ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಚಾಮರಾಜನಗರ

ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ

September 12, 2021

ಚಾಮರಾಜನಗರ, ಸೆ.11(ಎಸ್‍ಎಸ್)- ಅರಣ್ಯ ಸಂಪತ್ತಿನ ಸಂರಕ್ಷಣೆ ಮಾಡು ವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‍ಪುರಿ ಹೇಳಿದರು.

ನಗರದ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅರಣ್ಯ ಸೇರಿದಂತೆ ಕೆರೆ-ಕಟ್ಟೆ, ಬೆಟ್ಟ-ಗುಡ್ಡಗಳು ಸಾರ್ವಜನಿಕ ಆಸ್ತಿ ಗಳಾಗಿದ್ದು, ಅವುಗಳ ಸಂರಕ್ಷಣೆ ಪ್ರತಿ ಯೊಬ್ಬರ ಕರ್ತವ್ಯವಾಗಿದೆ ಎಂದು ಸಂವಿ ಧಾನದಲ್ಲಿ ಹೇಳಿದ್ದು, ಸಾರ್ವಜನಿಕರು ಹೇಗೆ ಹಕ್ಕುಗಳನ್ನು ಚಲಾಯಿಸುವರೋ ಹಾಗೆಯೇ ಕರ್ತವ್ಯಗಳನ್ನು ಪಾಲನೆ ಮಾಡ ಬೇಕು. ವಾಯುಮಾಲಿನ್ಯ, ಶಬ್ದಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ತಡೆಯಲು ಮುಂದಾಗಬೇಕು ಎಂದು ತಿಳಿಸಿದರು.

ಬಿಆರ್‍ಟಿ ಹುಲಿ ಯೋಜನೆ ನಿರ್ದೇಶಕ ಡಾ.ಸಂತೋಷ್‍ಕುಮಾರ್ ಮಾತನಾಡಿ, ರಾಜಸ್ಥಾನದ ಜೋಧ್‍ಪುರ ಮಹಾ ರಾಜರು ಹೊಸ ಅರಮನೆ ನಿರ್ಮಿಸಲು 1730ರಲ್ಲಿ ಅರಣ್ಯಕ್ಕೆ ತೆರಳಿ ಮರ ಕಡಿ ಯಲು ಮುಂದಾದಾಗ ಅಲ್ಲಿನ ಅರಣ್ಯ ನಿವಾಸಿಗಳಾದ ಬಿಸ್ನೋಯ್ ಸಮುದಾಯ ದವರು ಮರಕಡಿಯಲು ವಿರೋಧಿಸಿ ದರು. ಆ ಸಂದರ್ಭದಲ್ಲಿ 360ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು. ಅರಣ್ಯ ಸಂರಕ್ಷಣೆಗಾಗಿ ತ್ಯಾಗ ಬಲಿದಾನ ಮಾಡಿದ ದಿನವನ್ನು ಕೇಂದ್ರ ಸರಕಾರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಘೋಷಣೆ ಮಾಡಿತು ಎಂದು ಹೇಳಿದರು.
ರಾಜ್ಯದಲ್ಲಿ ಕಾಡುಗಳ್ಳ ವೀರಪ್ಪನ್‍ನಿಂದ 1991ರಲ್ಲಿ ಹತ್ಯೆಯಾದ ಡಿಸಿಎಫ್ ಶ್ರೀನಿ ವಾಸ್ ಅವರ ಸ್ಮರಣಾರ್ಥ ಕರ್ನಾಟಕ ಸರ್ಕಾರ ಸೆ.11 ಅನ್ನು ಅರಣ್ಯ ಹುತಾತ್ಮರ ದಿನವಾಗಿ ಘೋಷಣೆ ಮಾಡಿತು. ಕಾಡಿನ ಸಂರಕ್ಷಣೆ ಮಾಡುವ ಸಲುವಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಅರಣ್ಯ ಸಂರಕ್ಷ ಕರ ಆದರ್ಶ, ಪ್ರಾಮಾಣಿಕತೆಯನ್ನು ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆ ಯಲ್ಲಿ ಹುತಾತ್ಮರಾದ ರಾಜ್ಯದ ನಾನಾ ಜಿಲ್ಲೆಗಳ ಅರಣ್ಯಾಧಿಕಾರಿಗಳು, ವನಪಾಲ ಕರ ಹೆಸರನ್ನು ವಾಚನ ಮಾಡಲಾಯಿತು. ಅರಣ್ಯ ಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಸಾರ್ವಜನಿಕರ ಹೆಸರನ್ನು ಸೇರಿಸಬೇಕು ಎಂಬ ಜಿಲ್ಲಾ ನ್ಯಾಯಾ ಧೀಶರ ಸಲಹೆಗೆ ಸಂತೋಷ್ ಕುಮಾರ್ ಪ್ರತಿಕ್ರಿಯಿಸಿ ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆಯಲ್ಲಿ ಕೈ ಜೋಡಿಸುವ ಸಾರ್ವ ಜನಿಕರನ್ನು ಗುರುತಿಸಿ ಅವರ ಪಟ್ಟಿಯನ್ನು ವಾಚನ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ಹುತಾತ್ಮರ ಗೌರವಾರ್ಥ ಪೆÇಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಸಾಮಾ ಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೈ.ರಾಜು, ಎಸಿಎಫ್ ರಮೇಶ್ ಸೇರಿದಂತೆ ಪೆÇಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಹಾಜರಿದ್ದರು.

Translate »