ಗಾಜನೂರಿನ ಮೊಮ್ಮಗ ಪುನೀತ್ ರಾಜ್‌ಕುಮಾರ್
ಚಾಮರಾಜನಗರ

ಗಾಜನೂರಿನ ಮೊಮ್ಮಗ ಪುನೀತ್ ರಾಜ್‌ಕುಮಾರ್

October 30, 2021

ಚಾಮರಾಜನಗರ, ಅ.೨೯(ಎಸ್‌ಎಸ್)- ಇಂದು ವಿಧಿವಶರಾದ ಪುನೀತ್ ರಾಜ್ ಕುಮಾರ್ ಗಾಜನೂರಿನ ಮೊಮ್ಮಗ. ಗಡಿಜಿಲ್ಲೆ ಚಾಮರಾಜನಗರಕ್ಕೆ ಹೊಂದಿ ಕೊಂಡಿರುವ ತಮಿಳುನಾಡಿನ ತಾಳವಾ ಡಿಯ ಗಾಜನೂರಿನ ಮೊಮ್ಮಗ ಪುನೀತ್ ರಾಜ್‌ಕುಮಾರ್ ಅವರು ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು.

ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟೂರು ದೊಡ್ಡ ಗಾಜನೂರು. ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ಅವರಿಗೆ ತಮ್ಮ ತಂದೆಯ ಹುಟ್ಟೂರಾದ ದೊಡ್ಡ ಗಾಜನೂರು ಎಂದರೆ ಬಹಳ ಇಷ್ಟ. ಇದಕ್ಕಾಗಿ ಅವರು ಸಮಯ ಸಿಕ್ಕಗಾಗಲೆಲ್ಲ ದೊಡ್ಡಗಾಜನೂರಿಗೆ ಭೇಟಿ ನೀಡುತ್ತಿದ್ದರು. ಕುಟುಂಬ ಸಮೇತವಾಗಿ ಆಗಮಿಸುತ್ತಿದ್ದ ಪುನೀತ್, ಗಾಜನೂರಿನಲ್ಲಿ ಸಂತೋಷ ದಿಂದ ಕಾಲ ಕಳೆಯುತ್ತಿದ್ದರು.

ಗಾಜನೂರಿನಲ್ಲಿ ವಾಸವಿರುವ ಡಾ.ರಾಜ್ ಕುಮಾರ್ ಅವರ ತಂಗಿ ನಾಗಮ್ಮ ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಬಹಳ ಆತ್ಮೀಯವಾಗಿದ್ದರು. ರಾಜ್ ಕುಮಾರ್ ಅವರು ಜನಿಸಿದ್ದ ದೊಡ್ಡ ಗಾಜ ನೂರಿನಲ್ಲಿರುವ ನಾಡಂಚಿನ ಹಳೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು. ರಾಜ್ ಕುಮಾರ್ ಅವರು ಕುಳಿತುಕೊಳ್ಳುತ್ತಿದ್ದ ದೊಡ್ಡ ಆಲದ ಮರದ ಕೆಳಗೆ ಕುಳಿತು ಕೆಲಕಾಲ ವಿರಮಿಸುತ್ತಿದ್ದರು. ತೋಟ ಗಳಲ್ಲಿ ಸುತ್ತಾಡಿ ಖುಷಿ ಪಡುತ್ತಿದ್ದರು.

ಕಳೆದ ಜುಲೈ ೩೦ರಂದು ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಗಾಜನೂರಿಗೆ ಭೇಟಿ ನೀಡಿದ್ದರು. ಈ ವೇಳೆಗೆ ಮನೆ ಮುಂದೆ ಸೇರಿದ್ದ ಅಭಿಮಾನಿಗಳ ಜೊತೆಗೆ ಫೋಟೋಗೆ ಫೋಸ್ ನೀಡಿದ್ದರು.

೨೦೨೦ ಡಿಸೆಂಬರ್‌ನಲ್ಲಿ ಸಾಕ್ಷö್ಯ ಚಿತ್ರ ವೊಂದರ ಚಿತ್ರೀಕರಣಕ್ಕಾಗಿ ಗಾಜನೂರಿಗೆ ಬಂದಿದ್ದ ಪುನೀತ್, ಈ ವೇಳೆ ಬಿ.ಆರ್. ಹಿಲ್ಸ್ ಪ್ರದೇಶದಲ್ಲಿ ನಡೆದಿದ್ದ ಚಿತ್ರೀಕರಣ ದಲ್ಲಿ ಭಾಗವಹಿಸಿದ್ದರು. ಈಗ ಪುನೀತ್ ಅಗಲಿಕೆಯಿಂದ ಇವುಗಳು ನೆನಪುಗಳಾಗಿವೆ.

ಗಾಜನೂರಿನಲ್ಲಿ ನೀರವ ಮೌನ: ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ವರನಟ ಡಾ.ರಾಜ್‌ಕುಮಾರ್ ಅವರ ತವರೂರು ಗಾಜ ನೂರಿನಲ್ಲಿ ನೀರವ ಮೌನ ಆವರಿಸಿದೆ.
ಪುನೀತ್ ನಿಧನರಾಗಿದ್ದಾರೆ ಎಂಬ ಸುದ್ದಿ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗು ತ್ತಿದ್ದಂತೆಯೇ ಪುನೀತ್ ಅವರ ನೆಚ್ಚಿನ ಸ್ಥಳ ಗಾಜನೂರಿನ ಜನರು ಕಂಬನಿ ಮಿಡಿ ದರು. ಗ್ರಾಮದ ಹಲವು ಜನರು ಬೆಂಗ ಳೂರಿಗೆ ತೆರಳಿದರು. ದೊಡ್ಡ ಗಾಜನೂ ರಿನ ಮನೆಯಲ್ಲಿ ವಾಸವಿದ್ದ ರಾಜ್‌ಕುಮಾರ್ ಅವರ ಸಹೋದರಿ ಮತ್ತು ಮಕ್ಕಳು ಬೆಂಗ ಳೂರಿಗೆ ತೆರಳಿದರು. ಮನೆಗೆ ತಾಳವಾಡಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

Translate »