ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು
ಚಾಮರಾಜನಗರ

ಉತ್ಸಾಹದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು

September 7, 2021

ಚಾಮರಾಜನಗರ, ಸೆ.6- ಜಿಲ್ಲೆಯಲ್ಲಿ 6, 7 ಹಾಗೂ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದು, ಶಾಲೆಯ ಶಿಕ್ಷಕರು ಮಕ್ಕಳನ್ನು ಅದ್ಧೂರಿ ಯಾಗಿ ಬರಮಾಡಿಕೊಂಡರು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂ ವರೆ ವರ್ಷಗಳಿಂದಲೂ ಮುಚ್ಚಿದ್ದ ಶಾಲೆ ಗಳನ್ನು ಇಂದಿನಿಂದ ಆರಂಭ ಮಾಡುವಂತೆ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ, ಹನೂರು ತಾಲೂಕು ವ್ಯಾಪ್ತಿಯಲ್ಲಿ ತರಗತಿಗಳು ಆರಂಭಗೊಂಡವು.

6-8ನೇ ತರಗತಿ ಆರಂಭ ಹಿನ್ನೆಲೆಯಲ್ಲಿ ಶಾಲೆಗಳ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿಸಲಾಗಿತ್ತು. ಅಲ್ಲದೇ ಶಾಲೆಗಳಿಗೆ ಆಗಮಿ ಸಿದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕ ವರ್ಗ ಗುಲಾಬಿ ಹೂವು ನೀಡಿ ಸ್ವಾಗತಿಸಿತು. ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಿ ತರಗತಿಗಳಿಗೆ ಬಿಡಲಾಯಿತು. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸು ವಂತೆ ಸೂಚನೆ ನೀಡಲಾಗಿತ್ತು.

ಕಳೆದ ಕೆಲ ತಿಂಗಳಿಂದಲೂ ಶಾಲೆಗಳತ್ತ ಮುಖ ಮಾಡದ ಮಕ್ಕಳು ತರಗತಿಗಳು ಆರಂಭವಾಗುತ್ತಿದ್ದಂತೆ ಬಹಳ ಉತ್ಸಾಹ ದಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದರು. ಪೋಷಕರು ಕೂಡ ತಮ್ಮ ಮಕ್ಕಳನ್ನು ಶಾಲೆ ಗಳಿಗೆ ಕಳುಹಿಸುವಲ್ಲಿ ಉತ್ಸಾಹ ತೋರಿ ದರು. ಕೊಠಡಿಗಳಲ್ಲಿ ಕೋವಿಡ್ ನಿಯಮ ಗಳನ್ನು ಪಾಲನೆ ಮಾಡುವುದರೊಂದಿಗೆ ತರಗತಿಗಳು ಆರಂಭಗೊಂಡವು.

ಪ್ರಾಥಮಿಕ ಶಾಲೆಗಳಲ್ಲಿ 6-8ನೇ ತರಗತಿ ಗಳನ್ನು ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ನಡೆಸಲು ಸೂಚಿಸಲಾಗಿದೆ. ಪ್ರೌಢಶಾಲೆ ಗಳಲ್ಲಿ ಬೆಳಗಿನ ಅವಧಿಯಲ್ಲಿ 9, 10ನೇ ತರಗತಿ, ಮಧ್ಯಾಹ್ನದ ಅವಧಿಯಲ್ಲಿ 8ನೇ ತರಗತಿ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು ಅದರಂತೆ ಮೊದಲ ದಿನ ತರಗತಿಗಳು ನಡೆದವು.

Translate »