ಮಡಿಕೇರಿ,ಸೆ.27-ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಮಸೂದೆ ಗಳು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರೆ ನೀಡಿದ್ದ ಭಾರತ್ ಬಂದ್ ಕೊಡಗಿನಲ್ಲಿ ಪ್ರತಿಭಟನೆಗಷ್ಟೇ ಸೀಮಿತವಾ ಯಿತು. ಜಿಲ್ಲೆಯಲ್ಲಿ ರೈತ ಸಂಘ ಮುಂದಾಳತ್ವ ದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಹಿತ ಸಂಘ- ಸಂಸ್ಥೆಗಳು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
ಮಡಿಕೇರಿ ವರದಿ: ನಗರದಲ್ಲಿ ಅಂಗಡಿ- ಮುಂಗಟ್ಟು, ವ್ಯಾಪಾರ ವಹಿವಾಟು, ವಾಹನ ಸಂಚಾರ ಎಂದಿನಂತಿತ್ತು. ಸುರಿ ಯುತ್ತಿದ್ದ ಮಳೆಯ ನಡುವೆಯೇ ಪ್ರತಿ ಭಟನಾಕಾರರು, ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಕೆಲಕಾಲ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ಕಾರ್ಯ ಕರ್ತರು, ಕಾಲ್ನಡಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ವಿರುದ್ಧ ಆಕ್ರೋಶ: ಜಿಲ್ಲಾ ಡಳಿತ ಭವನಕ್ಕೆ ಆಗಮಿಸಿದ ಪ್ರತಿಭಟನಾ ಕಾರರನ್ನು ಭವನದ ಪ್ರವೇಶದ್ವಾರವನ್ನು ಮುಚ್ಚುವ ಮೂಲಕ ತಡೆ ಹಿಡಿಯಲಾ ಯಿತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿ ಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಸ್ಥಳಕ್ಕೆ ಜಿಲ್ಲಾಧಿ ಕಾರಿಗಳು ಖುದ್ದಾಗಿ ಆಗಮಿಸಿ ಮನವಿ ಪತ್ರ ಸ್ವೀಕರಿಸಬೇಕು. ಇಲ್ಲವಾದಲ್ಲಿ ಇಲ್ಲಿಯೇ ಧರಣಿ ನಡಸುವುದಾಗಿ ಎಚ್ಚರಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಪ್ರವೇಶ ದ್ವಾರದ ಬಳಿ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.
ವರ್ತಕರಿಂದ ವಾಕ್ಸಮರ: ಮಡಿಕೇರಿಯ ಮಾರುಕಟ್ಟೆ ಆವರಣದ ವ್ಯಾಪ್ತಿಯಲ್ಲಿ ತೆರೆ ದಿದ್ದ ಅಂಗಡಿಗಳನ್ನು ಎಸ್‍ಡಿಪಿಐ, ಕಾಂಗ್ರೆಸ್ ಮತ್ತು ಹಾಗೂ ಇತರ ಸಂಘಟನೆಗಳ ಸದ ಸ್ಯರು ಮುಚ್ಚಿಸುತ್ತಿದ್ದುದು ಕಂಡು ಬಂತು. ಕೆಲವು ವರ್ತಕರು ಅಂಗಡಿಗಳನ್ನು ಮುಚ್ಚಲು ಸಾಧ್ಯವಿಲ್ಲ ಎಂದು ಪ್ರತಿಭಟನಾ ಕಾರರೊಂದಿಗೆ ವಾಕ್ಸಮರ ನಡೆಸಿದ ಪ್ರಸಂಗ ಜರುಗಿತು. ಮಾಹಿತಿ ಅರಿತ ನಗರ ವೃತ್ತ ನಿರೀಕ್ಷಕ ವೆಂಕಟೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಲವಂತದಿಂದ ಅಂಗಡಿ ಮುಂಗಟ್ಟು ಮುಚ್ಚಿಸದಂತೆ ಸಂಘಟನೆಗಳ ಸದಸ್ಯರಿಗೆ ತಾಕೀತು ಮಾಡಿದರು. ಈ ಸಂದರ್ಭ ಪ್ರತಿಭಟನೆಗೆ ಬೆಂಬಲ ನೀಡಿ ದವರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತದನಂತರವೂ ಅಂಗಡಿ ಮಳಿಗೆಗಳನ್ನು ಮುಚ್ಚಿಸುತ್ತಿದ್ದ ಎಸ್‍ಡಿ ಪಿಐನ ಅಮೀನ್ ಮೊಹಿಸಿನ್, ಕಾಂಗ್ರೆಸ್‍ನ ತೆನ್ನೀರಾ ಮೈನಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಕೊಡಗು ಜಿಲ್ಲಾ ರೈತ ಸಂಘದ ಜಿಲಾ ಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅಧ್ಯಕ್ಷ ನಿರ್ವಾಣಪ್ಪ, ಜೆಡಿಎಸ್‍ನ ಇಸಾಖ್‍ಖಾನ್, ಎಸ್‍ಡಿಪಿಐ ಮುಖಂಡ ಅಮೀನ್ ಮೊಹಿಸಿನ್, ಕಾಂಗ್ರೆಸ್ ಪ್ರಮುಖರಾದ ತೆನ್ನೀರಾ ಮೈನಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತರ ಧರ್ಮಜಾ ಉತ್ತಪ್ಪ, ಕೃಷಿ ಮೋರ್ಚಾದ ನೆರವಂಡ ಉಮೇಶ್, ಫ್ಯಾನ್ಸಿ ಮುತ್ತಣ್ಣ, ವಸತಿ ಹಕ್ಕು ಹೋರಾಟ ಸಮಿತಿಯ ಜಯಪ್ಪ ಹಾನಗಲ್, ಎಸ್‍ಡಿಪಿಐನ ಮನ್ಸೂರ್, ಕಾಂಗ್ರೆಸ್‍ನ ನಗರ ಸಭಾ ಸದಸ್ಯ ರಾಜೇಶ್ ಯಲ್ಲಪ್ಪ, ದಲಿತ ಪರ ಸಂಘಟನೆಯ ಹೆಚ್.ಎಂ.ಕಾವೇರಿ, ರೈತ ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.
ವಿರಾಜಪೇಟೆ ವರದಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ರೈತ ವಿರೋಧಿ ಮೂರು ಕಾಯ್ದೆಗಳನ್ನು ಕೂಡಲೇ ಹಿಂಪಡೆಯ ಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂ ತ್ರಿಸಬೇಕು ಎಂದು ಆಗ್ರಹಿಸಿ ವಿರಾಜಪೇಟೆ ಐಕ್ಯ ಹೋರಾಟ ಸಮಿತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾ ಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ವಿರುದ್ಧ ಘೋಷಣೆ ಕೂಗಿ ರಾಷ್ಟ್ರಪತಿ ಗಳಿಗೆ ತಾಲೂಕು ತಹಸೀಲ್ದಾರ್ ಟಿ.ಎಂ. ಪ್ರಕಾಶ್ ಮೂಲಕ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್, ಜೆಡಿಎಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ, ಎಐವೈಎಫ್ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾ, ರಕ್ಷಣಾ ವೇದಿಕೆ(ಶಿವರಾಮೆಗೌಡ ಬಣ), ಯುನೈ ಟೆಡ್ ಪ್ಲಾಂಟೇಶನ್ ವರ್ಕರ್ಸ್ ಯುನಿ ಯನ್, ಕಟ್ಟಡ ಕಾರ್ಮಿಕ ಸಂಘಟನೆ ಸೇರಿ ದಂತೆ 9 ಸಂಘಟನೆಗಳ ಮುಖಂಡರು ಕಾರ್ಯಕರ್ತರು ಪಟ್ಟಣದ ಗಡಿಯಾರ ಕಂಬದ ಬಳಿ ಸೇರಿ ಬಿಜೆಪಿ ನೇತೃತ್ವದ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಾಲೂಕು ಕಚೇರಿ ವರೆಗೂ ಬೃಹತ್ ಮೆರವಣಿಗೆ ನಡೆಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಹೆಚ್.ಆರ್. ಶಿವಣ್ಣ, ಪರಶುರಾಮ, ಪಪಂ ಸದಸ್ಯ ರಜನಿಕಾಂತ್, ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾ ಕೆ.ಟಿ.ಭಶೀರ್, ಜೆಡಿಎಸ್‍ನ ಎಸ್.ಹೆಚ್.ಮತೀನ್, ಪಿ.ಎ.ಮಂಜು ನಾಥ್, ಸಿಐಟಿಯು ಸಂಘಟನೆಯ ಎಚ್. ಎಂ.ಸೋಮಪ್ಪ, ಪಪಂ ಸದಸ್ಯ ಮಹ್ಮದ್ ರಾಫಿ, ಸಿ.ಕೆ.ಪ್ರಥ್ವಿನಾಥ್, ಡಿ.ಪಿ.ರಾಜೇಶ್, ಅಗಸ್ಟಿನ್ ಬೆನ್ನಿ, ಕಾಂಗ್ರೆಸ್ ಮುಖಂಡ ರಾದ ಸಿ.ಪಿ.ಕಾವೇರಪ್ಪ, ಎಂ.ಎಸ್.ಪೂವಯ್ಯ, ಪೊನ್ನಕ್ಕಿ, ದಿವ್ಯ, ದಲಿತ ಸಮಿತಿಯ ಹೆಚ್. ಜಿ.ಗೋಪಾಲ, ವಿದ್ಯಾಧರ, ಲವ, ಅನಂತ್, ಜೆಡಿಎಸ್‍ನ ಜಯಮ್ಮ, ಯೋಗೇಶ್ ನಾಯ್ಡು ಸೇರಿದಂತೆ ಸಂಘಟನೆಗಳ ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಿದ್ದಾಪುರ ವರದಿ: ಭಾರತ್ ಬಂದ್ ಬೆಂಬಲ ಸೂಚಿಸಿ ಕುಶಾಲನಗರ ತಾಲೂ ಕಿನ ನೆಲ್ಲಿಹುದಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಕಾಂಗ್ರೆಸ್, ಸಿಪಿಐ(ಎಂ) ಸೇರಿದಂತೆ ಇತರ ಸಂಘಟನೆಗಳ ಪ್ರಮುಖರು ನೆಲ್ಯ ಹುದಿಕೇರಿಯ ಮುಖ್ಯರಸ್ತೆಗಳಲ್ಲಿ ಪ್ರತಿಭ ಟನೆ ಮೆರವಣಿಗೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಕಾರ್ಮಿಕ ಮುಖಂಡ ಪಿ.ಆರ್.ಭರತ್ ಮಾತನಾಡಿದರು.
ನೆಲ್ಲಿಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಸಾಬು ವರ್ಗಿಸ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಕೆ.ಎಂ.ಸೈಯದ್ ಬಾವಾ ಮಾತ ನಾಡಿದರು. ಈ ಸಂದರ್ಭದಲ್ಲಿ ಪ್ರಮುಖ ರಾದ ಎ.ಕೆ.ಹಕೀಂ, ಸುಹಾದ ಅಶ್ರಫ್, ಸಫಿಯಾ ಮೊಹಮ್ಮದ್, ಉದಯ್ ಕುಮಾರ್, ಚಂದ್ರನ್, ರವಿ, ರಾಜು, ಮೋನಪ್ಪ, ಸಿಯಾಬ್, ಕೋಯಾ, ಸಲೀಂ ಹಾಜಿ, ಅಶೋಕ, ಸಂಸುದ್ದೀನ್, ಮುಸ್ತಫಾ ಸೇರಿದಂತೆ ಮತ್ತಿತರರಿದ್ದರು.
ಸೋಮವಾರಪೇಟೆ ವರದಿ: ಭಾರತ ಬಂದ್‍ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರದಿದ್ದವು. ಸೋಮವಾರ ಸಂತೆ ದಿನವಾಗಿದ್ದು, ಎಂದಿನಂತೆ ಸಂತೆ ನಡೆಯಿತು. ಆಟೋ, ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ಸಂಚಾರವಿತ್ತು. ಶಾಲಾ ಕಾಲೇಜು ತೆರೆದಿದ್ದವು. ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದರು. ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ವಿವಿಧ ಸಂಘಟನೆಗಳು ಪ್ರತಿ ಭಟಿಸಿ ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ದರು. ನಂತರ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ ನಡೆಸಿ, ಕೇಂದ್ರ ಹಾಗೂ ರಾಜ್ಯದ ನೀತಿ ವಿರುದ್ಧ ಧಿಕ್ಕಾರ ಕೂಗಿದರು. ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ನಡೆಸಿ, ಜೇಸಿ ವೇದಿಕೆಯಲ್ಲಿ ಧರಣಿ ನಡೆಸಿ ದರು. ತಹಸೀಲ್ದಾರ್ ಗೋವಿಂದರಾಜು ಮೂಲಕ ಸರ್ಕಾರಕ್ಕೆ ಸಂಘಟನೆಗಳು ಪ್ರತ್ಯೇಕ ವಾಗಿ ಮನವಿ ಪತ್ರ ಸಲ್ಲಿಸಿದವು.
ಪ್ರತಿಭಟನೆಯಲ್ಲಿ ವಿವಿಧ ರೈತ ಸಂಘ ಟನೆಗಳ ಪ್ರಮುಖರಾದ ಲಿಂಗೇರಿ ರಾಜೇಶ್, ಕೆ.ಎಂ.ದಿನೇಶ್, ಬಿ.ಪಿ.ಮೊಗಪ್ಪ, ಜಿ.ಎಂ. ಹೂವಯ್ಯ, ಕೆ.ಯು.ಚಂದ್ರಪ್ಪ, ಶಂಕರಪ್ಪ, ಯು.ಪಿ.ಜಯಶಂಕರ್, ಬಿ.ಪಿ.ಅನಿಲ್‍ಕುಮಾರ್, ಬಿ.ಬಿ.ಸತೀಶ್, ಹೆಚ್.ಎ.ನಾಗರಾಜ್, ಎಂ.ಸಿ. ಮುದ್ದಪ್ಪ, ಚಂಗಪ್ಪ, ದಯಾನಂದ, ರಂಜನ್, ಎ.ಆರ್.ಕುಶಾಲಪ್ಪ, ಎಂ.ಕೆ.ಕಾರ್ಯಪ್ಪ, ಕೆ.ಯು.ಸುಬ್ಬಯ್ಯ ಮತ್ತಿತರರಿದ್ದರು.