ಕಾಲಮಿತಿಯಲ್ಲಿ ಗಣಿ ಇಲಾಖೆ ಕೆಲಸ ಪೂರ್ಣಗೊಳಿಸಿ
ಚಾಮರಾಜನಗರ

ಕಾಲಮಿತಿಯಲ್ಲಿ ಗಣಿ ಇಲಾಖೆ ಕೆಲಸ ಪೂರ್ಣಗೊಳಿಸಿ

February 6, 2022

ಚಾಮರಾಜನಗರ, ಫೆ.5- ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿ ದಂತೆ ಕೈಗೊಳ್ಳಬೇಕಿರುವ ಯಾವುದೇ ಪ್ರಕ್ರಿಯೆಯನ್ನು ವಿಳಂಬ ಮಾಡದೇ ನಿಯ ಮಾನುಸಾರ ಕಾಲಮಿತಿಯಲ್ಲಿ ಅಧಿಕಾರಿ ಗಳು ನಿರ್ವಹಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಆಚಾರ ಹಾಲಪ್ಪ ಬಸಪ್ಪ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಶನಿವಾರ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ತಿಂಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ನಡೆಸಬೇಕು. ಇದರಿಂದ ವಿಸ್ತøತವಾಗಿ ಚರ್ಚೆ ನಡೆದು ಅರ್ಜಿಗಳು ಬಾಕಿ ಉಳಿಯದೆ ಶೀಘ್ರವಾಗಿ ವಿಲೇವಾರಿ ಯಾಗಲಿದೆ. ಎಲ್ಲಾ ಕಾರ್ಯಗಳು ನಿಯ ಮಾನುಸಾರವಾಗಿ ನಡೆದು ಇಲಾಖೆಗೆ ಆದಾಯ ಬರಲಿದೆ. ಎನ್‍ಒಸಿ ಸೇರಿ ದಂತೆ ಅಗತ್ಯ ಪ್ರಕ್ರಿಯೆಯನ್ನು ನಿಯ ಮಾನುಸಾರ ಕಾಲಮಿತಿಯೊಳಗೆ ನಿರ್ವಹಿ ಸದೇ ಇರುವವರ ವಿರುದ್ಧ ಕ್ರಮ ತೆಗೆದು ಕೊಳ್ಳಿ ಎಂದು ಸಚಿವರು ಸೂಚಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಇಲಾಖೆಯಲ್ಲಿ ವಿಳಂಬ ಧೋರಣೆ ಅನು ಸರಿಸಬಾರದು. ನಿಯಮಾನುಸಾರ ನಿಗದಿತ ಅವಧಿಯೊಳಗೆ ಅಗತ್ಯ ಪ್ರಕ್ರಿಯೆ ಗಳು ಪೂರ್ಣಗೊಳ್ಳಬೇಕು ಎಂದರು.

ಶಾಸಕ ಎನ್.ಮಹೇಶ್ ಮಾತನಾಡಿ, ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗಬಾ ರದು. ಗ್ರಾಮಗಳು, ಸೂಕ್ಷ್ಮ ವಲಯಗಳು, ಅರಣ್ಯಕ್ಕೆ ತೊಂದರೆಯಾಗಬಾರದು. ಇಲಾಖೆ ಯಾವುದೇ ನಿಯಮನ್ನು ಉಲ್ಲಂ ಘನೆ ಮಾಡಬಾರದು. ಕರಿಕಲ್ಲು ಸಾಗಣೆ ಮಾಡುವ ಲಾರಿಗಳು ನಿಗದಿತ ತೂಕ ನಿಯಮ ಅನುಸರಿಸುತ್ತಿಲ್ಲ. ಇಲಾಖೆಯ ನಿಯಮ ಗಳನ್ನು ಪಾಲನೆ ಮಾಡುವಂತೆ ನೋಡಿ ಕೊಳ್ಳಬೇಕು. ರಾಜಸ್ವ ಸಂಗ್ರಹಣೆಯು ಗುರಿ ಅನುಸಾರ ನಡೆಯಬೇಕು ಎಂದರು.

ಸಚಿವ ಆಚಾರ ಹಾಲಪ್ಪ ಬಸಪ್ಪ ಮಾತ ನಾಡಿ, ಕಟ್ಟಡ ಕಲ್ಲು ಗಣಿಗಾರಿಕೆಯಲ್ಲಿ ಬ್ಲಾಸ್ಟಿಂಗ್ ಕಾರ್ಯ ನಿರ್ವಹಿಸಬೇಕಾದಲ್ಲಿ ಬ್ಲಾಸ್ಟಿಂಗ್ ಲೈಸನ್ಸ್ ಪಡೆದವರಿಗೆ ಮಾತ್ರ ಅವಕಾಶವಿರುತ್ತದೆ. ಇಲ್ಲದಿದ್ದರೆ ಯಾವುದೇ ಅಪಾಯ ಸಂಭವಿಸಿದರೆ ಅಧಿಕಾರಿಗಳೆ ಹೊಣೆಗಾರರಾಗಬೇಕಾಗುತ್ತದೆ. ಈ ವಿಷಯ ವನ್ನು ತುಂಬಾ ಗಂಭೀರವಾಗಿ ಪರಿ ಗಣಿಸಬೇಕು ಎಂದು ತಿಳಿಸಿದರು.

ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಮಾತನಾಡಿ, ಬ್ಲಾಸ್ಟಿಂಗ್ ಕಾರ್ಯ ನಿರ್ವಹಿ ಸುವ ಮೊದಲು ಎಚ್ಚರಿಕೆ ಇರಬೇಕು. ಯಾವುದೇ ನಿರ್ಲಕ್ಷ್ಯ ವಹಿಸಬಾರದು. ಜಿಲ್ಲೆಯಲ್ಲಿ ಅತ್ಯಂತ ಜಾಗರೂಕರಾಗಿ ಪರಿಶೀಲಿಸಿ ನಿಯಂತ್ರಣ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಆದ್ದರಿಂದ ಇದೇ ತಿಂಗಳು ಸಭೆ ನಡೆಸ ಲಾಗುವುದು. ಇನ್ನು ಮುಂದೆ ಪ್ರತಿ ತಿಂಗಳು ತಪ್ಪದೇ ಸಭೆ ನಡೆಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ ಮತ್ತು ಭೂ ವಿಜ್ಞಾನ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಡಾ.ವಿ.ರಾಮಪ್ರಸಾದ್ ಮನೋಹರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯಿತಿ ಸಿಇಓ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಬಿಆರ್‍ಟಿ ಹುಲಿ ಯೋಜನೆ ನಿರ್ದೇಶಕ ಸಂತೋಷ್ ಕುಮಾರ್ ಇತರರಿದ್ದರು.
ಸಭೆಯ ಬಳಿಕ ರೈತ ಮುಖಂಡರ ಅಹವಾಲುಗಳನ್ನು ಸಚಿವರು ಆಲಿಸಿದರು. ಸಭೆಗೂ ಮೊದಲು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಚಿವರು, ಶಾಸಕರು, ಗಣ್ಯರು ವಿಶೇಷ ಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನ, ಟಾಕಿಂಗ್ ಲ್ಯಾಪ್‍ಟಾಪ್, ಯಂತ್ರಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

Translate »