ಚಾಮರಾಜನಗರ, ಆ.23(ಎಸ್‍ಎಸ್)- ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಒಂದೂ ವರೆ ವರ್ಷದಿಂದ ಸ್ಥಗಿತವಾಗಿದ್ದ ಪ್ರೌಢಶಾಲಾ, ಕಾಲೇಜು ತರಗತಿಗಳು ಪುನರಾರಂಭವಾ ಗಿದ್ದು, ಪ್ರಥಮ ದಿನವಾದ ಸೋಮವಾರ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು.
9ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಭೌತಿಕ ತರಗತಿ ಗಳಿಗೆ ಖುಷಿಯಿಂದ ತೆರಳಿದರು. ಬಹಳ ತಿಂಗಳ ಬಳಿಕ ಸಹಪಾಠಿ, ಶಿಕ್ಷಕರನ್ನು ಭೇಟಿಯಾದ ಸಂತಸ ವಿದ್ಯಾರ್ಥಿಗಳ ಮೊಗದಲ್ಲಿ ಕಂಡುಬಂದಿತು.
ಎರಡು ದಿನಗಳ ಮೊದಲೇ ಸ್ವಚ್ಛಗೊಂಡು, ಸ್ಯಾನಿಟೈಜ್ ಆಗಿದ್ದ ಶಾಲಾವರಣವನ್ನು ತಳಿರು, ತೋರಣಗಳಿಂದ ಸಿಂಗಾರಗೊಳಿಸ ಲಾಗಿತ್ತು. ಶಿಕ್ಷಕರು ಮತ್ತು ಸಿಬ್ಬಂದಿ ಮಕ್ಕಳನ್ನು ಶಾಲಾ, ಕಾಲೇಜು ಪ್ರವೇಶದ್ವಾರದಲ್ಲೇ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು.
ಶಾಲಾ, ಕಾಲೇಜು ತರಗತಿ ಆರಂಭದ ಪ್ರಥಮ ದಿನವಾಗಿದ್ದ ಕಾರಣ ಬಹುತೇಕ ಪೆÇೀಷಕರು ತಮ್ಮ ಮಕ್ಕಳನ್ನು ತಾವೇ ಕರೆತಂದು ಬಿಟ್ಟು ಮನೆಗೆ ಮರಳಿದರು. ಅಲ್ಲದೇ, ಎಚ್ಚರ ವಹಿಸಲು ಸಲಹೆ ನೀಡಿ ದರು. ಹಾಜರಾತಿ ಅರ್ಧಕ್ಕಿಂತ ಹೆಚ್ಚಿತ್ತು.
ಪರಸ್ಪರ ಅಂತರ, ಮಾಸ್ಕ್ ಕಡ್ಡಾಯ, ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಿ ವಿದ್ಯಾರ್ಥಿಗಳನ್ನು ಕೊಠಡಿ ಗಳ ಒಳಗೆ ಬಿಡಲಾಯಿತು. ಒಂದು ಡೆಸ್ಕ್‍ಗೆ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿತ್ತು.
ಕೋವಿಡ್ ಹರಡದಂತೆ ತಡೆಗೆ ಮಾರ್ಗ ಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನು ನೋಟಿಸ್ ಬೋರ್ಡ್ ಹಾಗೂ ಪ್ರತಿ ಕೊಠಡಿ ಗಳ ಬಾಗಿಲುಗಳಿಗೆ ಅಂಟಿಸಲಾಗಿತ್ತು. ಪಾಠ, ಪ್ರವಚನದ ಆರಂಭಕ್ಕೂ ಮುನ್ನಾ ವಿದ್ಯಾರ್ಥಿ ಗಳಿಗೆ ಶಿಕ್ಷಕರು ಕೋವಿಡ್ ಮಾರ್ಗಸೂಚಿ ಅನುಸರಿಸಲು ಸೂಚನೆ ನೀಡಿದರು.
ಶಾಸಕರು, ಜಿಲ್ಲಾಧಿಕಾರಿ ಭೇಟಿ: ಶಾಲೆ, ಪಿಯು ಕಾಲೇಜು ಭೌತಿಕ ತರಗತಿ ಪ್ರಾರಂ ಭದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ವಿವಿಧ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ನಗರದ ಸತ್ತಿ ರಸ್ತೆಯಲ್ಲಿರುವ ಬಾಲಕರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ವಿದ್ಯಾರ್ಥಿಗಳಿಗೆ ಹೂ ನೀಡಿ ಆತ್ಮೀಯ ವಾಗಿ ಬರಮಾಡಿಕೊಂಡರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತ ನಾಡಿ, ನಮ್ಮ ಜಿಲ್ಲೆಯಲ್ಲಿ ಕೋವಿಡ್ ಸಂಪೂರ್ಣ ಕಡಿಮೆಯಾಗುವ ಹಂತದಲ್ಲಿದೆ. ಕಾಲೇಜುಗಳು ಅರ್ಧ ದಿನ ಮಾತ್ರ ನಡೆಯ ಲಿವೆ. ಕೋವಿಡ್-19 ಬಗ್ಗೆ ಯಾವುದೇ ಆತಂಕ ಪಡದೇ ಎಚ್ಚರದಿಂದಿರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸ ಬೇಕು. ಓದಿನ ಬಗ್ಗೆ ಹೆಚ್ಚು ಗಮನವಿಡಿ, ಕೋವಿಡ್ ಬಗ್ಗೆ ನೀವು ಜಾಗೃತರಾಗಿ, ನಿಮ್ಮ ಮನೆಯವರಿಗೂ, ಊರಿನವರಿಗೂ ತಿಳಿಹೇಳಿ ಎಂದು ಸಲಹೆ ಮಾಡಿದರು.
ನಂತರ ತಾಲೂಕಿನ ವೆಂಕಟಯ್ಯನಛತ್ರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕಾಲೇಜಿನಲ್ಲಿ ನಡೆಯುತ್ತಿದ್ದ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಗಳೊಂದಿಗೂ ಮಾತನಾಡಿ ಕುಶಲೋ ಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿ ಕಾರಿ ಲಕ್ಷ್ಮೀಪತಿ ಇತರರು ಹಾಜರಿದ್ದರು.