ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ
ಚಾಮರಾಜನಗರ

ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

September 28, 2021

ಚಾಮರಾಜನಗರ, ಸೆ.27- ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ದಲ್ಲಿ ಭಾನುವಾರ ಟ್ರೋಲ್ ಕ್ರಿಕೆಟರ್ಸ್ ಅಸೋಷಿಯೇಷನ್‍ನಿಂದ ಆಯೋಜಿಸಿದ್ದ ಸೌಹರ್ದಯುತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ಯುವಕರಲ್ಲಿ ಸೌಹಾರ್ದಯುತವಾದ ಕ್ರೀಡಾ ಮನೋಭಾವನೆ ಬೆಳೆಸುವ ಉದ್ದೇಶ ದಿಂದ ಬೆಂಗಳೂರಿನ ನಿಯಾರ್‍ಮಾಲ್ ಜೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಪ್ರಕಾಶ್ ಜುವೆಲರ್ಸ್ ಪ್ರಾಯೋಜ ಕತ್ವದೊಂದಿಗೆ ನಡೆದ ಪಂದ್ಯವನ್ನು ಡಿಹೆಚ್‍ಓ ಡಾ.ವಿಶ್ವೇಶ್ವರಯ್ಯ ಉದ್ಘಾಟಿಸಿದರು.
ಬಳಿಕ ನಡೆದ ಪಂದ್ಯಾವಳಿಯಲ್ಲಿ ಟ್ರೋಲ್ ಕ್ರಿಕೆಟ್ ಜಾಲಿ ಬಾಯ್ಸ್, ಟ್ರೋಲ್ ಕ್ರಿಕೆಟ್ ಚಾಲೆಂಜರ್ಸ್, ಟ್ರೋಲ್ ಕ್ರಿಕೆಟ್ ಡ್ರಗನ್ ಬಾಯ್ಸ್, ಟ್ರೋಲ್ ಕ್ರಿಕೆಟ್ ಡ್ರೀಮ್ ಬಾಯ್ಸ್ ತಂಡಗಳು ಪಾಲ್ಗೊಂಡು ಅಂತಿಮವಾಗಿ ಗಿರಿ ನಾಯಕತ್ವದ ಟ್ರೋಲ್ ಕ್ರಿಕೆಟ್ ಡ್ರೀಮ್ ಬಾಯ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಸಮಾರೋಪ ಸಮಾರಂಭ ದಲ್ಲಿ ಕೋವಿಡ್ ವಾರಿಯರ್ಸ್ ಆದ ನಂದೀಶ್ ಮೂಡಲಪುರ, ಮಹದೇವಸ್ವಾಮಿ, ರವಿ ಕುಮಾರ್ ಅವರನ್ನು ಟ್ರೋಲ್ ಕ್ರಿಕೆಟರ್ಸ್ ಅಸೋಸಿಯೇಷನ್ ನಿಂದ ಸನ್ಮಾನಿಸಲಾ ಯಿತು. ಪಂದ್ಯಾವಳಿಯಲ್ಲಿ ನಿಯಾರ್‍ಮಾಲ್ ಜೋನ್‍ನ ಶಿವಕುಮಾರ್, ನಗರಸಭೆ ಸದಸ್ಯ ಬಸವಣ್ಣ, ಆಜಾದ್ ಹಿಂದೂ ಸೇನೆ ರಾಜ್ಯಾಧ್ಯಕ್ಷ ಪೃಥ್ವಿರಾಜ್, ಜಿಲ್ಲಾಧ್ಯಕ್ಷ ಶಿವು ವಿರಾಟ್, ಟ್ರೋಲ್ ಕ್ರಿಕೆಟರ್ಸ್‍ನ ರವಿಶಂಕರ್, ಮಂಜು ಇದ್ದರು.

Translate »