ಕೊಡಗಿನ ವಿವಿಧ ಯೋಜನೆಗಳ  ಅನುಷ್ಠಾನಕ್ಕೆ 427.8 ಲಕ್ಷ ರೂ. ಬಿಡುಗಡೆ
ಕೊಡಗು

ಕೊಡಗಿನ ವಿವಿಧ ಯೋಜನೆಗಳ ಅನುಷ್ಠಾನಕ್ಕೆ 427.8 ಲಕ್ಷ ರೂ. ಬಿಡುಗಡೆ

August 29, 2021

ಕುಶಾಲನಗರ, ಆ.28- ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ರೂ. 427.8 ಲಕ್ಷ ಅನುದಾನ ಬಿಡುಗಡೆ ಮಾಡ ಲಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು, ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.

ಸಮೀಪದ ಹಾರಂಗಿಯಲ್ಲಿರುವ ಮಹಶೀರ್ ಮೀನುಮರಿಗಳ ಉತ್ಪಾದನಾ ಹಾಗೂ ಪಾಲನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾರಂಗಿಯಲ್ಲಿರುವ ಉತ್ಪಾದನಾ ಘಟಕ ದಲ್ಲಿ ಮೀನುಮರಿಗಳ ಉತ್ಪಾದನೆ ಮತ್ತು ಪಾಲನೆ ಕಾರ್ಯ ವೀಕ್ಷಿಸಿದರು. ಸ್ಥಳೀಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ಸಚಿವರಿಗೆ ಅಗತ್ಯ ಮಾಹಿತಿ ಒದಗಿಸಿದರು. ಮೀನು ತೊಟ್ಟಿಗಳು, ಆಹಾರ ಶೇಖರಣಾ ಘಟಕಗಳನ್ನು ಸಚಿವರು ಪರಿಶೀಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮೀನುಕೃಷಿ ಕೊಳ, ಮರಿ ಗಳ ಪಾಲನೆ ಕೊಳ, ಹಿತ್ತಲು ಅಲಂಕಾರಿಕ ಮೀನು ಕೃಷಿಗೆ ಸಹಾಯಧನ, ಹೊಸ ತಂತ್ರಜ್ಞಾನ ಅಳವಡಿಕೆ, ಮಂಜುಗಡ್ಡೆ ಘಟಕ ನಿರ್ಮಾಣ, ಶಾಖ ನಿರೋಧಕ ವಾಹನ ಗಳ ಖರೀದಿಗೆ ಸಹಾಯಧನ, ಜೀವಂತ ಮೀನು ಮಾರಾಟ ಕೇಂದ್ರಗಳು, ಮೀನು ಆಹಾರ ತಯಾರಿಕಾ ಘಟಕ, ಮಾರುಕಟ್ಟೆ ಹಾಗೂ ಮೂಲ ಸೌಕರ್ಯಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿ ಸಲು ಜಿಲ್ಲಾಮಟ್ಟದ ಸಭೆಯಲ್ಲಿ ಅನು ಮೋದನೆ ಪಡೆದುಕೊಳ್ಳಲಾಗಿದೆ. ಹಂತ ಹಂತವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು. ಈ ವರ್ಷ ಜಿಲ್ಲೆಯಲ್ಲಿ 70 ಲಕ್ಷ ಮೀನುಮರಿ ಉತ್ಪಾ ದನೆ ಹಾಗೂ ಬಿತ್ತನೆಗೆ ಗುರಿ ಹೊಂದಲಾ ಗಿದೆ ಎಂದು ಸಚಿವರು ತಿಳಿಸಿದರು.

ಮೀನುಗಾರಿಗೆ ಇಲಾಖೆ ಯೋಜನೆ ಮತ್ತು ಗುರಿಯ ಬಗ್ಗೆ ಮಾಹಿತಿ ನೀಡಿ ದರು. ಈಗಾಗಲೇ ಒಳನಾಡು ಮೀನು ಉತ್ಪಾ ದನೆ ಹೆಚ್ಚಿಸುವ ಉದ್ದೇಶದಿಂದ ಕೆರೆಯಂ ಚಿನಲ್ಲಿ ಮೀನುಮರಿ ಪಾಲನ ಕಾರ್ಯಕ್ರಮ ದಡಿ ಕೊಡಗು ಜಿಲ್ಲೆಯಲ್ಲಿನ ಕನಿಷ್ಠ 1000 ಚ.ಮೀ. ಪಾಲನ ಸಾಮರ್ಥದಲ್ಲಿ ಮೀನು ಮರಿ ಪಾಲನೆ ಮಾಡಲು ರೂ. 25,000 ಸಾವಿರಗಳ ಸಹಾಯಧನವನ್ನು ಕೇವಲ ಕೊಡಗು ಜಿಲ್ಲೆಗೆ ಮಾತ್ರ ವಿಶೇಷವಾಗಿ ನೀಡಲು ಮೀನುಗಾರಿಕೆ ಇಲಾಖೆಯಿಂದ ನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ.

ಸಮುದ್ರದ ತಾಜಾ ಮೀನು ಒದಗಿ ಸಲು ಮಂಗಳೂರು-ಸುಳ್ಯ-ಸಂಪಾಜೆ ಮಡಿ ಕೇರಿ-ಕುಶಾಲನಗರ-ವಿರಾಜಪೇಟೆ ಮಾರ್ಗ ವಾಗಿ ತಾಜಾ ಮೀನನ್ನು ಸಾರ್ವಜನಿಕ ರಿಗೆ ಯೋಗ್ಯದರದಲ್ಲಿ ಒದಗಿಸಲಾಗು ವುದು ಎಂದು ತಿಳಿಸಿದರು.

ಅಳಿವಿನ ಅಂಚಿನಲ್ಲಿದ್ದ “ಮಹಶೀರ್ ಮೀನುಮರಿಗಳ ರಾಜ್ಯದ ಏಕೈಕ ಉತ್ಪಾ ದನಾ ಕೇಂದ್ರ ಹಾರಂಗಿಯಲ್ಲಿದ್ದು, ಅನೇಕ ವರ್ಷಗಳಿಂದ ಕೇಂದ್ರದಲ್ಲಿ ಉತ್ಪಾದನೆ ಮಾಡಲಾದ ಮಹಶೀರ್ ಮರಿಗಳನ್ನು ನದಿ ಭಾಗಗಳಲ್ಲಿ ಬಿತ್ತನೆ ಮಾಡಲಾಗು ತ್ತಿದೆ. 2020-21 ನೇ ಸಾಲಿನಲ್ಲಿ 35,000 ಮರಿಗಳ ಬಿತ್ತನೆ ಹಾಗೂ ಆಗಸ್ಟ್ 2021 ರ ಅಂತ್ಯದವರೆಗೆ 25,000 ಸಾವಿರ ಮಹಶೀರ್ ಮೀನು ಮರಿಗಳು, ಉತ್ಪಾದನೆಯಾಗಿದೆ. ನೆರೆಯ ರಾಜ್ಯಗಳಿಗೆ ಈ ಕೇಂದ್ರದಿಂದ ಮರಿಗಳನ್ನು ಸರಬರಾಜು ಮಾಡಲಾಗಿದೆ. ಮೀನುಗಾರಿಕೆ ಇಲಾಖೆಯ ಸತತ ಪ್ರಯತ್ನ ದಿಂದಾಗಿ ಇಂಟರ್‍ನ್ಯಾಷನಲ್ ಯೂನಿಯನ್ ಕನ್ಸರ್ವೇಷನ್ ನೇಚರ್ (IUಅಓ) ಸಂಸ್ಥೆಯು ಈಗ ಟಾರ್ ಕುದ್ರಿ ಮಹಶೀರ್ ತಳಿಯನ್ನು ಅಳಿವಿನ ಅಂಚಿನಲ್ಲಿ ಇದ್ದ ಸ್ಥಾನದಿಂದ ಈ “ಲಿಸ್ಟ್ ಕನ್ಸನ್” ಸ್ಥಾನಕ್ಕೆ ವರ್ಗಾಯಿಸಿರು ವುದು ಹೆಮ್ಮೆಯ ವಿಚಾರ ಎಂದರು.

ಇದೇ ಸಂದರ್ಭ ಅವರು ಹಾರಂಗಿ ನದಿಗೆ ಬಲಿತ ಮಹಶೀರ್ ಮೀನುಮರಿಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್, ಮೀನುಗಾರಿಕೆ ಇಲಾಖೆ ರಾಜ್ಯ ನಿರ್ದೇಶಕ ರಾಮಾಚಾರ್ಯ, ಜಂಟಿ ನಿರ್ದೇಶಕ ನಾರಾಯಣ, ಉಪನಿರ್ದೇ ಶಕ ಗಿರೀಶ್, ಕೊಡಗು ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ, ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ಸ್ನೇಹ, ಜನಪ್ರತಿನಿಧಿಗಳಾದ ಭಾಸ್ಕರ್ ನಾಯಕ್, ಮಣಿ ಮತ್ತಿತರರು ಇದ್ದರು.

Translate »