರ ಭಾಗದವರಿಗೆ ಉದ್ಯೋಗ ಲಭಿಸುತ್ತಿದೆ. ಸ್ಥಳೀಯರಿಗೂ ಉತ್ತಮ ಕೌಶಲ ತರಬೇತಿ ನೀಡುವ ಮೂಲಕ ಇಲ್ಲಿಯೇ ಉದ್ಯೋಗ ದೊರೆಯುವಂತಾದರೆ ನಿರುದ್ಯೋಗ ಸಮಸ್ಯೆ ಸಲ್ಪಮಟ್ಟಿ ಗಾದರೂ ಕಡಿಮೆಯಾಗುತ್ತದೆ. ಹೀಗಾಗಿ ಸ್ಥಳೀಯರಿಗೆ ಕೌಶಲ ತರಬೇತಿಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ವಿದ್ಯಾರ್ಹತೆಯೊಂದೇ ಉದ್ಯೋಗಕ್ಕೆ ಅವಕಾಶವಾಗುವುದಿಲ್ಲ. ವಿದ್ಯೆಯ ಜೊತೆಗೆ ಕೌಶಲ್ಯಾಭಿ ವೃದ್ಧಿಯೂ ಅವಶ್ಯಕವಾಗಿದೆ. ಕೌಶಲ ಪಡೆದುಕೊಂಡರೆ ಕೆಲಸ ಕಟ್ಟಿಟ್ಟ ಬುತ್ತಿ. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ದೊರೆಯುವ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಸ್ವಯಂ ಉದ್ಯೋಗಿಗಳಾಗಿ ಇನ್ನಿತರರಿಗೂ ಉದ್ಯೋಗ ನೀಡಿದರೆ ಅಭಿವೃದ್ಧಿ ಸಾಧಿಸುವುದು ಖಂಡಿತ ಎಂದು ತಿಳಿಸಿದರು. ನಗರಸಭಾ ಅಧ್ಯಕ್ಷೆ ಆಶಾ ನಟರಾಜು ಮಾತನಾಡಿದರು.

ಜಿಪಂ ಸಿಇಓ ಹರ್ಷಲ್ ಬೋಯರ್ ನಾರಾಯಣ್ ರಾವ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎ.ಮಹ ಮ್ಮದ್ ಅಕ್ಬರ್, ಪೌರಯುಕ್ತ ಕರಿಬಸವಯ್ಯ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಪ್ರಾಂಶುಪಾಲ ರಂಗಸ್ವಾಮಿ, ಗುಂಡ್ಲುಪೇಟೆ ಜಿಟಿಟಿಸಿ ಪ್ರಾಂಶುಪಾಲ ರಾಧಕೃಷ್ಣ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಶ್ರೀಕಾಂತ್ ಸತ್ಯನಾರಾಯಣ ಇತರರಿದ್ದರು. ಮೇಳದಲ್ಲಿ ಪೇ.ಟಿ.ಎಂ, ರಾನೆ, ಸಾತ್ವಿಕ್, ಯಂಗ್ ಇಂಡಿಯಾ ಫೌಂಡೇಷನ್, ಅಪೋಲೋ, ಯೂತ್ ಜಾಬ್ಸ್, ಟೆಕ್ನೋ ಟಾಸ್ಕ್ಸ್, ಇನ್ಸ್ಟಾಂಟ್ ಐ.ಟಿ.ಟೀಚ್, ವಿ.ಜಿ.ಬಿ, ರಾಜ್ ಬಯೋ, ಕಾವೇರಿ ಅಸೋಸಿಯೇಟ್ಸ್, ಇನ್ನಿತರ ಕಂಪನಿಗಳು ಭಾಗವಹಿಸಿದ್ದವು.

Translate »