ಹುಬ್ಬಳ್ಳಿಗೆ ಹೋದಾಗಲೆಲ್ಲ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದ ಪುನೀತ್ ರಾಜ್‌ಕುಮಾರ್
ಮೈಸೂರು

ಹುಬ್ಬಳ್ಳಿಗೆ ಹೋದಾಗಲೆಲ್ಲ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದ ಪುನೀತ್ ರಾಜ್‌ಕುಮಾರ್

October 30, 2021

ಬೆಂಗಳೂರು, ಅ.೨೯-ಯುವಕರ ಕಣ್ಮಣ , ಯುವರತ್ನ, ಎಲ್ಲರ ಮೆಚ್ಚುಗೆ ಅಪುö್ಪ ಇನ್ನಿಲ್ಲ. ಈ ಸುದ್ದಿ ಪುನೀತ್ ಅಭಿ ಮಾನಿಗಳಿಗೆ ಬರಸಿಡಿಲಿನಂತೆ ಬಂದೆರ ಗಿದೆ. ಅದರಲ್ಲಿಯೂ ಉತ್ತರ ಕರ್ನಾ ಟಕದ ಜನತೆಗೆ ಈ ಸುದ್ದಿ ಅರಗಿಸಿಕೊಳ್ಳ ಲಾಗುತ್ತಿಲ್ಲ. ಅಪುö್ಪ ಉತ್ತರ ಕರ್ನಾಟಕದ ಜನತೆಗೆ ಪ್ರೀತಿಪಾತ್ರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕಣ ್ಣÃರು ಹಾಕಿರುವ ಹುಬ್ಬಳ್ಳಿ ಜನ, ಅವರ ನೆನಪುಗಳನ್ನು ಮೆಲುಕು ಹಾಕಿ, ಮತ್ತೆ ಹುಟ್ಟಿಬರಲೆಂದು ಸಿದ್ಧಾರೂಢರಲ್ಲಿ ಪ್ರಾರ್ಥಿಸಿದ್ದಾರೆ. ಯುವ ರತ್ನ, ಅಪುö್ಪ ಪುನೀತ್ ರಾಜ್‌ಕುಮಾರ್‌ಗೂ ಹುಬ್ಬಳ್ಳಿ ಜೊತೆ ಅವಿನಾಭಾವ ಸಂಬAಧ ವಿತ್ತು. ಅವರ ತಂದೆ ರಾಜ್‌ಕುಮಾರ್ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡಿಗೆ ಹೆಜ್ಜೆ ಹಾಕಿದಾಗಿನಿಂದ ಲಂತೂ ಪುನೀತ್ ಅವರಿಗೆ ಹುಬ್ಬಳ್ಳಿ ಮೇಲೆ ಎಲ್ಲಿಲ್ಲದ ಪ್ರೀತಿಯಿತ್ತು. ಹುಬ್ಬಳ್ಳಿಗೆ ಬಂದರೆ ಮೊದಲು ಭೇಟಿ ನೀಡುತ್ತಿದ್ದ ಸ್ಥಳ ಸಿದ್ಧಾರೂಢ ಮಠವಾಗಿತ್ತು. ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿಯೇ ಪುನೀತ್ ರಾಜಕುಮಾರ್ ಮುಂದಿನ ಕೆಲಸ ಮಾಡುತ್ತಿದ್ದರು.

ತಂದೆ ರಾಜ್‌ಕುಮಾರ್ ಸಹ ಸಿದ್ಧಾ ರೂಢ ಮಠದ ಪರಮ ಭಕ್ತರಾಗಿದ್ದರು. ತಂದೆಯನ್ನೇ ಅನುಕರಣೆ ಮಾಡುತ್ತಿದ್ದ ಅಪುö್ಪ, ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆದ ನಂತರ ಮುಂದಿನ ಕೆಲಸ ಮಾಡುತ್ತಿದ್ದರು. ಸಿನಿಮಾ ಪ್ರಚಾ ರವಿರಲಿ, ಶೂಟಿಂಗ್ ಇರಲಿ ಹುಬ್ಬಳ್ಳಿಗೆ ಪುನೀತ್ ಆದ್ಯತೆ ಕೊಡುತ್ತಿದ್ದರು.
ಯುವರತ್ನ ಸಿನಿಮಾ ಶೂಟಿಂಗ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ಕೊಟ್ಟಿ ದ್ದರು. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಈ ಚಿತ್ರದ ಬಹುತೇಕ ಶೂಟಿಂಗ್ ಧಾರ ವಾಡ ಮತ್ತು ಹುಬ್ಬಳ್ಳಿಗಳಲ್ಲಿ ನಡೆದಿತ್ತು. ಉತ್ತರ ಕರ್ನಾಟಕದ ಹಲವಾರು ಕಲಾ ವಿದರಿಗೂ ಸಿನೆಮಾದಲ್ಲಿ ಅವಕಾಶ ನೀಡಲಾಗಿತ್ತು. ಬೆಂಗಳೂರು, ಮೈಸೂರು ಬಿಟ್ಟರೆ ಅತ್ಯಧಿಕ ಅಪುö್ಪ ಅಭಿಮಾನಿಗಳು ಹುಬ್ಬಳ್ಳಿಯಲ್ಲಿದ್ದಾರೆ. ಹುಬ್ಬಳ್ಳಿಗೆ ಬಂದರೆ ಮಯೂರ ಹೋಟೆಲ್, ನವೀನ್ ಹೋಟೆಲ್ ಅಥವಾ ಡೆನಿಸನ್ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಪುನೀತ್, ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟವನ್ನೇ ಇಷ್ಟಪಡುತ್ತಿದ್ದರು. ಉತ್ತರ ಕರ್ನಾಟಕ ಶೈಲಿಯ ಮಾತು ಎಲ್ಲವೂ ಪುನೀತ್‌ಗೆ ಇಷ್ಟವಾಗಿತ್ತು. ಪುನೀತ್ ಅಕಾಲಿಕ ನಿಧನ ಆಘಾತ ತಂದಿದೆ ಎಂದು ಪುನೀತ್ ಆಪ್ತರು ಕಂಬನಿ ಮಿಡಿದಿದ್ದಾರೆ.

ಸಿದ್ಧಾರೂಢ ಮಠದಿಂದ ಸಂತಾಪ: ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಸಿಬ್ಬಂದಿ ಕಂಬನಿ ಮಿಡಿದಿದೆ. ಹುಬ್ಬಳ್ಳಿಗೆ ಬಂದಾಗ ತಪ್ಪದೇ ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದರು. ರಾಜ್ ಕುಮಾರ್ ಕಾಲದಿಂದಲೂ ಮಠಕ್ಕೆ ಅವರ ಕುಟುಂಬದ ನಿರಂತರ ಭೇಟಿ ನಡೆದಿತ್ತು. ಸಿದ್ಧಾರೂಢರ ಆಶೀರ್ವಾ ದದಿಂದಲೇ ಇಷ್ಟು ಮೇಲೆ ಬಂದಿ ರೋದಾಗಿ ರಾಜ್ ಕುಮಾರ್ ಹೇಳು ತ್ತಿದ್ದರು. ಹುಬ್ಬಳ್ಳಿಗೆ ಬಂದಾಗ ತಪ್ಪದೇ ಭೇಟಿ ನೀಡುವಂತೆ ಮಕ್ಕಳಿಗೆ ರಾಜ ಕುಮಾರ್ ಸಲಹೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಾಗಲೆಲ್ಲ ಪುನೀತ್ ಮತ್ತು ಇತರೆ ಸಹೋದರರು ಸಿದ್ಧಾರೂಢ ಮಠಕ್ಕೆ ಭೇಟಿ ಕೊಡುತ್ತಿದ್ದರು.

ಯುವರತ್ನ ಚಿತ್ರದ ಪ್ರೊಮೋಷನ್ ವೇಳೆಯಲ್ಲಿಯೂ ಪುನೀತ್ ರಾಜ ಕುಮಾರ್ ಸಿದ್ಧಾರೂಢ ಮಠಕ್ಕೆ ಭೇಟಿ ಕೊಟ್ಟಿದ್ದರು. ಮೊನ್ನೆಯಷ್ಟೇ ಬೆಂಗಳೂರಲ್ಲಿ ಸಿದ್ಧಾರೂಢರ ಕುರಿತ ಸಾಕ್ಷ÷್ಯಚಿತ್ರದ ಟ್ರೆöÊಲರ್ ಬಿಡುಗಡೆಯನ್ನೂ ಪುನೀತ್ ಮಾಡಿದ್ದರು. ಇಂಥವರು ಹೀಗೆ ಅಕಾ ಲಿಕವಾಗಿ ನಿಧನರಾಗುತ್ತಾರೆ ಅಂತ ಅಂದುಕೊAಡಿರಲಿಲ್ಲ ಎಂದು ಸಿದ್ಧಾ ರೂಢ ಮಠದ ಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ. ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಹೀಗಾಗುತ್ತದೆ ಎಂದುಕೊAಡಿರಲಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮಠದ ಕಾರ್ಯ ದರ್ಶಿ ಈರಣ್ಣ ತುಪ್ಪದ ಹಾಗೂ ಧರ್ಮ ದರ್ಶಿ ಸಿದ್ಧರಾಮಯ ಪ್ರಾರ್ಥಿಸಿದ್ದಾರೆ.

ಯುವ ರತ್ನನಿಗೆ ಹುಬ್ಬಳ್ಳಿಯಲ್ಲಿ ಸಂತಾಪ: ಯುವರತ್ನ, ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಸಂತಾಪ ಸೂಚಕ ಸಭೆ ಆಯೋಜಿಸಲಾಗಿತ್ತು. ಪುನೀತ್ ರಾಜ್ ಕುಮಾರ್ ಅಭಿಮಾನಿ ಗಳಿಂದ ಸಂತಾಪ ಸಭೆ ನಡೆಯಿತು. ಚೆನ್ನಮ್ಮ ವೃತ್ತದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾ ಯಿತು. ಸಿದ್ಧಾರೂಢ ಮಂತ್ರ ಪಠಣ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುನೀತ್ ಪರ ಘೋಷಣೆ ಕೂಗಿದ ಅಭಿಮಾನಿಗಳು, ಪುನೀತ್ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದರು. ಹುಬ್ಬಳ್ಳಿಯ ನಂಟನ್ನು ನೆನೆಸಿಕೊಂಡು ಅಭಿಮಾನಿಗಳು ಗದ್ಗದಿತರಾದರು. ನಮ್ಮೆಲ್ಲರ ಅಪುö್ಪ ಇನ್ನಿಲ್ಲ ಎನ್ನೋದು ಅರಗಿಸಿಕೊಳ್ಳಲಾಗ್ತಿಲ್ಲ. ಅವರ ಪ್ರೀತಿ ವಿಶ್ವಾಸಕ್ಕೆ ಹುಬ್ಬಳ್ಳಿ ಜನ ಭಾಜನರಾ ಗಿದ್ದೆವೆ. ಇಂತರ ಪ್ರೀತಿಪಾತ್ರ ವ್ಯಕ್ತಿಯನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ. ಕನ್ನಡ ಚಿತ್ರರಿಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.

 

Translate »