ಸರಹದ್ದಿನ ಕಾದಾಟದಲ್ಲಿ ಹುಲಿ ಸಾವು
ಚಾಮರಾಜನಗರ

ಸರಹದ್ದಿನ ಕಾದಾಟದಲ್ಲಿ ಹುಲಿ ಸಾವು

August 14, 2021

ಚಾಮರಾಜನಗರ, ಆ.13-ವಾಸಸ್ಥಳದ ಸರಹದ್ದಿನ ಕಾದಾಟದಲ್ಲಿ ಹುಲಿಯೊಂದು ಸಾವನ್ನಪ್ಪಿ ರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ಕುಂದುಕೆರೆ ವಲಯದ ಮಂಗಲ ಶಾಖೆಯ ಎಲಚೆಟ್ಟಿ ಗಸ್ತಿನ ಆಲದಮರದಹಳ್ಳ ಅರಣ್ಯ ಪ್ರದೇಶದ ಬಳಿ ಸುಮಾರು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಸದರಿ ಹುಲಿಯು ಬೇರೊಂದು ಹುಲಿಯ ಜೊತೆ ಕಾದಾಟದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಕಳೇಬರ ಮರೋಣೋತ್ತರ ಪರೀಕ್ಷೆ ವೇಳೆ ಹುಲಿಯ ದೇಹದಲ್ಲಿ ತೀವ್ರ ಗಾಯ ಗಳಾಗಿರುವುದು ಪತ್ತೆಯಾಗಿದೆ. ಹುಲಿಯ ಉಗುರು, ಹಲ್ಲುಗಳು ಹಾಗೂ ಇತರ ಅಂಗಾಂಗಳು ಸುರಕ್ಷಿತವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಶುವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಹಾಗೂ ಡಾ.ಸನತ್ ಮೃತ ಹುಲಿ ಶವ ಪರೀಕ್ಷೆ ನಡೆಸಿದರು. ಬಳಿಕ ನಿಯಮವಳಿಯಂತೆ ಮೃತ ಹುಲಿಯನ್ನು ಸುಡಲಾಯಿತು. ಎನ್‍ಟಿಸಿಎ ಪ್ರತಿನಿಧಿಗಳಾದ ಕೃತಿಕಾ ಆಲನಹಳ್ಳಿ, ವನ್ಯಜೀವಿ ಪರಿಪಾಲಕ ನಂಜುಂಡರಾಜೇಅರಸ್, ಗ್ರಾಪಂ ಅಧ್ಯಕ್ಷ ಸುದರ್ಶನ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿದ್ದರು.

Translate »