‘ಯುವರತ್ನ’ನಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಇಂದು ಚಾ.ನಗರದಲ್ಲಿ ಸ್ವಯಂಪ್ರೇರಿತ ಬಂದ್
ಚಾಮರಾಜನಗರ

‘ಯುವರತ್ನ’ನಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಇಂದು ಚಾ.ನಗರದಲ್ಲಿ ಸ್ವಯಂಪ್ರೇರಿತ ಬಂದ್

October 30, 2021

ಚಾಮರಾಜನಗರ, ಅ.೨೯(ಎಸ್‌ಎಸ್)- ಹೃದಯಾಘಾತದಿಂದ ಇಂದು ವಿಧಿವಶ ರಾದ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸೂಚಿಸುವ ಹಿನ್ನೆಲೆ ಯಲ್ಲಿ ಶಿವಸೈನ್ಯ, ಅಪುö್ಪ ಬ್ರಿಗೇಡ್, ರಾಜ ರತ್ನ ಸಮಿತಿ ಹಾಗೂ ಡಾ.ರಾಜ್ ಕುಮಾರ್ ವಿವಿಧ ಅಭಿಮಾನಿಗಳ ಸಂಘಗಳ ಆಶ್ರಯದಲ್ಲಿ ಶನಿವಾರ(ಅ.೩೦) ಚಾಮರಾಜನಗರದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದಿಂದ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಪುನೀತ್ ರಾಜ್‌ಕುಮಾರ್ ವಿಧಿವಶ ರಾಗಿದ್ದಾರೆ ಎಂಬ ಸುದ್ದಿ ದೃಶ್ಯ ಮಾಧ್ಯಮ ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಅವರ ಅಭಿಮಾನಿಗಳಲ್ಲಿ ನೀರವ ಮೌನ ಆವರಿ ಸಿತು. ಬಳಿಕ ತಮ್ಮ ನೆಚ್ಚಿನ ನಾಯಕ ಪುನೀತ್ ಅವರ ಭಾವಚಿತ್ರವನ್ನು ಆಟೋದಲ್ಲಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣ ಗೆ ಮಾಡಲಾಯಿತು. ನಗರದ ಪ್ರಮುಖ ವೃತ್ತ ಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ನಮನ ಸಲ್ಲಿಸಲಾಯಿತು.

ಇಂದು ಬಂದ್‌ಗೆ ಕರೆ: ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನಗರ ದಲ್ಲಿ ನಾಳೆ(ಅ.೩೦) ಸ್ವಯಂಪ್ರೇರಿತ ಬಂದ್ ಆಚರಿಸುವಂತೆ ಅವರ ಅಭಿಮಾನಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಧ್ವನಿವರ್ಧ ಕದ ಮೂಲಕ ನಗರದಲ್ಲಿ ಪ್ರಚಾರ ಮಾಡ ಲಾಯಿತು. ಇದಲ್ಲದೆ ಅಂಗಡಿಗಳಿಗೆ ತೆರಳಿ ಶನಿವಾರ ಬಾಗಿಲು ತೆರೆಯದಂತೆ ಅಭಿ ಮಾನಿಗಳು ಮನವಿ ಮಾಡಿದರು.

ನಗರದ ಉಪ್ಪಾರಬೀದಿಯಲ್ಲಿ ಅಪುö್ಪ ಅಭಿಮಾನಿಗಳು ಆಯೋಜಿಸಿದ್ದ ಶ್ರದ್ಧಾಂ ಜಲಿ ಸಭೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇ ರಿಸಿದ ಆಜಾದ್ ಹಿಂದೂ ಸೇನೆ ಅಧ್ಯಕ್ಷ ಎಂ.ಎಸ್.ಪೃಥ್ವಿರಾಜ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ನಿಧನ ದಿಂದ ರಾಜ್ಯ, ದೇಶಕ್ಕೆ ತುಂಬಾಲಾರದ ನಷ್ಟವಾಗಿದೆ. ಅವರು ಚಾಮರಾಜನಗರ ಜಿಲ್ಲೆಯವರೇ ಆಗಿರುವುದರಿಂದ ಹಾಗೂ ಚೆಲುವ ಚಾಮರಾಜನಗರ ರಾಯಾಭಾರಿ ಯಾಗಿರುವ ಹಿನ್ನೆಲೆಯಲ್ಲಿ ಅವರ ಅಂತ್ಯ ಕ್ರಿಯೆ ದಿನವಾದ ಶನಿವಾರ ಪ್ರತಿಯೊಬ್ಬರು ಶಾಂತರೀತಿಯಿAದ ಇರಬೇಕು. ಜಿಲ್ಲೆಯಲ್ಲಿ ಸ್ವಯಂಪ್ರೇರಿತ ಬಂದ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಅಭಿ ಮಾನಿಗಳಾದ ಮಹೇಶ, ಬಸವ, ಮಹೇಶ್, ನಟ, ವೆಂಕಿ, ಬುಲೆಟ್ ಚಂದ್ರು, ಚಂದ್ರ ಶೇಖರ್, ಅನಂದ್, ಮಾಧು, ರಾಚಪ್ಪ, ದೇವರಾಜ್, ಯಜಮಾನ್ ಕೆ.ಟಿ.ನಾಗ ಶೆಟ್ಟಿ, ಆಟೋ ಸ್ವಾಮಿ, ರಘು, ಪುನಿ ಇತರರು ಭಾಗವಹಿಸಿದ್ದರು.

ಬೇಗೂರು ವರದಿ: ನಟ ಪುನೀತ್ ರಾಜ್ ಕುಮಾರ್ ಅವರು ನಿಧನ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಶನಿವಾರ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಕನ್ನಡದ ಮೇರುನಟ ಪುನೀತ್ ರಾಜ್‌ಕುಮಾರ್ ಅವರು ಇಂದು ನಿಧನರಾಗಿದ್ದು, ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ತುಂಬಲರಾದ ನಷ್ಟವಾಗಿದೆ. ಗ್ರಾಮದ ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್, ವೈನ್ಸ್ ಸ್ಟೊರ‍್ಸ್, ಸರ್ಕಾರಿ ಸ್ವಾಮ್ಯದ ಮದ್ಯ ದಂಗಡಿಗಳು, ಅಂಗಡಿ-ಮುAಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಸಹಕರಿಸಿ ಪುನಿತ್ ರಾಜ್ ಕುಮಾರ್‌ಗೆ ಸಂತಾಪ ಸೂಚಿಸಬೇಕು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಪಿ.ಚಂದ್ರ ಮನವಿ ಮಾಡಿದ್ದಾರೆ.

 

Translate »