ಎತ್ತಿನಗಾಡಿಯಲ್ಲಿ ಮರಳು ಸಾಗಾಣಿಕೆಗೆ ಅವಕಾಶ ನೀಡಿ
ಚಾಮರಾಜನಗರ

ಎತ್ತಿನಗಾಡಿಯಲ್ಲಿ ಮರಳು ಸಾಗಾಣಿಕೆಗೆ ಅವಕಾಶ ನೀಡಿ

February 6, 2022

ಚಾಮರಾಜನಗರ, ಫೆ.5- ಎತ್ತಿನ ಗಾಡಿಯಲ್ಲಿ ಮರಳು ಸಾಗಾಣಿ ಕೆಗೆ ಮಾಡಲು ಅವಕಾಶ ನೀಡಬೇಕು ಎಂದು ಸಚಿವ ರಿಗೆ ಶಾಸಕ ಎನ್.ಮಹೇಶ್ ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರ ವ್ಯಾಪ್ತಿಯ ಕಾವೇರಿ ನದಿ ತೀರದ ಆರೇಳು ಹಳ್ಳಿಗಳಲ್ಲಿ ಜನರು ಎತ್ತಿನಗಾಡಿಯ ಮೂಲಕ ಮರಳು ಸಂಗ್ರಹಿಸಿ ಸುತ್ತಮುತ್ತ ಮಾರಾಟ ಮಾಡುತ್ತಿದ್ದಾರೆ. ಗಣಿ ಇಲಾಖೆ ಹಾಗೂ ಪೊಲೀಸರು ಇದಕ್ಕೆ ತಡೆ ಒಡ್ಡಿ ತೊಂದರೆ ಕೊಡುತ್ತಿ ದ್ದಾರೆ. 250 ಜನರ ರೌಡಿ ಶೀಟರ್ ತೆರೆದಿದ್ದಾರೆ. ಅವರ ಕುಟುಂಬ ತೊಂದರೆಗೆ ಸಿಲುಕಿದೆ. ಹಾಗಾಗಿ, ಎತ್ತಿನಗಾಡಿಯಲ್ಲಿ ಮರಳು ಸಾಗಣೆ ಮಾಡುವವರಿಗೆ ಅವಕಾಶ ನೀಡಬೇಕು ಎಂದರು.
ಎತ್ತಿನ ಗಾಡಿಯಲ್ಲಿ ಮರಳು ಸಾಗಾಣಿಕೆಗೆ ಮಾಡುವ ವರಿಂದ ರಾಯಧನವನ್ನೂ ಸಂಗ್ರಹಿಸಿ. ಒಂದು ವೇಳೆ ಅವರು ಮರಳು ಸಂಗ್ರಹ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಸಚಿವ ಹಾಲಪ್ಪ ಪ್ರತಿಕ್ರಿಯಿಸಿ, ಎತ್ತಿನಗಾಡಿಯಲ್ಲಿ ಮರಳು ಸಾಗಾಣೆ ಮಾಡುವವರಿಗೆ ತೊಂದರೆ ನೀಡ ಬಾರದು. ಎತ್ತಿನಗಾಡಿಗಳಲ್ಲಿ ಸಾಗಣೆ ಮಾಡುವ ಮರಳನ್ನು ಒಂದು ವೇಳೆ ಬ್ಲಾಕ್ ಮಾರ್ಕೆಟ್‍ನಲ್ಲಿ ಮಾರಾಟ ಮಾಡಿದರೆ ಅಥವಾ ಬೇರೆ ಊರುಗಳಿಗೆ ಸಾಗಿಸಲು ಲಾರಿಗಳಿಗೆ ತುಂಬುವ ಕೆಲಸ ಮಾಡಿದರೆ ಅಂತಹವರ ವಿರುದ್ಧ ಕ್ರಮವಹಿಸುವ ಮೂಲಕ ಈ ಚಟು ವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಆದರೆ, ಸಣ್ಣ ಪುಟ್ಟ ಕೆಲಸಗಳಿಗೆ ಮರಳು ಸಾಗಣೆ ಮಾಡುವ ಎತ್ತಿನ ಗಾಡಿಗಳನ್ನು ಹಿಡಿದು ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

Translate »