`ಚಲುವ ಚಾಮರಾಜನಗರ’ ರಾಯಭಾರಿಯೂ ಆಗಿದ್ದ ಪವರ್‌ಸ್ಟಾರ್
ಚಾಮರಾಜನಗರ

`ಚಲುವ ಚಾಮರಾಜನಗರ’ ರಾಯಭಾರಿಯೂ ಆಗಿದ್ದ ಪವರ್‌ಸ್ಟಾರ್

October 30, 2021

ಚಾಮರಾಜನಗರ, ಅ.೨೯(ಎಸ್‌ಎಸ್)- ಜಿಲ್ಲೆಯ ಪ್ರವಾಸೋದ್ಯಮದ ಉತ್ತೇಜನ ಕ್ಕಾಗಿ ಜಿಲ್ಲಾಡಳಿತ ರೂಪಿಸಿದ್ದ `ಚಲುವ ಚಾಮರಾಜನಗರ’ಕ್ಕೆ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ರಾಯಭಾರಿ ಆಗಿದ್ದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ವಿಶೇಷ ಆಸಕ್ತಿಯಿಂದ `ಚಲುವ ಚಾಮ ರಾಜನಗರ’ ಯೋಜನೆ ರೂಪುಗೊಂ ಡಿತ್ತು. ಇದಕ್ಕೆ ರಾಯಭಾರಿಯನ್ನಾಗಿ ಯಾರನ್ನು ಮಾಡಬೇಕು ಎಂಬ ಪ್ರಶ್ನೆ ಜಿಲ್ಲಾಡಳಿತದ ಮುಂದೆ ಬಂದಾಗ, ಜಿಲ್ಲೆಯವರೇ ಆದ ವರನಟ ಡಾ.ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಅವರೇ ಇದಕ್ಕೆ ಸೂಕ್ತ ಎಂದು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿತ್ತು. ಆ ವೇಳೆ ಜಿಲ್ಲಾ ಉಸ್ತು ವಾರಿ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಖುದ್ದು ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ವಿಷಯ ಪ್ರಸ್ತಾ ಪಿಸಿದರು. ಇದಕ್ಕೆ ಸಂತೋಷದಿAದಲೇ ಒಪ್ಪಿಗೆ ಸೂಚಿಸಿ, `ಚಲುವ ಚಾಮರಾಜ ನಗರ’ದ ರಾಯಭಾರಿ ಆಗಿದ್ದರು ಪುನೀತ್ ರಾಜ್‌ಕುಮಾರ್.
`ಚಲುವ ಚಾಮರಾಜನಗರ’ದ ಅನು ಷ್ಠಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಬೇರೆಡೆ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್‌ಕುಮಾರ್ ಆನ್‌ಲೈನ್ ಲೈವ್‌ನಲ್ಲಿ ಸಚಿವ ಸುರೇಶ್‌ಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೊಂದಿಗೆ ಮಾತನಾಡಿದ್ದರು.

ಈ ವೇಳೆ `ಪುನೀತ್ ಚಲುವ ಚಾಮ ರಾಜನಗರದ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ಬಹಳ ಖುಷಿ ತಂದಿದೆ. ಇದಕ್ಕೆ ಬಹಳ ಸಂತೋಷದಿAದ ಒಪ್ಪಿದ್ದೇನೆ. ನನ್ನ ತಂದೆಯ ತವರಾದ ಚಾಮರಾಜನಗರ ಎಂದರೆ ನನಗೆ ಬಹಳ ಇಷ್ಟ. ಜಿಲ್ಲೆಯ ರಾಯಭಾರಿ ಮಾಡಿರು ವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದಿದ್ದರು.
ಜಿಲ್ಲೆಯ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಚಾಮರಾಜ ನಗರಕ್ಕೆ ಆಹ್ವಾನಿಸಿ ಕಾರ್ಯಕ್ರಮ ಮಾಡ ಬೇಕು ಎಂದು ಜಿಲ್ಲಾಡಳಿತ ತೀರ್ಮಾನಿ ಸಿತ್ತು. ಈ ವೇಳೆ ಕೊರೊನಾ ಕಾಣ ಸಿಕೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪುಗೊಳ್ಳಲಿಲ್ಲ.
ಜಿಲ್ಲೆಯ ಪ್ರವಸೋದ್ಯಮ ಅಭಿವೃದ್ಧಿ ಗೊಳಿಸಲು ರೂಪುಗೊಂಡಿದ್ದ `ಚಲುವ ಚಾಮರಾಜನಗರ’ದ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಇನ್ನು ನೆನಪು ಮಾತ್ರ. ಅವರ ಅಕಾಲಿಕ ಮರಣಕ್ಕೆ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.

Translate »