ಅಪರಿಚಿತ ವಾಹನ ಡಿಕ್ಕಿ; ಜಿಂಕೆಗೆ ಗಾಯ
ಕೊಡಗು

ಅಪರಿಚಿತ ವಾಹನ ಡಿಕ್ಕಿ; ಜಿಂಕೆಗೆ ಗಾಯ

August 20, 2021

ಕುಶಾಲನಗರ, ಆ.19- ಹೆಬ್ಬಾಲೆ-ಸೋಮವಾರಪೇಟೆ-ಬಾಣವಾರ ರಸ್ತೆಯ ಬೈರಪ್ಪನಗುಡಿ ಸಮೀಪದ ಮುಖ್ಯ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿ ಣಾಮ ಜಿಂಕೆಯ ಬಲ ಕಾಲಿಗೆ ಪೆಟ್ಟಾಗಿದೆ.

ಮಂಗಳವಾರ ಬೆಳಗ್ಗೆ ಕಾಡಿನಂಚಿನಿಂದ ರಸ್ತೆ ದಾಟಿ ಹೋಗುವ ಸಂದರ್ಭದಲ್ಲಿ ವಾಹನ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ವಾಗಿ ಬಲಗಾಲಿಗೆ ಗಾಯವಾಗಿದ್ದು, ರಸ್ತೆಯ ಒಂದು ಬದಿಯಲ್ಲಿ ಬಿದ್ದು ಕಿರುಚುತ್ತಿದ್ದ ಸಂದರ್ಭ ಸ್ಥಳೀಯರು ಬಾಣಾವರದ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಸ್ಧಳಕ್ಕೆ ಆಗಮಿಸಿ ಗಾಯಗೊಂಡ ಮೂರು ವರ್ಷ ಪ್ರಾಯದ ಜಿಂಕೆಯನ್ನು ಬಾಣವಾರ ಉಪ ವಲಯ ಅರಣ್ಯ ಕೇಂದ್ರಕ್ಕೆ ಒಯ್ದು ಪ್ರಥಮ ಚಿಕಿತ್ಸೆ ನೀಡಿ ನಂತರ ಸೋಮವಾರಪೇಟೆ ತಾಲೂಕು ಅರಣ್ಯ ಕೇಂದ್ರದಲ್ಲಿ ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಶಮನಾ ಅವರ ಸೂಚನೆ ಯಂತೆ ಬಾಣಾವರ ಮೀಸಲು ಅರಣ್ಯ ಪ್ರದೇಶಕ್ಕೆ ಜಿಂಕೆಯನ್ನು ಬಿಡಲಾಯಿತು.

ಈ ಸಂದರ್ಭ ಬಾಣಾವರ ಉಪ ವಲಯದ ಅರಣ್ಯ ಅಧಿಕಾರಿ ಪುನೀತ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Translate »