ಮನಮುಟ್ಟುವ ಭಾವನೆಗಳಿರುವ ಹಳ್ಳಿ ಭಾಷೆ ಉಳಿಯಬೇಕು
ಕೊಡಗು

ಮನಮುಟ್ಟುವ ಭಾವನೆಗಳಿರುವ ಹಳ್ಳಿ ಭಾಷೆ ಉಳಿಯಬೇಕು

August 28, 2021

ಮಡಿಕೇರಿ, ಆ.27- ಹಳ್ಳಿ ಭಾಷೆಗಳಲ್ಲಿ ಭಾವನೆಗಳಿವೆ. ಅತ್ಯಂತ ಸುಲಭವಾದ ರೀತಿಯಲ್ಲಿ ಭಾವನೆಗಳು ಜನರ ಮನ ಮುಟ್ಟು ವಂತಾಗಲು ಆ ಭಾಷೆಗಳು ಉಳಿಯ ಬೇಕು ಎಂದು ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಎಸ್. ಅಂಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ನಗರದ ಗೌಡ ಸಮಾಜದ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ‘ದಶ ವರ್ಷ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅರೆಭಾಷಾ ಸಂಸ್ಕøತಿಯ ಸಂರಕ್ಷಣೆಗೆ ನಾವೇನು ಮಾಡಬೇಕೆನ್ನುವ ಕುರಿತು ಚಿಂತಿಸಿ, ಆ ನಿಟ್ಟಿನ ನಿರಂತರವಾದ ಚಟು ವಟಿಕೆಗಳ ಮೂಲಕ ಅರೆಭಾಷೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಸಚಿವ ಅಂಗಾರ ತಿಳಿಸಿದರು.

ಯಾವುದೇ ಜನಾಂಗದ ಉಳಿವಿಗೆ ಭಾಷೆಯ ಉಳಿವು ಅತ್ಯಂತ ಮಹತ್ವದ್ದು. ಅರೆಭಾಷಾ ಸಂಸ್ಕøತಿಯನ್ನು ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗೆ ಸೀಮಿತವಾಗುವ ಮೂಲಕ, ಆ ಸಮೂಹದ ಸಂಖ್ಯೆ ಚಿಕ್ಕದಾಗಿರಬಹುದು. ಆದರೆ, ಆ ಭಾಷೆಯೊಳಗಿನ ಭಾವನೆ ದೊಡ್ಡದು. ಪ್ರಸ್ತುತ ವ್ಯವಸ್ಥೆಯಲ್ಲಿ ವಿದ್ಯಾವಂತರಾದ ವರಲ್ಲಿ ನಮ್ಮ ಭಾಷಾ ಸಂಸ್ಕøತಿಯ ಭಾವನೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿ ಸಿದ ಸಚಿವರು, ಇಂತಹ ಸೂಕ್ಷ್ಮ ವಿಚಾರ ಗಳಿಂದ ನಮ್ಮನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗಬೇಕಾಗಿದೆ ಎಂದು ನುಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಅರೆಭಾಷೆಯನ್ನು ಮಾತನಾಡುವವರು ಎಲ್ಲೇ ಇರಲಿ, ಅವರೆಲ್ಲರು ಅರೆಭಾಷಿಕರಾ ಗಿಯೇ ಇರಬೇಕು ಎಂದು ಆಶಯ ವ್ಯಕ್ತಪಡಿಸಿ ದರು. ಅರೆಭಾಷಿಕರು ತಮ್ಮ ತನವನ್ನು ಬಿಟ್ಟು ಕೊಡದೆ, ಇತರೆ ಸಮಾಜ ಬಾಂಧವರನ್ನು ಟೀಕಿಸದೆ ಸೌಹಾರ್ಧತೆಯಿಂದ ಕಾಣುವ ಮೂಲಕ ಒಗ್ಗೂಡಿ ಮುನ್ನಡೆಯಬೇಕೆಂದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಯಾವುದೇ ಸಣ್ಣ ಸಮುದಾಯದ ಆಚಾರ ವಿಚಾರ ಸಂಸ್ಕøತಿಯನ್ನು ಸಂರಕ್ಷಿಸಿ ಬೆಳೆಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಸದಾ ನಂದಗೌಡ ಅವರು ಮುಖ್ಯಮಂತ್ರಿಯಾಗಿ, ಕೆ.ಜಿ.ಬೋಪಯ್ಯ ವಿಧಾನ ಸಭಾಧ್ಯಕ್ಷರಾ ಗಿದ್ದ ಅವಧಿಯಲ್ಲಿ ಅರೆಭಾಷಾ ಅಕಾಡೆಮಿ ಸ್ಥಾಪನೆಯಾಯಿತು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಅಕಾಡೆಮಿಗಳ ಮೂಲಕ ಯುವ ಸಮೂಹಕ್ಕೆ ಅರೆಭಾಷಾ ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯವಾಗಲಿ ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯರಾದ ಶಾಂತೆ ಯಂಡ ವೀಣಾ ಅಚ್ಚಯ್ಯ ಮಾತನಾಡಿ, ಅತ್ಯಂತ ಸಣ್ಣ ಸಮುದಾಯಗಳಾದ ಕೊಡಗಿನ ಅರೆಭಾಷಾ ಗೌಡರು ಮತ್ತು ಕೊಡವ ಸಮು ದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಭಿವೃದ್ಧಿ ಮಂಡಳಿಗಳನ್ನು ರಚಿಸ ಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಮಾತ ನಾಡಿ, ಗ್ರಾಮೀಣ ಭಾಗದ ಸೊಗಡು ಉಳಿ ದರಷ್ಟೆ ನಾಡಿನ ಪರಂಪರೆ ಉಳಿಯಲು ಸಾಧ್ಯ. ಈ ಹಿನ್ನೆಲೆ ಅರೆಭಾಷೆ ಮತ್ತು ಕೊಡವ ಸಾಹಿತ್ಯ ಅಕಾಡೆಮಿಗಳು ಒಗ್ಗೂಡಿ ಈ ನೆಲದ ಸಂಸ್ಕøತಿಯ ಬೆಳವಣಿಗೆಗೆ ಪೂರಕ ವಾದ ಕಾರ್ಯಯೋಜನೆಗಳನ್ನು ರೂಪಿಸು ವಂತಾಗಬೇಕು ಎಂದು ಹಾರೈಸಿದರು.

ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಅಕಾಡೆಮಿ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಅರೆಭಾಷಾ ಸಂಸ್ಕøತಿ ಪರಂಪರೆಯನ್ನು ಯುವ ಜನಾಂಗಕ್ಕೆ ತಲುಪಿಸುವ ‘ಕೊಂಡಿ’ಯಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಅಂಕಿತಾ ಸುರೇಶ್‍ಗೆ ಸನ್ಮಾನ: ಭಾರತ ಮಹಿಳಾ ಹಾಕಿ ತಂಡದ ಸಹಾಯಕ ತರ ಬೇತುದಾರರಾಗಿ ಕಾರ್ಯನಿರ್ವಹಿಸಿದ ಅಂಕಿತಾ ಸುರೇಶ್ ಅವರನ್ನು ಇದೇ ಸಂದರ್ಭ ಅಕಾಡೆಮಿ ವತಿಯಿಂದ ಗೌರವಿಸಲಾಯಿತು.

ಪುಸ್ತಕ-ಸಾಕ್ಷ್ಯಚಿತ್ರ ಬಿಡುಗಡೆ: ಸಮಾ ರಂಭದಲ್ಲಿ ಅರೆಭಾಷೆಯ ಲೇಖನಗಳನ್ನು ಹೊಂದಿರುವ ಡಿಜಿಟಲ್ ಪುಸ್ತಕ, ಕೊಡಗು ಗೌಡ ವಿದ್ಯಾನಿಧಿಯ ಸಾಕ್ಷ್ಯಚಿತ್ರ, ಅಕಾಡೆಮಿ ಮಾಜಿ ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಅವರ ಸಾಕ್ಷ್ಯಚಿತ್ರ, ಹರಿಸೇವೆಯ ಸಾಕ್ಷ್ಯ ಚಿತ್ರ, ಅರೆಭಾಷಾ ಹಾಡುಗಳ ಆಡಿಯೋ, ಅರೆಭಾಷಾ ಕಥೆಗಳ ಆನ್‍ಲೈನ್ ಆಡಿಯೋ ಮತ್ತು ಅಕಾಡೆಮಿಯ ವೆಬ್‍ಸೈಟ್‍ನ್ನು ಅತಿಥಿ ಗಣ್ಯರು ಇದೇ ಸಂದರ್ಭ ಉದ್ಘಾಟಿಸಿದರು.

ಅರೆಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಜಯರಾಂ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಅಕಾಡೆಮಿ ಸದಸ್ಯರಾದ ಡಾ.ದಯಾನಂದ ಕೂಡಕಂಡಿ, ಧನಂ ಜಯ ಅಗೋಳಿಕಜೆ, ಅಕಾಡೆಮಿ ರಿಜಿ ಸ್ಟ್ರಾರ್ ಚಿನ್ನಸ್ವಾಮಿ ಮತ್ತಿತ್ತರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

Translate »