ಜನಜಾಗೃತಿಗೆ ಬೀದಿ ನಾಟಕಗಳು ಸಹಕಾರಿ
ಮಂಡ್ಯ

ಜನಜಾಗೃತಿಗೆ ಬೀದಿ ನಾಟಕಗಳು ಸಹಕಾರಿ

August 28, 2021

ಕೆ.ಆರ್.ಪೇಟೆ, ಆ.27(ಶ್ರೀನಿವಾಸ್)- ಸಮಾಜದಲ್ಲಿ ಜನರನ್ನು ಪರಿಣಾಮಕಾರಿ ಯಾಗಿ ಜಾಗೃತಿಗೊಳಿಸಲು ಬೀದಿ ನಾಟಕಗಳು ಹೆಚ್ಚು ಸಹಕಾರಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡ್ಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.

ತಾಲೂಕಿನ ಹೊಸಹೊಳಲು ಹಾಗೂ ಹರಿಹರಪುರ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ಆಯೋ ಜಿಸಿದ್ದ ಆರೋಗ್ಯ ಜಾಗೃತಿ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ 3ನೇ ಅಲೆಯ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಾಮಾನ್ಯರು ಅಗತ್ಯ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಕೈಗಳನ್ನು ಸ್ಯಾನಿಟೈಸರ್ ನಿಂದ ತೊಳೆದುಕೊಂಡು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯ ವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿ ಕೊಳ್ಳಬೇಕು ಎಂದು ಕರೆ ನೀಡಿದ ಮಹಾ ಬಲಕುಲಾಲ್, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅಪಘಾತದ ತೀವ್ರತೆಗೆ ತೊಂದರೆ ಗೊಳಗಾದ ವ್ಯಕ್ತಿಗಳ ಅಮೂಲ್ಯವಾದ ಪ್ರಾಣ ವನ್ನು ಉಳಿಸುವ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯ ಬೇಕು ಎಂದು ಕಿವಿಮಾತು ಹೇಳಿದರು.

ವಾಹನ ಚಾಲನೆ ಮಾಡುವಾಗ ಕಡ್ಡಾಯ ವಾಗಿ ಹೆಲ್ಮೆಟ್ ಬಳಕೆ ಹಾಗೂ ಮೊಬೈಲ್ ಫೆÇೀನನ್ನು ಬಳಸಲೇಬಾರದು. ಈ ಬಗ್ಗೆ ಜನರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಬೀದಿ ನಾಟಕಗಳು ಅತ್ಯಂತ ಉಪಯುಕ್ತವಾಗಿದೆ. ಆರೋಗ್ಯವಂತ ಸಮಾ ಜದ ನಿರ್ಮಾಣ ಮಾಡುವ ದಿಕ್ಕಿನಲ್ಲಿ ಯುವ ಜನರು ಹಾಗೂ ಗ್ರಾಮೀಣ ಮಹಿಳೆಯರು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಈ ದಿಕ್ಕಿನಲ್ಲಿ ಧರ್ಮಸ್ಥಳ ಸಂಸ್ಥೆಯು ಅರಿವಿನ ಜಾಗೃತಿ ಮೂಡಿಸುವ ಕೆಲಸ ವನ್ನು ಮಾಡುತ್ತಿದೆ ಎಂದರು.

ಪುರಸಭಾ ಸದಸ್ಯರಾದ ಹೆಚ್.ಆರ್. ಲೋಕೇಶ್, ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಚಂದ್ರೇಗೌಡ, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಕೆ.ಎಸ್.ರಾಜೇಶ್, ಹಿರಿಯ ಮುಖಂಡರಾದ ಚಿಕ್ಕೇಗೌಡ, ಕೆ.ಆರ್.ನೀಲಕಂಠ, ಪಿಡಿಓ ನಾಹಿದಾ ಅಕ್ತರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಆಸರೆ ಸಮಾಜ ಸೇವಾ ಟ್ರಸ್ಟ್‍ನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ಧರ್ಮಸ್ಥಳ ಸಂಸ್ಥೆಯ ಮೇಲ್ವಿಚಾರಕಿ ಅನ್ನಪೂರ್ಣ, ಜ್ಞಾನವಿಕಾಸ ಕೇಂದ್ರದ ಸಂಚಾಲಕಿ ಕಾವ್ಯ, ಒಕ್ಕೂಟದ ಅಧ್ಯಕ್ಷ ಪ್ರಭಾವತಿ, ಸೇವಾ ಪ್ರತಿನಿಧಿಗಳಾದ ಕಲ್ಪನಾ, ರಮ್ಯಾ, ರಾಣಿ, ಮಂಜುಳಾ, ಸ್ನೇಹ ಜೀವಿ ಕಲಾ ಬಳಗದ ಸಂಚಾಲಕ ಮಹ ದೇವ್ ಮತ್ತಿತರರು ಉಪಸ್ಥಿತರಿದ್ದರು.

Translate »