ಪೊಲೀಸ್ ಜೀಪಿನಿಂದ ಹಾರಿ ಆರೋಪಿ ದುರಂತ ಸಾವಿನ ಪ್ರಕರಣ ಸರ್ಕಲ್ ಇನ್ಸ್‍ಪೆಕ್ಟರ್ ಸೇರಿ ಐವರು ಅಮಾನತು
ಚಾಮರಾಜನಗರ

ಪೊಲೀಸ್ ಜೀಪಿನಿಂದ ಹಾರಿ ಆರೋಪಿ ದುರಂತ ಸಾವಿನ ಪ್ರಕರಣ ಸರ್ಕಲ್ ಇನ್ಸ್‍ಪೆಕ್ಟರ್ ಸೇರಿ ಐವರು ಅಮಾನತು

December 1, 2022

ಚಾಮರಾಜನಗರ, ನ.30- ಬಾಲಕಿ ಅಪ ಹರಣ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳುವ ಸಲುವಾಗಿ ಚಲಿಸುತ್ತಿದ್ದ ಪೊಲೀಸ್ ಜೀಪಿನಿಂದ ಹಾರಿ ದುರಂತ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಯಳಂದೂರು ಪೊಲೀಸ್ ಠಾಣೆಯ ಸರ್ಕಲ್ ಇನ್‍ಸ್ಪೆಕ್ಟರ್ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಮಾದೇಗೌಡ, ಎಎಸ್‍ಐ ಚೆಲುವರಾಜು, ಮಹಿಳಾ ಕಾನ್‍ಸ್ಟೇಬಲ್ ಭದ್ರಮ್ಮ ಹಾಗೂ ಕಾನ್‍ಸ್ಟೇಬಲ್ ಸೋಮ ಶೇಖರ್ ಅಮಾನತುಗೊಂಡವರು. ಅಮಾನತು ಗೊಂಡಿರುವ ಐವರ ಪೈಕಿ ಶಿವಮಾದಯ್ಯ, ಮಾದೇಗೌಡ ಹಾಗೂ ಸೋಮಶೇಖರ್ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿದ್ದು, ತನಿಖೆ ನಡೆ ಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಟಿ.ಪಿ. ಶಿವಕುಮಾರ್ ಬುಧವಾರ ಸುದ್ದಿ ಗಾರರಿಗೆ ತಿಳಿಸಿದರು. ಈ ಪ್ರಕರಣದ ತನಿಖೆ ಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದ ಎಸ್‍ಪಿ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. ಆರೋಪಿಯನ್ನು ಕರೆದೊಯ್ಯವ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಯಳಂದೂರು ತಾಲೂಕಿನ ಕುಂತೂರು ಮೋಳೆ ಗ್ರಾಮದ ನಿಂಗರಾಜು (24) ವಿರುದ್ಧ ಅದೇ ಗ್ರಾಮದ ಬಾಲಕಿ ಅಪಹರಣದ ಬಗ್ಗೆ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ನಿಂಗರಾಜುವನ್ನು ಪೊಲೀಸರು ಜೀಪಿನಲ್ಲಿ ಮಂಗಳವಾರ ಕರೆದೊಯ್ಯುವಾಗ ಯರಿಯೂರು ಮತ್ತು ಮದ್ದೂರು ನಡುವೆ, ಜೀಪಿನಿಂದ ಹಾರಿ ತಪ್ಪಿಸಿ ಕೊಳ್ಳಲು ಯತ್ನಿಸಿದಾಗ ತೀವ್ರವಾಗಿ ಗಾಯ ಗೊಂಡು ಮೃತಪಟ್ಟಿದ್ದ. ಈ ಸಂಬಂಧ ಆತನ ಕುಟುಂಬದವರೊಂದಿಗೆ ಗ್ರಾಮಸ್ಥರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »