ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆಗೆ ಚಾಲನೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆಗೆ ಚಾಲನೆ

August 28, 2021

ಶ್ರೀರಂಗಪಟ್ಟಣ, ಆ.27(ವೈಡಿಎಸ್)-ಕೆ.ಆರ್.ಸಾಗರ ಅಣೆಕಟ್ಟೆಗೆ ಉತ್ತರ ಭಾಗದಲ್ಲಿರುವ ಕಾವೇರಿ ನದಿ ಹಿನ್ನೀರಿ ನಲ್ಲಿ ಶುಕ್ರವಾರ ಸಂಜೆ ರಾಷ್ಟ್ರ ಮಟ್ಟದ ವಿವಿಧ ಬಗೆಯ ಹಾಯಿದೋಣಿ ಸ್ಪರ್ಧೆ ಗಳಿಗೆ ರೇಷ್ಮೆ, ಯುವಜನ ಸಬಲೀ ಕರಣ ಮತ್ತು ಕ್ರೀಡಾ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು.

ಮೈಸೂರು ಮಲ್ಟಿ ಕ್ಲಾಸ್ ಸೇಲಿಂಗ್ ಚಾಂಪಿ ಯನ್‍ಶಿಪ್ ಆ.27 ರಿಂದ 31ರವರೆಗೆ ನಡೆಯುತ್ತಿದ್ದು, ಕರ್ನಾಟಕ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಎಂಇಜಿ ಮದ್ರಾಸ್ ಸಾಪರ್ಸ್‍ನ ತ್ರಿಶ್ನಾ ಸೇಲಿಂಗ್ ಕ್ಲಬ್, ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನೇತೃತ್ವ ದಲ್ಲಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ನಂತರ ಮಾತನಾಡಿದ ಸಚಿವ ಕೆ.ಸಿ. ನಾರಾಯಣಗೌಡ, ಈ ರೀತಿಯ ಕ್ರೀಡೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿ ರುವುದು ಸಂತೋಷವಾಗಿದೆ, ಕೃಷ್ಣರಾಜ ಸಾಗರದ ಹಿನ್ನೀರು ಉತ್ತಮ ತಾಣವಾ ಗಿದ್ದು, ಇಲ್ಲಿ ಮಕ್ಕಳಿಗೆ ಹಾಯಿದೋಣಿ ತರಬೇತಿ ನೀಡಲು ಉತ್ತಮ ಸ್ಥಳವಾಗಿದೆ. ಈ ಹಿನ್ನೀರನ್ನು ಪ್ರವಾಸಿ ತಾಣ ಮಾಡಲು ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಮುಂದಿನ ಮೇ ತಿಂಗಳಲ್ಲಿ ಕರ್ನಾಟಕ ದಲ್ಲಿ ಖೇಲ್ ಇಂಡಿಯಾ ಕ್ರೀಡಾಕೂಟ ಆಯೋಜನೆಯಾಗಲಿದೆ. ಇದರಲ್ಲಿ ಸುಮಾರು 7000 ಕ್ರೀಡಾಪಟುಗಳು ಭಾಗವಹಿಸಲಿದ್ದು, ಆ ಕ್ರೀಡಾಕೂಟಕ್ಕೆ ನಮ್ಮ ಇಲಾಖೆಯಿಂದ ಸಕಲ ರೀತಿಯ ಸೌಲಭ್ಯ ಒದಗಿಸಲಾಗು ತ್ತದೆ. ಈ ಕ್ರೀಡಾಕೂಟ ನಡೆಯುವುದರಿಂದ ನಮ್ಮ ರಾಜ್ಯದ ಕೀರ್ತಿ ಹೆಚ್ಚಾಗಲಿದೆ ಎಂದರು.

ನಂತರ ಕ್ರೀಡಾ ಇಲಾಖೆ ಅಪರ ಕಾರ್ಯ ದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಈ ಹಿನ್ನೀರಿನ ಸ್ಥಳ ಕ್ರೀಡೆ ನಡೆಸಲು ಉತ್ತಮ ಜಾಗವಾಗಿದೆ, 9 ರಿಂದ 19 ವರ್ಷದ ಮಕ್ಕಳು ಭಾಗವಹಿಸುವ ಕೆಲವೇ ದಿನಗಳÀ ಈ ಚಾಂಪಿಯನ್‍ಶಿಪ್‍ಗೆ ಮಾತ್ರ ಸಿಮೀತ ವಾಗದೆ ನಿರಂತರವಾಗಿ ಮಕ್ಕಳಿಗೆ ತರಬೇತಿ ನೀಡುವಂತಾಗಬೇಕು ಎಂದು ಆಶಿಸಿದರು.

ಮುಂದಿನ ಪ್ಯಾರಿಸ್ ಒಲಿಂಪಿಕ್ ಕ್ರೀಡೆಗೆ ಈಗಲೇ ಕ್ರೀಡಾಪಟುಗಳನ್ನು ಸಿದ್ಧಗೊಳಿ ಸುವ ಅವಶ್ಯಕತೆಯಿದೆ. ಆಯ್ಕೆಯಾಗುವ ಸ್ಪರ್ಧಿಗಳಿಗೆ ಅಮೃತ್ ಯೋಜನೆಯಡಿ 5 ಲಕ್ಷ ಪ್ರೋತ್ಸಾಹ ಧನ ಸಿಗಲಿದೆ, ಒಲಿಂಪಿಕ್ ಕ್ರೀಡೆ ವಿಜೇತರಿಗೆ 5 ಕೋಟಿ ನಗದು ಬಹುಮಾನ ವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆಆರ್‍ಸಾಗರ ಅಣೆಕಟ್ಟೆಯ ಸುರಕ್ಷತೆ ಮುಖ್ಯ ವಾಗಿದೆ, ಈ ಹಾಯಿದೋಣಿ ಕ್ರೀಡೆಗೆ ಪ್ರೋತ್ಸಾಹ ನೀಡಲು ನನ್ನ ಅಭ್ಯಂತರ ಇಲ್ಲ, ನಮ್ಮ ಜಿಲ್ಲೆಯವರೆ ಉಸ್ತುವಾರಿ ಸಚಿವರು ಹೊಸ ರೀತಿಯ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಸಂತೋಷ. ಅದೇ ರೀತಿ ಮಂಡ್ಯ ಜಿಲ್ಲೆಯ ಕ್ರೀಡಾ ಚಟುವಟಿಕೆಗೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಎಂಇಜಿಯ ಕಮಾಂ ಡೆಂಟ್ ಆದ ಬ್ರಿಗೇಡಿಯರ್ ಟಿಪಿಎಸ್ ವಾಡವ, ರಾಜ್ಯ ಸರ್ಕಾರ ಯುವಜನ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಕಾರ್ಯ ದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿ ಕಾರಿ ಅಶ್ವಥಿ, ಜಿಪಂ ಸಿಇಒ ದಿವ್ಯಾಪ್ರಭು, ಪಾಂಡವ ಪುರ ಉಪವಿಭಾಗಧಿಕಾರಿ ಡಾ. ಶಿವಾನಂದ ಮೂರ್ತಿ, ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಟೇಲ್ ಇತರರು ಭಾಗವಹಿಸಿದ್ದರು.

 

Translate »