ಮೂಲೆಹೊಳೆ ಚೆಕ್‍ಪೋಸ್ಟ್‍ನಲ್ಲಿ ತಪಾಸಣಾ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ
ಚಾಮರಾಜನಗರ

ಮೂಲೆಹೊಳೆ ಚೆಕ್‍ಪೋಸ್ಟ್‍ನಲ್ಲಿ ತಪಾಸಣಾ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

August 21, 2021

ಚಾಮರಾಜನಗರ, ಆ.19-ಗುಂಡ್ಲು ಪೇಟೆ ತಾಲೂಕಿನ ಗಡಿಭಾಗದಲ್ಲಿರುವ ಮೂಲೆಹೊಳೆ ಚೆಕ್‍ಪೋಸ್ಟ್‍ಗೆ ಜಿಲ್ಲಾಧಿ ಕಾರಿ ಡಾ.ಎಂ.ಆರ್.ರವಿ ಇಂದು ಭೇಟಿ ನೀಡಿ ತಪಾಸಣಾ ಕಾರ್ಯ ಪರಿಶೀಲಿಸಿದರು.

ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣ ಗಳ ಸಂಖ್ಯೆ ಏರುಗತಿಯಲ್ಲಿ ಇರುವುದರಿಂದ ಗಡಿ ಭಾಗಗಳಲ್ಲಿ ಕಟ್ಟೆಚ್ಚೆರ ವಹಿಸಲಾಗಿದ್ದು, ಗಡಿಭಾಗದ ಚೆಕ್‍ಪೋಸ್ಟ್‍ಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೂಲೆಹೊಳೆ ಚೆಕ್‍ಪೋಸ್ಟ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಬಹಳ ಹೊತ್ತು ಅಲ್ಲಿಯೇ ಇದ್ದು ವಾಹನಗಳ ತಪಾಸಣಾ ಕಾರ್ಯ ಸೂಕ್ಷ್ಮವಾಗಿ ವೀಕ್ಷಿಸಿದರು.

ಚೆಕ್‍ಪೋಸ್ಟ್ ಮೂಲಕ ಸಂಚರಿಸುತ್ತಿ ರುವ ವಾಹನಗಳ ನಮೂದು ವಿವರವನ್ನು ದಾಖಲು ಮಾಡಿರುವ ವಹಿಯನ್ನು ಜಿಲ್ಲಾಧಿ ಕಾರಿ ಪರಿಶೀಲಿಸಿದರು. ಪ್ರತಿದಿನ ಚೆಕ್ ಪೋಸ್ಟ್ ಮೂಲಕ ಹಾದು ಹೋಗಿರುವ ಎಲ್ಲಾ ಬಗೆಯ ವಾಹನಗಳು, ಪ್ರಯಾ ಣಿಕರ ಸಂಖ್ಯೆ ಇನ್ನಿತರ ವಿವರಗಳನ್ನು ಪಡೆದುಕೊಂಡರು.

ಪ್ರಯಾಣಿಕರು ಪಡೆದಿರುವ ಆರ್‍ಟಿಪಿ ಸಿಆರ್ ನೆಗೆಟಿವ್ ವರದಿಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಚಕ್‍ಪೋಸ್ಟ್ ಸಿಬ್ಬಂದಿಗೆ ಸೂಚಿಸಿದರು. ಪ್ರಯಾಣದ ಆರಂಭದ ಲ್ಲಿಯೇ 72 ಗಂಟೆಯೊಳಗೆ ಮಾಡಿಸಿದ ಆರ್‍ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು ಎಂಬುದನ್ನು ಕಟ್ಟುನಿಟ್ಟಾಗಿ ತಿಳಿಸಬೇಕು ಎಂದು ಜಿಲ್ಲಾ ಧಿಕಾರಿ ತಾಕೀತು ಮಾಡಿದರು.

ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ಕ್ರಮಗಳೊಂ ದಿಗೆ ತಪಾಸಣಾ ಕಾರ್ಯ ಕೈಗೊಳ್ಳಬೇಕು. ಯಾವುದೇ ಲೋಪಗಳಿಗೆ ಅವಕಾಶವಾಗಬಾ ರದು. ಅಗತ್ಯ ದಾಖಲೆ ಹಾಜರು ಪಡಿಸದಿ ದ್ದಲ್ಲಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡ ಬಾರದು ಎಂದು ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಚೆಕ್‍ಪೋಸ್ಟ್ ಅಧಿಕಾರಿ, ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿ ಶಂಕರ್, ಪೊಲೀಸ್ ಇನ್ಸ್‍ಪೆಕ್ಟರ್ ಮಹ ದೇವಸ್ವಾಮಿ, ಇತರೆ ಅಧಿಕಾರಿಗಳಿದ್ದರು.

Translate »