ಚಾಮರಾಜನಗರ, ಆ.28(ಎಸ್‍ಎಸ್)- ತಾಲೂಕಿನ ಉಮ್ಮತ್ತೂರು ಕೆರೆಗೆ ನೀರು ಹರಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆರೆ ಮುಂಭಾಗ ಶನಿ ವಾರ ಸಂಜೆ ಉಮ್ಮತ್ತೂರು ಕೆರೆ ಪುನಶ್ಚೇ ತನ ಸಮಿತಿ ವತಿಯಿಂದ ಅಚ್ಚುಕಟ್ಟುದಾ ರರು ಹಾಗೂ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ನೀರು ಹರಿಸುವವರೆಗೂ ಹಗಲು ರಾತ್ರಿ ಧರಣಿ ನಡೆಸುವುದಾಗಿ ಪ್ರತಿಭಟನಾ ಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಉಮ್ಮತ್ತೂರು ದೊಡ್ಡ ಕೆರೆ ಪಕ್ಕದ ಕೊಟ್ಟೂರು ಬಸವೇಶ್ವರ ದೇವಾಲಯದ ಎದುರು ಶನಿ ವಾರ ಮಧ್ಯಾಹ್ನ ರೈತರು ಸಭೆ ನಡೆಸಿ, ಕೆರೆಗೆ ನೀರು ಹರಿಸಬೇಕು ಎಂದು ಘೋಷಣೆ ಕೂಗಿ ಸರ್ಕಾರವನ್ನು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸಚಿವರು, ಅಧಿಕಾರಿ ಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ಆ. 31ರೊಳಗೆ ನೀರು ಹರಿಸುವುದು ಅನು ಮಾನ. ಶಾಸಕ ಎನ್.ಮಹೇಶ್ ಅವರು ಆ. 31ರೊಳಗೆ ನೀರು ಹರಿಸದಿದ್ದರೆ ಚಳವಳಿ ಯಲ್ಲಿ ಭಾಗವಹಿಸಬೇಕು. ಇಲ್ಲದಿದ್ದರೆ ಅವರು ವಚನಭ್ರಷ್ಟರಾದಂತೆ ಎಂದು ಟೀಕಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಆ. 31ರಂದು ನೀರು ಹರಿಸದಿ ದ್ದರೆ, ಸುತ್ತೂರಿನಲ್ಲಿ ರೈತ ಮಹಿಳೆಯೊಬ್ಬರ ಕೈಯಲ್ಲಿ ಉದ್ಘಾಟಿಸಲಾಗುವುದು. ಇದಕ್ಕೆ ಅವಕಾಶ ದೊರಕದಿದ್ದರೆ ಸುತ್ತೂರು ಶ್ರೀ ಗಳನ್ನು ಭೇಟಿಯಾಗಿ ಅವರ ಆಶೀ ರ್ವಾದ ಪಡೆದು, ಅಲ್ಲಿಯೇ ಚಳವಳಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶನಿವಾರ ಸಂಜೆಯಿಂದಲೇ ಪ್ರತಿಭಟನೆ ಆರಂಭಿಸಲು ನಿರ್ಧರಿಸಿ, ಅಲ್ಲಿಯೇ ಶಾಮಿ ಯಾನ ಹಾಕಿ, ಮಹಾತ್ಮಾಗಾಂಧಿ ಭಾವ ಚಿತ್ರ ಇರಿಸಿ ಧರಣಿ ಆರಂಭಿಸಿದರು. ಆ.31 ರವೆರೆಗೂ ಅದೇ ಸ್ಥಳದಲ್ಲಿ ರಾತ್ರಿ ಹಗಲು ಎನ್ನದೇ ನಿರಂತರ ಧರಣಿ ನಡೆಸಲು ರೈತರು ತೀರ್ಮಾನಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಹೆಗ್ಗವಾಡಿಪುರ ಮಹದೇವಸ್ವಾಮಿ, ದಾಸನೂರು ಮಲ್ಲಣ್ಣ, ಅಗ್ರಹಾರ ಮಂಜುನಾಥ್, ಜಿಲ್ಲಾ ವೀರ ಶೈವ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಉಮ್ಮತ್ತೂರು, ಜನ್ನೂರು, ಮೂಡಲ ಅಗ್ರಹಾರ, ಚುಂಚನಹಳ್ಳಿ, ಹನುಮನಪುರ, ಹಳ್ಳಿಕೆರೆಹುಂಡಿ, ಹೊಮ್ಮ, ದಾಸನೂರು, ಹೆಗ್ಗವಾಡಿ, ಹೆಗ್ಗವಾಡಿ ಪುರದ ಗ್ರಾಮಸ್ಥರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದಾರೆ.