ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸುತ್ತೇನೆ: ಎಂ.ಆರ್.ಮಂಜುನಾಥ್
ಚಾಮರಾಜನಗರ

ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸುತ್ತೇನೆ: ಎಂ.ಆರ್.ಮಂಜುನಾಥ್

August 29, 2021

ಹನೂರು, ಆ.28(ಸೋಮು)- ಜೆಡಿ ಎಸ್‍ಗೆ ಸೇರ್ಪಡೆಗೊಂಡಿರುವ ಮುಖಂ ಡರ ಜೊತೆಗೂಡಿ ಕ್ಷೇತ್ರದಲ್ಲಿ ಪಕ್ಷ ಬಲಪಡಿಸುವ ಮೂಲಕ ನಿರಂತರವಾಗಿ ಜನತೆಯ ಸೇವೆಗೆ ಮುಂದಾಗುತ್ತೇನೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎಂ.ಆರ್.ಮಂಜು ನಾಥ್ ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಮುಖಂ ಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿನೆÀ್ನಲೆಯಲ್ಲಿ ಪಟ್ಟಣದ ಜೆಡಿಎಸ್ ಕಚೇರಿ ಯಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳಿಯವಾಗಿ ಜನಮನ್ನಣೆ ಗಳಿಸಿರುವ ಸಿಂಗನಲ್ಲೂರು ಶಿವಪ್ರಕಾಶ್, ಬಾಬು, ಶಾಗ್ಯ ರವಿಕುಮಾರ್, ಎಲ್ಲೇಮಾಳ ಗ್ರಾಪಂ ಉಪಾಧ್ಯಕ್ಷ ಚಿನ್ನವೆಂಕಟ, ಕೌದಳ್ಳಿ ಇಕ್ಬಾಲ್‍ಪಾಷ ಅವರು ಜೆಡಿಎಸ್ ಸೇರ್ಪಡೆ ಗೊಂಡಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದರು.

ಶಾಸಕ ಆರ್.ನರೇಂದ್ರ ವಿರುದ್ಧ ವಾಗ್ದಾಳಿ: ಶಾಸಕ ಆರ್.ನರೇಂದ್ರ ಅವರ ಕಾರ್ಯ ಗಳಿಗೆ ಅವರೇ ಸಾಟಿ ಎಂದು ವ್ಯಂಗ್ಯವಾ ಡಿದ ಅವರು, ಸ್ಪರ್ಧಾತ್ಮಕ ಈ ಯುಗದಲ್ಲಿ ಯುವಕರು ಡಬಲ್ ಡಿಗ್ರಿ ಮಾಡಿದ್ದರೂ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿ ದ್ದಾರೆ. ಅಂಥವರ ಅನುಕೂಲಕ್ಕೆ ಒಂದೇ ಒಂದು ಫ್ಯಾಕ್ಟರಿ ತಾಲೂಕು ವ್ಯಾಪ್ತಿಯಲ್ಲಿ ಇಲ್ಲದೇ ಇರುವುದು ದುರದೃಷ್ಟಕರ. ಕೂಲಿ ಮಾಡಿ ವಿದ್ಯಾಭ್ಯಾಸ ಕೊಡಿಸಿದ ತಂದೆ ತಾಯಿ ಗಳು ಇಳಿ ವಯಸ್ಸಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸಬೇಕಾಗಿದೆ. ಶಾಸಕರಿಗೆ ಈ ಸಾಮಾನ್ಯ ಅರಿವು ಇದ್ದಿದ್ದರೆ ಇಂತಹ ಪರಿಸ್ಥಿತಿ ಬರು ತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಪಪಂ ಸದಸ್ಯ ರಾದ ಆನಂದ್‍ಕುಮಾರ್, ಮುಮ್ತಾಜ್ ಬಾನು, ಮುಖಂಡರಾದ ಮಹೇಶ್‍ನಾಯಕ, ಜಿ.ಕೆ.ಹೊಸೂರು ಬಸವರಾಜು, ಮಂಜೇಶ್, ಜಸ್ಮಿಂ ಪಾಷ, ಶಾಗ್ಯ ಬಾಬು, ಸಿಂಗನಲ್ಲೂರು ರಾಜಣ್ಣ, ಅಮೀನ್, ಸಿದ್ದಪ್ಪಾಜಿ ನಾಯಕ, ದಲಿತ್‍ಕಿರಣ್, ಮಾದೇವು ಇನ್ನಿತರರಿದ್ದರು.

Translate »