ಮೈಸೂರಲ್ಲಿ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ
ಮೈಸೂರು

ಮೈಸೂರಲ್ಲಿ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ

October 30, 2021

ಮೈಸೂರು, ಅ.೨೯(ಎಸ್‌ಪಿಎನ್)- ಕನ್ನಡ ನಾಯಕ ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನಕ್ಕೆ ಮೈಸೂರಿನ ಕನ್ನಡ ಪರ ವಿವಿಧ ಸಂಘಟನೆಗಳು ಶುಕ್ರವಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನುಡಿನಮನ ಸಲ್ಲಿಸಿವೆ.

ಮೈಸೂರು ಹವ್ಯಾಸಿ ಕಲಾವಿದರಿಂದ ಶ್ರದ್ಧಾಂಜಲಿ: ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಹಿರಿಯ ಕಲಾವಿದ ಮೈಮ್ ರಮೇಶ್ ಹಾಗೂ ರಾಜಶೇಖರ್ ಕದಂಬ ನೇತೃತ್ವದಲ್ಲಿ ಇತರೆ ಕಲಾವಿದರು ಕಲಾಮಂದಿರ ಆವರಣದಲ್ಲಿ ಕಿನ್ನರ ಜೋಗಿ ಆವರಣದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಮೊಂಬತ್ತಿ ಹಚ್ಚಿ ಕಂಬನಿ ಮಿಡಿದರು.
ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗ: ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗ ರಾಮೇಗೌಡ ನೇತೃತ್ವದಲ್ಲಿ ವಿವಿಧ ಮುಖಂಡರು ಮೈಸೂರು ಅರಮನೆ ಮುಂಭಾಗದ ಡಾ.ರಾಜ್‌ಕುಮಾರ್ ಪಾರ್ಕ್ ನಲ್ಲಿ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಿ, ಶದ್ಧಾಂಜಲಿ ಅರ್ಪಿಸಿದರು.
ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿ ಯಿಂದ ಶ್ರದ್ಧಾಂಜಲಿ: ನಟ ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಶ್ರೀ ನಿರಂಜನ ಮಠದ ಆವರಣದಲ್ಲಿ ಶ್ರೀ ನಿರಂಜನ ಮಠ ಉಳಿಸಿ ಹೋರಾಟ ಗಾರರು ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಸಲ್ಲಿಸಿ, ನುಡಿನಮನ ಸಲ್ಲಿಸಿದರು.

ಗಾಯತ್ರಿ ಟಾಕೀಸ್ ಸಿಬ್ಬಂದಿ, ಆಡಳಿತ ಮಂಡಳಿಯಿAದ ಕಂಬನಿ: ನಾಯಕ, ನಟ ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಗಾಯತ್ರಿ ಟಾಕೀಸ್ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಪುನೀತ್ ರಾಜ್‌ಕುಮಾರ್ ಅವರ ಬೃಹತ್ ಕಟೌಟ್ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕ್ರೀಡಾಪಟುಗಳಿಂದ ಶ್ರದ್ಧಾಂಜಲಿ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಹಿನ್ನೆಲೆಯಲ್ಲಿ ಜೆಎಲ್‌ಬಿ ರಸ್ತೆಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ವೃತ್ತದಲ್ಲಿ ಮೈಸೂರು ಕ್ರೀಡಾಪಟ್ಟುಗಳು, ಪುನೀತ್ ಅವರ ಭಾವಚಿತ್ರ ಹಿಡಿದು ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Translate »