ಕೊಡಗಿನಲ್ಲಿ ಶ್ರದ್ಧಾಭಕ್ತಿಯ ಸರಳ ಗಣೇಶ ಚತುರ್ಥಿ ಆಚರಣೆ
Uncategorized, ಕೊಡಗು

ಕೊಡಗಿನಲ್ಲಿ ಶ್ರದ್ಧಾಭಕ್ತಿಯ ಸರಳ ಗಣೇಶ ಚತುರ್ಥಿ ಆಚರಣೆ

September 12, 2021

ಮಡಿಕೇರಿ, ಸೆ.11- ಕೊಡಗಿನ ವಿವಿಧೆಡೆ ಗಣೇಶೋ ತ್ಸವ ಸಮಿತಿಗಳು ಗಣೇಶ ಚತುರ್ಥಿಯನ್ನು ಸಂಭ್ರಮ ದಿಂದ ಆಚರಿಸಿದವು. ಕೋವಿಡ್ ಮಾರ್ಗಸೂಚಿ ಬಿಗಿಯಾಗಿರುವ ಹಿನ್ನೆಲೆ ಕೆಲವು ಬಡಾವಣೆಗಳಲ್ಲಷ್ಟೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮೂರ್ತಿ ಆಕರ್ಷಕವಾಗಿದ್ದು, 5 ದಿನಗಳ ಕಾಲ ಪೂಜೆ ನಡೆಯ ಲಿದೆ. ಕೆಎಸ್‍ಆರ್‍ಟಿಸಿ ಡಿಪೋದಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಇತಿಹಾಸ ಪ್ರಸಿದ್ಧ ಕೋಟೆ ಮಹಾಗಣಪತಿ ದೇವಾ ಲಯ, ವಿಜಯ ವಿನಾಯಕ, ದೇಚೂರು ಗಣಪತಿ, ಅಶ್ವಿನಿ ಗಣಪತಿ, ಸಂಪಿಗೆಕಟ್ಟೆಯ ದೃಷ್ಟಿ ಗಣಪತಿ, ಹೊಸ ಬಡಾವಣೆಯ ಪ್ರಸನ್ನ ಗಣಪತಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಗಣರಾಜನ ಆರಾಧನೆ ನಡೆಯಿತು.

ಕೋಟೆ ಗಣಪತಿ ದೇವಾಲಯದಲ್ಲಿ ಅಭಿಷೇಕ, ಅಲಂಕಾರ, ಹೋಮ, ಹವನಾದಿ ವಿಶೇಷ ಪೂಜೆಗಳು ನಡೆದವು. ನೆರೆದಿದ್ದ ಭಕ್ತರು ಸಾವಿರಾರು ಈಡುಗಾಯಿ ಸೇವೆಯ ಮೂಲಕ ಹರಕೆ ತೀರಿಸಿದರು. ಮಳೆ ಬಿಡುವು ನೀಡಿದ್ದರಿಂದ ಹಬ್ಬದ ಕಳೆ ಹೆಚ್ಚಿತ್ತು.

ಕುಶಾಲನಗರ ವರದಿ: ಕುಶಾಲನಗರ ತಾಲೂಕು ಸುತ್ತಮುತ್ತಲ ಗ್ರಾಮಗಳಲ್ಲಿ ಕೋವಿಡ್ 3ನೇ ಅಲೆ ಭೀತಿಯ ನಡುವೆಯೂ ಗೌರಿಗಣೇಶ ಹಬ್ಬವನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಅನ್ವಯ ತಮ್ಮ ಮನೆ ಮನೆಗಳಲ್ಲಿ ಗಣೇಶ ಹಬ್ಬ ಆಚರಿಸಿ ಜನರು ಸಂಭ್ರಮಿಸಿದರು. ಕೊರೊನಾ ಮಹಾಮಾರಿಯನ್ನು ತೊಲಗಿಸುವಂತೆ ವಿಘ್ನೇಶ್ವರನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮನೆ ಮಂದಿ ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಗೌರಿ ಗಣೇಶನನ್ನು ಭಕ್ತಿಯಿಂದ ಪೂಜಿಸಿದರು. ಕೆಲವು ಬಡಾವಣೆಯಲ್ಲಿ ನಿವಾಸಿಗಳು ಸೇರಿ ಸಾಮೂಹಿಕ ವಾಗಿ ಗಣೇಶೋತ್ಸವ ಆಚರಿಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾ ಯಿತು. ಜೊತೆಗೆ ಕಾವೇರಿ ತೀರದಲ್ಲಿರುವ ಶ್ರೀಲಕ್ಷ್ಮಿ, ಅಯ್ಯಪ್ಪಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ಸುಬ್ರಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವರ ವಿಗ್ರಹ ಗಳಿಗೆ ವಿವಿಧ ಬಗೆಯ ಪುಷ್ಟಗಳಿಂದ ಅಲಂಕರಿಸಲಾಗಿತ್ತು.

ಹೂವು-ಹಣ್ಣು ಅಗತ್ಯ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಹಬ್ಬವನ್ನು ಆಚರಿಸಿ ಜನರು ಸಂಭ್ರಮಿಸಿ ದರು. ಹಬ್ಬದ ಅಂಗವಾಗಿ ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ನೀಡುವ ಮೂಲಕ ಶುಭ ಹಾರೈಸಿದರು.

ಸೋಮವಾರಪೇಟೆ ವರದಿ: ಸೋಮವಾರಪೇಟೆ ಪಟ್ಟಣ ಮತ್ತು ಗ್ರಾಮೀಣ ಭಾಗದ 36 ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಸರಳವಾಗಿ ಪ್ರತಿ ಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಶುಕ್ರವಾರ ಬೆಳಗ್ಗೆ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಇಲ್ಲಿನ ಸಾರ್ವಜನಿಕ ಗಣಪತಿ ಸಮಿತಿಯವರು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಗಳನ್ನು ಬೆಳಗ್ಗೆ ವಿವಿಧ ಪ್ರಜಾ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿದರು.

ಪಟ್ಟಣದ ದೇವಾಂಗ ಸಂಘ, ಕುರುಹಿನಶೆಟ್ಟಿ ಸಮಾಜ, ಬಸವೇಶ್ವರ ದೇವಾಲಯ, ಆಲೆಕಟ್ಟೆ ಸೇರಿದಂತೆ ಕೆಲವೆಡೆಗಳಲ್ಲಿ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪೊಲೀಸ್ ಠಾಣೆ ಸಮಿಪ ವಿದ್ಯಾರ್ಥಿಗಳು ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ವಿರಾಜಪೇಟೆ ವರದಿ: ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ 26 ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು ಹಾಗೂ ಕೋವಿಡ್-19 ನಿಯಮ ಪಾಲನೆಯಲ್ಲಿ ಮೊದಲ ಹಂತದ 15 ಸಮಿತಿಗಳ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯ ನಡೆಯಿತು.

ವರ್ಷಂಪ್ರತಿ ವಿರಾಜಪೇಟೆಯಲ್ಲಿ ಅದ್ಧೂರಿಯಿಂದ ಆಚರಿಸಿಕೊಂಡು ಬರುತ್ತಿದ್ದ ಐತಿಹಾಸಿಕ ಗಣೇಶೋ ತ್ಸವವು ಕೋವಿಡ್ ಕಾರಣದಿಂದ ಸರ್ಕಾರದ ನಿಯಮದಂತೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿ ಸುವ ಸಮಿತಿಗಳಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಭೆ ನಡೆಸಿ ಐದು ದಿನಗಳ ಒಳಗೆ ವಿಸರ್ಜಿ ಸುವಂತೆ ಆದೇಶ ನೀಡಲಾಗಿತ್ತು. ಈ ಸಂಬಂಧ ಸರ್ಕಾ ರದ ಮಾರ್ಗಸೂಚಿಯಂತೆ ಗಣೇಶ ಚತುರ್ಥಿಯಂದು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಹಾಗೂ ಪೂಜೆ ನಡೆಸಿ ಬಳಿಕ 15 ಸಮಿತಿಗಳು ಪೂಜಿಸಿದ್ದ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಸೆ.12 ರಂದು 8 ಮೂರ್ತಿಗಳು ವಿಸರ್ಜನೆ ಹಾಗೂ ದೇವಾ ಲಯಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿ ಯನ್ನು ಸೆ.14 ರಂದು ವಿಸರ್ಜಿಸಲಾಗುವುದು.

Translate »