ಕುಶಾಲನಗರದಲ್ಲಿ ಕೈಲ್ ಪೆÇಳ್ದ್ ಸಂತೋಷ ಕೂಟ
ಕೊಡಗು

ಕುಶಾಲನಗರದಲ್ಲಿ ಕೈಲ್ ಪೆÇಳ್ದ್ ಸಂತೋಷ ಕೂಟ

September 28, 2021

ಕುಶಾಲನಗರ, ಸೆ.27-ಇಲ್ಲಿನ ಕೊಡವ ಸಮಾಜದಲ್ಲಿ ಭಾನುವಾರ ಕೈಲ್ ಪೆÇಳ್ದ್ ಸಂತೋಷ ಕೂಟ ನಡೆಯಿತು.
ಯುಕೊ ಸಂಘಟನೆ ಕೊಡಗು ಜಿಲ್ಲೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗಿನ ಮಣ್ಣು ಹಾಗೂ ಕೊಡವರ ನಡುವೆ ಅವಿನಾಭಾವ ಸಂಬಂಧವಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೊಡವ ಸಂಸ್ಕೃತಿ, ಆಚಾರ-ವಿಚಾರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸವಾಗಬೇಕಿದೆ. ಪೂರ್ವಜರ ವೀರ ಪರಂಪರೆ, ಅವರು ಹಾಕಿಕೊಟ್ಟ ಭದ್ರ ಬುನಾದಿಂದ ಕೊಡವರಿಗೆ ಪ್ರತ್ಯೇಕ ಗೌರವ ದೊರಕುತ್ತಿರುವುದು ಅಭಿಮಾನದ ಸಂಕೇತ. ಕೊಡವರು ಹಲವು ಸಮಸ್ಯೆಗಳಿಂದ ನಲುಗಿದ್ದರೂ ಕೂಡ ಇತರರಿಗೆ ಒಳಿತನ್ನೇ ಬಯಸುವ ಮನಸ್ಸುಳ್ಳವ ರಾಗಿದ್ದಾರೆ. ಅತಿ ಕಡಿಮೆ ಸಂಖ್ಯೆಯಲ್ಲಿರುವ ಕೊಡವರ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕಿದೆ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸಿ ಸೇವೆ ಸಲ್ಲಿಸಿದ ಸೇವಾ ಭಾರತಿ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಉಪಾಧ್ಯಕ್ಷ ಉಡುವೆರ ಹ್ಯಾರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಪಪಂ ಸದಸ್ಯ ಪ್ರಮೋದ್ ಮುತ್ತಪ್ಪ ಮತ್ತಿತರರಿದ್ದರು.

Translate »