ಕೋವಿಡ್ 3ನೇ ಅಲೆ ಆತಂಕ: ಮಿಟ್ಸುಬಿಶಿ ಕಂಪನಿಯಿಂದ  ಜಿಲ್ಲಾಡಳಿತಕ್ಕೆ ಆಧುನಿಕ ವೈದ್ಯಕೀಯ ಉಪಕರಣಗಳ ಕೊಡುಗೆ
ಮೈಸೂರು

ಕೋವಿಡ್ 3ನೇ ಅಲೆ ಆತಂಕ: ಮಿಟ್ಸುಬಿಶಿ ಕಂಪನಿಯಿಂದ ಜಿಲ್ಲಾಡಳಿತಕ್ಕೆ ಆಧುನಿಕ ವೈದ್ಯಕೀಯ ಉಪಕರಣಗಳ ಕೊಡುಗೆ

August 20, 2021

ಮೈಸೂರು,ಆ.19(ಆರ್‍ಕೆಬಿ)- ಕೋವಿಡ್ 3ನೇ ಅಲೆ ಎದುರಿಸಲು ಅಗತ್ಯ ವೈದ್ಯ ಕೀಯ ಉಪಕರಣಗಳನ್ನು ಮಿಟ್ಸುಬಿಶಿ ಹೆವಿ ಇಂಡಸ್ಟ್ರೀಸ್ -ವಿಎಸ್‍ಟಿ ಡೀಸೆಲ್ ಇಂಜಿನ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್ ಫಂಡ್) ನಿಧಿಯಡಿ ಆಧು ನಿಕ ವೈದ್ಯಕೀಯ ಉಪಕರಣಗಳನ್ನು ಗುರುವಾರ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಹಸ್ತಾಂತರಿಸಿದರು.

10 ಲೀಟರ್ ಸಾಮಥ್ರ್ಯದ 20 ಸರ್ಜಿ ಕಲ್ ಆಕ್ಷಿಜನ್ ಕಾನ್ಸನ್‍ಟ್ರೇಟರ್, 12 ಇಸಿಜಿ ಯಂತ್ರ, 3 ಪೋರ್ಟಬಲ್ ಎಕ್ಸ್‍ರೇ ಯಂತ್ರ ಸೇರಿದಂತೆ ಹಲವು ಆಧುನಿಕ ವೈದ್ಯಕೀಯ ಉಪಕರಣಗಳನ್ನು ಕಂಪನಿಯ ವ್ಯವ ಸ್ಥಾಪಕ ನಿರ್ದೇಶಕರೂ ಆಗಿರುವ ಸಿಎಸ್‍ಆರ್ ಸಮಿತಿ ಛೇರ್ಮನ್ ರಿಯುಜಿ ನಗಸೆ, ಹಿರಿಯ ಪ್ರಧಾನ ವ್ಯವಸ್ಥಾಪಕ ಶಿನ್ಸುಕೆ ಉಮೆಹರ ಅವರು ಜಿಲ್ಲಾಧಿ ಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕೋವಿಡ್ ಪ್ರಕರಣಗಳು ಕಡಿಮೆಯಾಗಿದೆ ಎಂದು ಸಾರ್ವಜನಿಕರು ಮೈ ಮರೆಯ ಬೇಡಿ. ಈ ನಡುವೆ 3ನೇ ಅಲೆ ಬರು ತ್ತದೆಂಬ ಬಗ್ಗೆ ಆತಂಕವೂ ಇದೆ. ಹಾಗಾಗಿ ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರ ಇನ್ನಿತರೆ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಬ್ಬದ ಪ್ರಯುಕ್ತ ದೇವರಾಜ ಮಾರು ಕಟ್ಟೆಯಲ್ಲಿ ಜನರು ದೈಹಿಕ ಅಂತರ ಪಾಲಿ ಸದೆ ಗುಂಪಾಗಿ ಸೇರುತ್ತಿದ್ದಾರೆ. ಕಾಲೇಜು ಗಳಲ್ಲಿ ಈಗಾಗಲೇ ತರಗತಿಗಳು ನಡೆಯು ತ್ತಿದ್ದು, ಕಾಲೇಜುಗಳು ಬಿಟ್ಟ ತಕ್ಷಣ ಹುಡು ಗರು ಗುಂಪು ಸೇರಿಕೊಳ್ಳುತ್ತಾರೆಂಬ ಮಾಹಿತಿ ಗಮನಕ್ಕೆ ಬಂದಿದೆ. ಇದರಿಂದ ಕೋವಿಡ್ ಸೋಂಕು ಬಹು ಬೇಗ ತÀಲುಪುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದರ ಬಗ್ಗೆ ನಗರ ಪಾಲಿಕೆಯ ಆಯುಕ್ತರು ಹಾಗೂ ಕಾಲೇಜು ಪ್ರಾಂಶುಪಾಲರೊಂದಿಗೆ ಮಾತನಾಡಿ, ಹೆಚ್ಚಿನ ನಿಗಾ ಇಡುವಂತೆ ಸೂಚಿಸುವುದಾಗಿ ತಿಳಿಸಿ ದರು. ಈ ಸಂದರ್ಭದಲ್ಲಿ ಸಿಎಸ್‍ಆರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Translate »