ಕೆಎಸ್‍ಆರ್‍ಟಿಸಿ ಬಸ್ ಡಿಪೋದಲ್ಲಿ ಕನ್ನಡ ಜಾಗೃತಿ ಅಭಿಯಾನ
ಕೊಡಗು

ಕೆಎಸ್‍ಆರ್‍ಟಿಸಿ ಬಸ್ ಡಿಪೋದಲ್ಲಿ ಕನ್ನಡ ಜಾಗೃತಿ ಅಭಿಯಾನ

August 28, 2021

ಮಡಿಕೇರಿ, ಆ.27- ನಗರದ ಕೆಎಸ್‍ಆರ್‍ಟಿಸಿ ಬಸ್ ಡಿಪೆÇೀದಲ್ಲಿ ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ವತಿಯಿಂದ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತಿ ಸಮಿತಿ ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾ£ Àಗೊಳಿಸುವ ನಿಟ್ಟಿನಲ್ಲಿ ಹಕ್ಕೊತ್ತಾಯ ಪತ್ರವನ್ನು ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ ರವರಿಗೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಎಸ್.ಮಹೇಶ್, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನುವುದು ಸರಳ ಸಂಗತಿ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಈ ವರ್ಷವನ್ನು ‘ಕರ್ನಾಟಕ ಕಾಯಕ ವರ್ಷ’ ಎಂದು ಕರೆದಿದ್ದು ಅದರ ಅನುಷ್ಠಾನದ ಹೊಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾ ರವು ವಹಿಸಿಕೊಂಡಿದೆ. ಅದರಂತೆ ಸಾರಿಗೆ ವಲಯದಲ್ಲೂ ಕನ್ನಡ ಭಾಷೆಯ ಬಳಕೆ ಕುಂದದೆ ಗಟ್ಟಿಯಾಗಿ ನೆಲೆಯಾಗಬೇಕು.

ಸಾರಿಗೆ ವಲಯದ ತೀವ್ರಗತಿಯಲ್ಲಿ ರಾಜ್ಯದ ಹೊರಗಿನ ಜನತೆಯ ಆಗಮನ ನಿರ್ಗಮನ ಹೆಚ್ಚುತ್ತಿದೆ. ಟಿಕೆಟ್, ಬಸ್ ಬರವಣಿಗೆಯ ಪದಗಳನ್ನು ಬಿಟ್ಟರೆ ಉಳಿದ ಕಡೆ ಕನ್ನಡ ಪದಗಳನ್ನು ಬಳಸಬೇಕು ಹಾಗೆ ರಾಜ್ಯಕ್ಕೆ ಕರ್ನಾಟಕವೆಂಬ ನಾಮಕರಣ ಮಾಡಿದ ಹಿಂದು ಳಿದ ವರ್ಗಗಳ ಆಶಾಕಿರಣ, ಉಳುವವನಿಗೆ ಭೂಮಿ ಕೊಡಿಸಿದ ನಾಡಿನ ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮ ದಿನದ ಸಂದರ್ಭದಲ್ಲಿ ಸಾರಿಗೆ ಅಭಿಯಾನ ಹಮ್ಮಿಕೊಳ್ಳಲಾ ಗುತ್ತಿದೆ. ಕೆಎಸ್‍ಆರ್‍ಟಿಸಿ ಸೇರಿದಂತೆ ಇತರೆ ಖಾಸಗಿ ಸಾರಿಗೆ ಸಂಸ್ಥೆಗಳಲ್ಲಿ ಕನ್ನಡ ಬಳಕೆಯಾಗಬೇಕು ಎಂಬ ಆಶಯದಂತೆ ಜಾಗೃತಿ ಅಭಿಯಾನವನ್ನು ಪ್ರಾಧಿಕಾರವು ಹಮ್ಮಿಕೊಂಡಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಕನ್ನಡದ ಕವಿಗಳ, ಸಾಧಕರ ಭಾವಚಿತ್ರ ಹಾಗೂ ವಿವರಗಳನ್ನು ಅಳವಡಿಸಿದರೆ ಒಳ್ಳೆಯದೆಂದು ತಿಳಿಸಿದರು.

ಘಟಕದ ವ್ಯವಸ್ಥಾಪಕರಾದ ಗೀತಾ ಅವರು ಮಾತನಾಡಿ, ಜಾಗೃತಿ ಸಮಿತಿಯ ಈ ಕಾರ್ಯಕ್ರಮಗಳು ಶ್ಲಾಘನೀಯವಾದದ್ದು. ಇಲಾಖೆಯಲ್ಲಿ ಬಹುತೇಕ ಕನ್ನಡದಲ್ಲೇ ವ್ಯವಹರಿಸಲಾಗುತ್ತಿದೆ. ಕರ್ನಾಟಕದಲ್ಲಿರುವ ವರಿಗೆ ಭಾಷಾ ಅಭಿಮಾನ ಸ್ವಯಂ ಪ್ರೇರಿತವಾಗಿಯೇ ಬರಬೇಕು ಎಂದರು.
ಈ ಸಂದರ್ಭ ಕನ್ನಡ ಜಾಗೃತಿ ಸಮಿತಿಯ ಸದಸ್ಯರುಗಳಾದ ರಾಜು, ರಜಿತಾ ಕಾರ್ಯಪ್ಪ, ಭಾರತಿ ರಮೇಶ್, ಕಾಜೂರ್ ಸತೀಶ್, ಪ್ರಮುಖರಾದ ಪ್ರೇಮ್‍ನಾಥ್, ಲಕ್ಷ್ಮೀಕಾಂತ್ ಹಾಗೂ ಡಿಪೆÇೀದ ಸಿಬ್ಬಂದಿ ವರ್ಗದವರು ಹಾಜರಿದ್ದರು.

Translate »