ಮಾಜಿ ಶಾಸಕ ಸಿ.ಗುರುಸ್ವಾಮಿ ಸ್ಮಾರಕ ಅನಾವರಣ
ಚಾಮರಾಜನಗರ

ಮಾಜಿ ಶಾಸಕ ಸಿ.ಗುರುಸ್ವಾಮಿ ಸ್ಮಾರಕ ಅನಾವರಣ

August 20, 2021

ಚಾಮರಾಜನಗರ, ಆ.19(ಎಸ್‍ಎಸ್)- ಮಾಜಿ ಶಾಸಕ ಸಿ.ಗುರುಸ್ವಾಮಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯ ಕ್ರಮ ತಾಲೂಕಿನ ಯಾನಗಹಳ್ಳಿ ಗ್ರಾಮದ ಬಳಿಯ ಅಚ್ಚಟ್ಟಿಪುರ ತೋಟದಲ್ಲಿ ಗುರುವಾರ ನಡೆಯಿತು.

ಅಚ್ಚೆಟ್ಟಿಪುರ ತೋಟದಲ್ಲಿರುವ ಸಿ.ಗುರು ಸ್ವಾಮಿ ಅವರ ಸಮಾಧಿ ಸ್ಥಳದಲ್ಲಿ ಭವ್ಯವಾಗಿ ನಿರ್ಮಿಸಿರುವ ಸ್ಮಾರಕವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿ ಪುಷ್ಪ ನಮನ ಸಲ್ಲಿಸಿ ದರು. ಈ ವೇಳೆ ಗುರುಸ್ವಾಮಿ ಅವರ ಕುಟುಂಬ ಸ್ಥರು ಭಾವುಕರಾದರು. ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಜನರು ಪಕ್ಷಾತೀತವಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ಮಲ್ಲನಮೂಲೆ ಮಠದ ಶ್ರೀಚನ್ನಬಸವ ಸ್ವಾಮೀಜಿ, ಮರೆಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಚಾಮರಾಜನಗರದ ಮಠದ ಶ್ರೀಚನ್ನ ಬಸವ ಸ್ವಾಮೀಜಿ, ಅರಕಲವಾಡಿ ಮಠದÀ ಶ್ರೀಬಸವಣ್ಣ ಸ್ವಾಮೀಜಿ, ಪಡಗೂರು ಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಸೇರಿ ದಂತೆ ಅನೇಕ ಹರಗುರು ಚರಮೂರ್ತಿ ಗಳು ಭಾಗವಹಿಸಿದ್ದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸಿ.ಎಸ್. ನಿರಂಜನಕುಮಾರ್, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಚೂಡಾ ಅಧ್ಯಕ್ಷ ಶಾಂತಮೂರ್ತಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಸುಂದರ್, ಅಪರ ಜಿಲ್ಲಾಧಿ ಕಾರಿ ಕಾತ್ಯಾಯಿನಿದೇವಿ, ಸಿ.ಗುರುಸ್ವಾಮಿ ಅವರ ಪತ್ನಿ ಶೀಲಾ ಗುರುಸ್ವಾಮಿ, ಪುತ್ರಿ ಯರಾದ ಜಿ.ನಾಗಶ್ರೀ ಪ್ರತಾಪ್, ನವ್ಯಶ್ರೀ, ಅಳಿಯ ಹಾಗೂ ಉದ್ಯಮಿ ಪ್ರತಾಪ್, ಮೈ ಮುಲ್ ಮಾಜಿ ನಿರ್ದೇಶಕ ಹೆಚ್.ಎಸ್. ಬಸವರಾಜು, ಮುಖಂಡರಾದ ಆರ್.ಎಂ. ಸ್ವಾಮಿ, ಎ.ಎಸ್.ಗುರುಸ್ವಾಮಿ, ಪಿ.ವೃಷ ಭೇಂದ್ರ, ಕೊತ್ತಲವಾಡಿ ಸೋಮಲಿಂಗಪ್ಪ, ಗುರುಸ್ವಾಮಿ, ಬಿ.ಕೆ.ರವಿಕುಮಾರ್ ಅವರ ಸಹೋದರರಾದ ಲಿಂಗರಾಜು, ವೃಷ ಭೇಂದ್ರಪ್ಪ, ಯೋಗೇಶ್ವರಿ, ತಮ್ಮಡಹಳ್ಳಿ ರವಿಶಂಕರ್, ಶಮಿತ್ ಕುಮಾರ್, ಪಂಜು, ಕೆಲ್ಲಂಬಳ್ಳಿ ಸೋಮಶೇಖರ್, ಹಿರೇಬೇಗೂರು ಗುರುಸ್ವಾಮಿ, ಮುಡ್ನಕೂಡು ಮಹೇಶ್, ನಾರಾಯಣ ಪ್ರಸಾದ್, ಮಂಗಲ ಶಿವ ಕುಮಾರ್ ಇತರರು ಭಾಗವಹಿಸಿದ್ದರು.

Translate »