ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ: ಸೂಕ್ತ ಕ್ರಮಕ್ಕೆ ಶಾಸಕ ನರೇಂದ್ರ ಒತ್ತಾಯ
ಚಾಮರಾಜನಗರ

ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ: ಸೂಕ್ತ ಕ್ರಮಕ್ಕೆ ಶಾಸಕ ನರೇಂದ್ರ ಒತ್ತಾಯ

February 6, 2022

ಹನೂರು, ಫೆ.5(ಸೋಮು)- ರಾಯ ಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರವನ್ನು ತೆಗಿಸಿರುವ ಪ್ರಕರಣ ಸಂಬಂಧ ಸರ್ಕಾರ ಹಾಗೂ ಹೈಕೋರ್ಟ್ ತನಿಖೆ ನಡೆಸಿ ಸೂಕ್ತ ಕ್ರಮ ಕ್ರಮಕೈಗೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ಒತ್ತಾಯಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ರಾಯಚೂರಿನ ಗಣರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವ ಚಿತ್ರವನ್ನು ಜಿಲ್ಲಾ ನ್ಯಾಯಾಧೀಶರು ತೆಗೆಸಿ ಗಣರಾಜ್ಯೋ ತ್ಸವ ಆಚರಿಸಿದ್ದು, ಈ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೇ ಹಲವು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಗಳು ನಡೆಯುತ್ತಲೇ ಇದೆ. ಸಂವಿಧಾನ ವನ್ನು ರಕ್ಷಣೆ ಮಾಡುವ ಹೊಣೆ ಸರ್ಕಾ ರಕ್ಕೆ ಹಾಗೂ ನ್ಯಾಯಾಲಯಕ್ಕೆ ಇದೆ. ಆದರೆ, ಇಂತಹ ಘಟನೆ ನಡೆದಿದ್ದರೂ ಸರ್ಕಾರ ಹಾಗೂ ನ್ಯಾಯಾಲಯ ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.

ಸರ್ಕಾರ ಘಟನೆ ಸಂಬಂಧ ಇನ್ನಾ ದರೂ ಗಮನಹರಿಸಿ ಸರ್ಕಾರಿ ಅಭಿಯೋ ಜಕರನ್ನು ನಿಯೋಜಿಸುವುದರ ಮೂಲಕ ತನಿಖೆ ನಡೆಸಲು ಅಗತ್ಯ ಕ್ರಮವಹಿಸ ಬೇಕು. ಜೊತೆಗೆ ರಾಜ್ಯ ಉಚ್ಛ ನ್ಯಾಯಾ ಲಯ ಈ ಘಟನೆಗೆ ಸಂಬಂಧಿಸಿದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಕ ಮಾಡುವುದರ ಮೂಲಕ ತನಿಖೆ ಮಾಡಿ ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Translate »