ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ: ಮಾರುಕಟ್ಟೆಯಲ್ಲಿ ಕಾಣದ ಕೋವಿಡ್ ಭೀತಿ
ಚಾಮರಾಜನಗರ

ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಭರಾಟೆ: ಮಾರುಕಟ್ಟೆಯಲ್ಲಿ ಕಾಣದ ಕೋವಿಡ್ ಭೀತಿ

August 20, 2021

ಚಾಮರಾಜನಗರ, ಆ.19(ಎಸ್‍ಎಸ್)- ಕಮಲಪ್ರಿಯೆ ವರಮಹಾಲಕ್ಷ್ಮಿ ಹಬ್ಬ ಶುಕ್ರ ವಾರ ನಡೆಯಲಿದ್ದು, ನಗರ ವ್ಯಾಪ್ತಿಯ ಮಾರು ಕಟ್ಟೆಗಳಲ್ಲಿ ಗುರುವಾರ ಜನಜಂಗುಳಿ ನಿರ್ಮಾಣ ವಾಗಿತ್ತು. ಪೂಜಾ ಸಾಮಗ್ರಿ ಖರೀದಿಸಲು ನಾಗರಿಕರು ಮುಗಿಬಿದ್ದರು. ವ್ಯಾಪಾರ ಭರಾಟೆ ಜೋರಾಗಿ ನಡೆಯಿತು.

ಪ್ರತಿ ವರ್ಷವೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಸಂಭ್ರಮದಿಂದ ನಡೆಯುವ ಹಬ್ಬದ ಮೇಲೆ ಕಳೆದ ವರ್ಷ ಕೊರೊನಾ ಕರಿನೆರಳು ಬಿದ್ದಿತ್ತು. ಆದರೆ, ಈ ಬಾರಿ ಅಂತಹ ಸ್ಥಿತಿ ಇಲ್ಲ. ಜನರು ವಸ್ತುಗಳನ್ನು ಖರೀದಿಸಲು ಉತ್ಸಾಹ ತೋರಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿ ಮುಖದ ಹಾದಿಯಲ್ಲಿ ಇರುವ ಕಾರಣ ಯಾರಲ್ಲೂ ಭೀತಿ ಕಾಣಲಿಲ್ಲ.

ಹೂವು, ಹಣ್ಣು, ಕಾಯಿ, ಎಲೆ, ಬಾಳೆ ದಿಂಡು, ಹೊಂಬಾಳೆ ಸೇರಿ ಇತರೆ ಪೂಜಾ ಸಾಮಗ್ರಿ ಖರೀದಿಸಲು ಹಲವೆಡೆ ನಾಗರಿಕರು ಮುಂದಾದರು. ಮನೆಯ ಬಾಗಿಲು, ದೇವರ ಕೋಣೆ, ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿ ಸುವ ಕಳಸ ಸಿಂಗರಿಸಲು ವಿವಿಧ ಬಗೆಯ ಹೂ, ಹಾರಗಳನ್ನು ಕೊಳ್ಳಲು ಆಸಕ್ತಿ ತೋರಿ ದರು. ಆದರೆ, ಬೆಲೆ ಹೆಚ್ಚಿದ್ದರಿಂದ ಖರೀದಿ ಪ್ರಮಾಣ ಕಡಿಮೆ ಮಾಡಿಕೊಂಡರು.

ವರಮಹಾಲಕ್ಷ್ಮಿ ವ್ರತ ಮಹಿಳೆಯರು ಸಂಭ್ರಮದಿಂದ ಆಚರಿಸುವ ಹಬ್ಬ. ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸುವ ಪರಂಪರೆ ಇದೆ. ವಿಶೇಷ ಮಂಟಪ ನಿರ್ಮಿಸಿ ಅದ್ಧೂರಿಯಾಗಿ ಹಬ್ಬ ಆಚರಿಸಲು ಮಹಿಳೆ ಯರು ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ಗಗನಕ್ಕೇರಿದ ಪುಷ್ಪ ದರ: ಕುಸಿದು ಹೋಗಿದ್ದ ಹೂವಿನ ಬೆಲೆ ದಿಢೀರನೆ ಗಗನಕ್ಕೇರಿದ್ದು, ಗ್ರಾಹಕರಿಗೆ ಬಿಸಿ ತಟ್ಟಿದೆ. ಮಾರುಕಟ್ಟೆಗಳಲ್ಲಿ ಒಂದು ಕೆ.ಜಿ. ಸೇವಂತಿ ಹೂವಿಗೆ 250ರೂ., ಮಲ್ಲಿಗೆ 1000ರೂ. ಇದ್ದು ಕನಕಾಂಬರಿ 1200 ರೂ., ಗುಲಾಬಿ 250 ರೂ., ಸುಗಂಧ ರಾಜ 200 ರೂ. ಒಂದು ತಾವರೆ ಹೂವಿಗೆ 20 ರೂ. ಇದ್ದು, ಡೇರಾಗೆ 15 ರೂ. ಬೆಲೆ ಇದೆ. ಇಲ್ಲಿಯ ತನಕ ಸೊರಗಿದ್ದ ಮಾರಾಟ ಗಾರರು ಹಬ್ಬ ಬಂದ ಹಿನ್ನೆಲೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲ ವರು ಬೇರೆಯವರಿಂದ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಏಲಕ್ಕಿ ಬಾಳೆಹಣ್ಣಿಗೆ 60 ರೂ., ಪಚ್ಚಬಾಳೆ ಹಣ್ಣಿಗೆ 50 ರೂ., ಮಾರಾಟ ಮಾಡುತ್ತಿದ್ದಾರೆ.

ಒಂದು ಕೆ.ಜಿ. ಸೇಬು 140 ರಿಂದ 150, ದ್ರಾಕ್ಷಿ 140 ರಿಂದ 160, ಮೋಸಂಬೆ 60 ರಿಂದ 80, ಕಿತ್ತಳೆ ಹಣ್ಣು 100 ರಿಂದ 120, ಸಪೆÇೀಟ 80 ರಿಂದ 100, ದಾಳಿಂಬೆ 100 ರಿಂದ 120 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ಲಕ್ಷ್ಮಿದೇವಿ ಮೂರ್ತಿ, ಕಳಶಕ್ಕೆ ಹಾಕುವ ಹಾರ 100ರಿಂದ 500ರೂ., ಕಮಲದ ಹೂವು 40ರಿಂದ 60, ವೀಳ್ಯದ ಎಲೆ ಕಟ್ಟಿಗೆ 80, ಮಾವಿನ ಸೊಪ್ಪು 10 ರಿಂದ 20, ಬಾಳೆ ದಿಂಡು ಜೋಡಿಗೆ 20, ತೆಂಗಿನಕಾಯಿ 20ರಿಂದ 30 ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ.

ಬಾಕ್ಸ್…

Translate »