ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ತಾಲೂಕಿಗೆ 3ನೇ ಸ್ಥಾನ
ಮಂಡ್ಯ

ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ತಾಲೂಕಿಗೆ 3ನೇ ಸ್ಥಾನ

August 28, 2021

ಪಾಂಡವಪುರ, ಆ.27- ಗುಣಮಟ್ಟದ ಹಾಲು ಪೂರೈಕೆಯಲ್ಲಿ ಪಾಂಡವಪುರ ತಾಲೂಕು ಮಂಡ್ಯ ಜಿಲ್ಲೆಗೆ 3ನೇ ಸ್ಥಾನ ಪಡೆದುಕೊಂಡಿದೆ. ಆದರೆ ರೈತರ ಸಹ ಕಾರದಿಂದ ಶೀಘ್ರದಲ್ಲಿ ಪಾಂಡವಪುರ ಪ್ರಥಮ ಸ್ಥಾನ ಪಡೆದುಕೊಳ್ಳಲಿದೆ ಎಂದು ಮನ್‍ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರ ತಿಳಿಸಿದರು.

ಪಟ್ಟಣದ ಮನ್‍ಮುಲ್ ಉಪಕಚೇರಿ ಯಲ್ಲಿ ಮನ್‍ಮುಲ್ ವ್ಯವಸ್ಥಾಪಕ (ಶೇ.ತಾಂ) ಪ್ರಭಾಕರ್ ಸಮ್ಮುಖದಲ್ಲಿ ಪಾಂಡವಪುರ ತಾಲೂಕಿನ 32 ಬಿಎಂಸಿ ಕೇಂದ್ರದ ಕಾರ್ಯ ದರ್ಶಿ ಹಾಗೂ ಟೆಸ್ಟರ್‍ಗಳ ಸಭೆ ನಡೆಸಿ, ಗುಣ ಮಟ್ಟದ ಹಾಲು ಪೂರೈಕೆ ಮಾಡುವ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಂಡವಪುರ ತಾಲೂಕಿನ ಬಿಎಂಸಿ ಕೇಂದ್ರದ ವ್ಯಾಪ್ತಿಯ ಸಿಬ್ಬಂದಿ ವರ್ಗಕ್ಕೆ ತರಬೇತಿ ಮೂಲಕ ಅರಿವು ಮೂಡಿಸಲಾಗಿದೆ. ಗುಣ ಮಟ್ಟದ ಹಾಲು ಸರಬರಾಜು ಮಾಡುವ ಬಗ್ಗೆ ಸಿಬ್ಬಂದಿ ವರ್ಗಕ್ಕೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಪಾಂಡವಪುರ ತಾಲೂಕು ಹಾಲು ಪೂರೈಕೆಯಲ್ಲಿ ಶೇ.96ರಷ್ಟಿದೆ. ಪಾಂಡವಪುರ ತಾಲೂಕು ಹಾಲಿನ ಗುಣ ಮಟ್ಟದಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆಯಲ್ಲಿ ಸಭೆ ನಡೆಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮನ್‍ಮುಲ್ ವತಿಯಿಂದ ವಿತರಿಸುವ ಪಶು ಆಹಾರವನ್ನು ರಾಸುಗಳಿಗೆ ಕಡ್ಡಾಯವಾಗಿ ನೀಡುವಂತೆ ಅರಿವು ಮೂಡಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹೈನುಗಾರಿಕೆ ಮಾಡುತ್ತಿರುವ ರೈತರಿಗೆ ಮನ್‍ಮುಲ್ ವತಿಯಿಂದ ಸಬ್ಸಿಡಿ ಮೂಲಕ ಮೇವು ಕತ್ತರಿ ಸುವ ಯಂತ್ರವನ್ನು ನಿರ್ದೇಶಕ ಕಾಡೇನ ಹಳ್ಳಿ ರಾಮಚಂದ್ರ ವಿತರಿಸಿದರು.

ಮರಣ ಹೊಂದಿರುವ ವಿಮೆ ಮಾಡಿಸಿದ್ದ ರಾಸುಗಳ ಮಾಲೀಕರಾದ ಹಿರೇಮರಳಿ ಗ್ರಾಮದ ಕೃಷ್ಣೇಗೌಡ, ಹೆಗ್ಗಡಹಳ್ಳಿ ಗ್ರಾಮದ ದೇವಮ್ಮ, ಬೇಬಿ ಗ್ರಾಮದ ಬಿ.ಎಂ.ನಂಜಪ್ಪ, ಮೇಲುಕೋಟೆ ಎಂ.ಎಸ್.ಶಶಿಕುಮಾರ್, ಜಕ್ಕನಹಳ್ಳಿ ನಟರಾಜು ಅವರಿಗೆ ಮನ್‍ಮುಲ್ ವತಿಯಿಂದ ಒಟ್ಟು 2.40 ಲಕ್ಷ ರೂ. ವಿಮೆ ಚೆಕ್‍ಗಳನ್ನು ವಿತರಿಸಿದರು.

ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ದೊಡ್ಡ ಬ್ಯಾಡರಹಳ್ಳಿ ದಿನೇಶ್, ಮನು, ಲಲಿತಮ್ಮ, ಪ್ರಭಾವತಿ, ಸುಂಕಾತೊಣ್ಣೂರು ಮಹದೇವ, ವಿಜಿಯಮ್ಮ, ಸೀತಾಪುರ ದಿನೇಶ, ಚಿಕ್ಕಣ್ಣ, ಬಿಂಡಹಳ್ಳಿ ರೇವಮ್ಮ, ಗಾಯಿತ್ರಮ್ಮ, ಜಯಮ್ಮ, ಕಡಬ ಗ್ರಾಮದ ಯಶೋಧಮ್ಮ, ಕಮಲಮ್ಮ ಎಂಬುವರಿಗೆ 1.30 ಲಕ್ಷ ರೂ. ವಿಮೆ ಹಣದ ಚೆಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮನ್‍ಮುಲ್ ಉಪ ಕಚೇರಿಯ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ವಿಸ್ತರಣಾಧಿಕಾರಿ ಎಚ್.ಎಸ್.ಮಂಜು ನಾಥ್, ಎ.ಎಸ್.ಸಿದ್ದರಾಜು, ಎಚ್.ಎನ್.ಉಷಾ, ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Translate »