ಕೊಳ್ಳೇಗಾಲದ ಟ್ರೀ ಪಾರ್ಕ್‍ನಲ್ಲಿ `ಜಿಪ್‍ಲೈನ್’ ಆರಂಭ
ಚಾಮರಾಜನಗರ

ಕೊಳ್ಳೇಗಾಲದ ಟ್ರೀ ಪಾರ್ಕ್‍ನಲ್ಲಿ `ಜಿಪ್‍ಲೈನ್’ ಆರಂಭ

August 13, 2021

ಕೊಳ್ಳೇಗಾಲ, ಆ.12- ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಟ್ರೀ ಪಾರ್ಕ್‍ನಿಂದ ಮರಡಿಗುಡ್ಡದವರೆಗೆ ಸಾಹಸ ಕ್ರೀಡಾ ವಿಭಾಗದ `ಜಿಪ್‍ಲೈನ್’ ಚಟುವಟಿಕೆ ಆರಂಭಗೊಂಡಿದ್ದು, ಪಾಲ್ಗೊಂಡ ವರಿಗೆ ಅರಣ್ಯ ಪ್ರದೇಶದ ನಡುವೆ ತೇಲಿ ಹೋಗುವಂತಹ ಅನುಭವವನ್ನು ನೀಡು ತ್ತದೆ. `ವಿಶ್ವ ಆನೆಗಳ ದಿನ’ ಚಾಲನೆ ಪಡೆದಿ ರುವ ಈ `ಜಿಪ್‍ಲೈನ್’ ರಾಜ್ಯದಲ್ಲೇ ಅತ್ಯಂತ ದೊಡ್ಡ ಮಟ್ಟದ್ದಾಗಿದ್ದು, ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಮಂಡ್ಯ ಜಿಲ್ಲೆಯ ಮುತ್ತತ್ತಿಯ ಭೀಮೇ ಶ್ವರಿಯಲ್ಲಿ ಅಳವಡಿಸಿರುವ `ಜಿಪ್‍ಲೈನ್’ ಗಿಂತ ಕೊಳ್ಳೇಗಾಲದ ಟ್ರೀ ಪಾರ್ಕ್-ಮರಡಿಗುಡ್ಡ `ಜಿಪ್‍ಲೈನ್’ ಹೆಚ್ಚು (200 ಮೀ.) ವಿಸ್ತಾರ ಹಾಗೂ 50 ಮೀಟರ್ ಎತ್ತರ ವಿದೆ. ಕೈಗೆಟುಕುವ ಪ್ರವೇಶ ದರ ನಿಗದಿ ಮಾಡಿದ್ದು, ಎಲ್ಲ ವರ್ಗದವರೂ ಸಾಹಸ ಕ್ರೀಡೆಯ ಅನುಭವ ಪಡೆಯಬಹುದಾಗಿದೆ.

20 ಲಕ್ಷ ವೆಚ್ಚ: ಮಲೆ ಮಹದೇಶ್ವರಬೆಟ್ಟ ವನ್ಯಧಾಮ ವ್ಯಾಪ್ತಿಗೆ ಒಳಪಡುವ ಕೊಳ್ಳೇ ಗಾಲ ವಲಯದಿಂದ ಮರಡಿಗುಡ್ಡದ ಕೆಳಗೆ 2 ವರ್ಷಗಳ ಹಿಂದೆಯೇ ಟ್ರೀ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಇದೀಗ ಮರಡಿ ಗುಡ್ಡಕ್ಕೆ 20 ಲಕ್ಷ ರೂ. ವೆಚ್ಚದಲ್ಲಿ ಜಿಪ್‍ಲೈನ್ ಅಳವಡಿಸಲಾಗಿದ್ದು, ಪ್ರವಾಸಿಗರಿಗೆ ಮತ್ತು ಮೈಸೂರು, ಚಾಮರಾಜನಗರ ಜಿಲ್ಲೆಗಳ ಜನರಿಗೆ ಮತ್ತೊಂದು ಆಕರ್ಷಣೆಯ ಕೇಂದ್ರವಾಗಲಿದೆ.

ಭದ್ರತೆಗೆ ಕ್ರಮ: ಮರಡಿಗುಡ್ಡದಲ್ಲಿ ನೈಸರ್ಗಿಕ ಪರಿಸರದಲ್ಲಿ ಜಿಪ್‍ಲೈನ್ ಅಳವಡಿಸಲಾಗಿದ್ದು, ಪ್ರವಾಸಿಗರ ಭದ್ರತೆಗೆ ಆದ್ಯತೆ ನೀಡಲಾ ಗಿದೆ. ಜಿಪ್‍ಲೈನ್‍ನಲ್ಲಿ ಸಾಹಸ ಅನುಭವ ಹೊಂದಲು ಬರುವವರಿಗೆ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಮಾರ್ಗ ಸೂಚಿಯನ್ನೂ ಅನುಸರಿಸಲಾಗುತ್ತಿದೆ. ಜಿಪ್‍ಲೈನ್‍ಗೆ ಡಬ್ಬಲ್ ಲಾಕ್ ಸಿಸ್ಟೆಂ ಅಳವಡಿಸ ಲಾಗಿದೆ. ತಲೆ ರಕ್ಷಣೆಗಾಗಿ ಉತ್ತಮ ಗುಣ ಮಟ್ಟದ ಹೆಲ್ಮೆಟ್ ನೀಡಲಾಗುತ್ತಿದೆ. ಪ್ರವಾಸಿ ಗರು ಜಿಪ್‍ಲೈನ್ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಘೋಷಣಾ ಪತ್ರವನ್ನು (ಡಿಕ್ಲರೇಷನ್ ಫಾರಂ) ಭರ್ತಿ ಮಾಡಿ ಸಹಿ ಹಾಕಬೇಕಿದೆ.

ಪ್ರತಿದಿನ ಜಿಪ್‍ಲೈನ್ ಭದ್ರತೆ ಪರಿಶೀಲಿಸ ಲೆಂದೇ ಕನ್ಸಲ್‍ಟೆಂಟ್ ಸಂಸ್ಥೆಯು ತಜ್ಞರೊಬ್ಬ ರನ್ನು ನೇಮಿಸಿದೆ. ಅರಣ್ಯ ಇಲಾಖೆ ಜಿಪ್ ಲೈನ್ ನಿರ್ವಹಣೆ ಮಾಡಿದರೂ, ತಾಂತ್ರಿಕ ಬೆಂಬಲವನ್ನು ಕನ್ಸಲ್‍ಟೆಂಟ್ ಸಂಸ್ಥೆ ಒದಗಿಸುತ್ತಿದೆ. ವಾರಕ್ಕೊಮ್ಮೆ ಜಿಪ್ ಸಿಸ್ಟಂ, ರೋಪ್ ತಪಾಸಣೆ ಮಾಡಲಾಗುತ್ತದೆ. ನಿತ್ಯವೂ ಆಪರೇಟರ್ಸ್ ಜಿಪ್‍ಲೈನ್ ಪರಿಶೀ ಲಿಸುತ್ತಾರೆ. ಟ್ರಯಲ್ ರನ್ ನಂತರವೇ ಪ್ರವಾಸಿಗರಿಗೆ ಅವಕಾಶ ಮಾಡಲಾಗುತ್ತದೆ. ರಾತ್ರಿ ಜಿಪ್‍ಲೈನ್ ಭದ್ರತೆಗಾಗಿ `ನೈಟ್ ಟೈಮ್ ಲಾಕ್ ಸ್ಟಿಸ್ಟೆಂ’ ಅಳವಡಿಸಲಾಗಿದೆ.

Translate »