ಕೋವಿಡ್‍ನಿಂದ ಮೃತಪಟ್ಟ ಮಹಿಳೆಯ ಮೊಬೈಲ್ 3 ತಿಂಗಳ ನಂತರ ಪತ್ತೆ..!
ಕೊಡಗು

ಕೋವಿಡ್‍ನಿಂದ ಮೃತಪಟ್ಟ ಮಹಿಳೆಯ ಮೊಬೈಲ್ 3 ತಿಂಗಳ ನಂತರ ಪತ್ತೆ..!

August 20, 2021

ಮಡಿಕೇರಿ, ಆ.19- ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ.16ರಂದು ಮೃತಪಟ್ಟ ಮಹಿಳೆಯೊಬ್ಬರ ಮೊಬೈಲ್ ಫೋನ್ ಕಳುವಾದ 3 ತಿಂಗಳು 3 ದಿನಗಳ ಬಳಿಕ ಪತ್ತೆಯಾಗಿದೆ.

ತಾಯಿಯನ್ನು ಕಳೆದುಕೊಂಡು ಆಕೆಯ ನೆನಪಿ ನಲ್ಲೇ ಕೊರಗುತ್ತಿದ್ದು, ಮೃತರ ಪುಟ್ಟ ಮಗಳು ಹೃತಿಕ್ಷಾ ಮನಸಿಗೆ ಸಾಂತ್ವಾನ ದೊರಕಿದೆ. ಆ ಮೂಲಕ ಮೊಬೈಲ್ ಕಳವು ಪ್ರಕರಣದ ನೋವಿನ ವ್ಯಥೆಯ ಕಥೆಯೂ ಸುಖಾಂತ್ಯ ಕಂಡಿದೆ. ಕೋವಿಡ್ ಆಸ್ಪತ್ರೆಯ ವೈದ್ಯಾಧಿ ಕಾರಿಯೊಬ್ಬರು ಈ ಮೊಬೈಲ್ ಪತ್ತೆಯಾದ ಬಗ್ಗೆ ಮಡಿಕೇರಿ ನಗರ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಯಿಂದ ಮೊಬೈಲ್ ತಂದಿದ್ದಾರೆ. ಆದರೆ ಕಳುವಾದ ಮೊಬೈಲ್ 3 ತಿಂಗಳ ಬಳಿಕ ಪತ್ತೆಯಾ ಗಿದ್ದು ಹೇಗೆ ಎಂಬುದರ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಮೊಬೈಲ್‍ನಲ್ಲಿರುವ ಐಎಂಐ ಸಂಖ್ಯೆಯನ್ನು ಆಧರಿಸಿ ಕಳುವಾದ ಮೊಬೈಲ್ ಇದೇ ಎಂದು ಪೊಲೀಸ್ ಇಲಾಖೆ ಖಚಿತಪಡಿಸಿದ ಬಳಿಕ ಮೊಬೈಲ್ ಅನ್ನು ಮೃತರ ಮಗಳು ಹೃತಿಕ್ಷಾಳಿಗೆ ಹಸ್ತಾಂ ತರ ಮಾಡಲಾಯಿತು. ನಗರ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರು ಹೃತಿಕ್ಷಾ ಳಿಗೆ ಮೊಬೈಲ್ ಹಸ್ತಾಂತರ ಮಾಡಿದರು.

ಏನಿದು ಪ್ರಕರಣ: ಕುಶಾಲನಗರ ಗುಮ್ಮನಕೊಲ್ಲಿ ಬಸಪ್ಪ ಬಡಾವಣೆ ನಿವಾಸಿ ಮೇ.6ರಂದು ಕೋವಿಡ್ ಸೋಂಕು ತಗುಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ದ್ದರು. ಆದರೆ ಮೇ.16ರಂದು ಬೆಳಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದರು. ಈ ಸಂದರ್ಭ ಮೃತರ ಎಲ್ಲಾ ವಸ್ತು ಗಳನ್ನು ಅವರ ವಾರಸುದಾರರಿಗೆ ನೀಡಲಾಗಿತ್ತು. ಆದರೆ ಅವರ ಬಳಿ ಇದ್ದ ಮೊಬೈಲ್ ಕಾಣೆಯಾಗಿದ್ದು, ಬೇಸರ ಗೊಂಡ ಮೃತರ ಪುತ್ರಿ ಹೃತಿಕ್ಷಾ ಸಾಮಾಜಿಕ ಜಾಲ ತಾಣದಲ್ಲಿ ತಾಯಿಯ ಮೊಬೈಲ್ ಹುಡುಕಿ ಕೊಡುವಂತೆ ಮನವಿ ಮಾಡಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂ ತೆಯೇ ಸಾರ್ವಜನಿಕರಿಂದ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯ ಬಗ್ಗೆ ತೀವ್ರ ಆಕ್ರೋಷ ವ್ಯಕ್ತವಾಗಿತ್ತು.

ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕೋವಿಡ್ ಆಸ್ಪತ್ರೆ ಆಡಳಿತ ಮಂಡಳಿ ಮೊಬೈಲ್ ಹುಡುಕಾಟದಲ್ಲಿ ತೊಡಗಿದ್ದವು. ಈ ಘಟನೆ ಬಗ್ಗೆ ಮೃತರ ಪತಿ ಟಿ.ಆರ್.ನವೀನ್‍ಕುಮಾರ್ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದ್ದರು. ಈ ವಿಚಾರ ರಾಷ್ಟ್ರ ವ್ಯಾಪಿ ವೈರಲ್ ಆದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳು ಆಯೋಗ ಜಿಲ್ಲಾ ಪೊಲೀಸ್ ಇಲಾಖೆಗೆ ನೋಟೀಸ್ ಜಾರಿ ಮಾಡಿತ್ತು. ತಕ್ಷಣವೇ ಈ ಬಗ್ಗೆ ಮಡಿಕೇರಿ ನಗರ ಪೊಲೀಸರು ಸುಮೋಟೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಜಿಲ್ಲಾ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳ ವಿಚಾ ರಣೆಯೂ ನಡೆದಿತ್ತು. ಬಾಲಕಿಯ ಮನಕಲಕುವ ಮನವಿ ಜಿಲ್ಲಾಡಳಿತದ ನಿದ್ದೆಗೆಡಿಸಿತ್ತಲ್ಲದೇ, ಕಾಣೆಯಾಗಿರುವ ಮೊಬೈಲ್ ಅನ್ನು ಹುಡುಕಿಸಿ ಕೊಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Translate »