ಚಾ.ನಗರ ಜಿಲ್ಲೆಯಾದ್ಯಂತ ಭಾರೀ ಮಳೆ
ಚಾಮರಾಜನಗರ

ಚಾ.ನಗರ ಜಿಲ್ಲೆಯಾದ್ಯಂತ ಭಾರೀ ಮಳೆ

October 15, 2022

ಚಾಮರಾಜನಗರ,ಅ.14-ಜಿಲ್ಲೆಯಾ ದ್ಯಂತ ಗುರುವಾರ ಮಧ್ಯರಾತ್ರಿಯಿಂದ ಶುಕ್ರ ವಾರ ಮುಂಜಾನೆವರೆಗೆ ಧಾರಾಕಾರ ಮಳೆ ಸುರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ.

ಗುರುವಾರ ಮಧ್ಯರಾತ್ರಿ ಸುಮಾರು 2 ಗಂಟೆಯಿಂದ ಶುಕ್ರವಾರ ಬೆಳಗ್ಗೆ 6.30ರ ವರೆಗೂ ಸತತವಾಗಿ ಮಳೆ ಸುರಿಯತು.

ನಗರದಲ್ಲಿ ಅವಾಂತರ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಮಳೆಯಿಂದ ಅವಾಂ ತರ ಸೃಷ್ಟಿಯಾಯಿತು. ಜೋಡಿರಸ್ತೆಯಲ್ಲಿ ರುವ ಜಿಲ್ಲಾಡಳಿತ ಭವನ ಮುಂಭಾಗ ಯಥಾ ಪ್ರಕಾರ ಕೆರೆಯಂತಹ ಪರಿಸ್ಥಿತಿ ನಿರ್ಮಾಣ ವಾಗಿತ್ತು. ರಾಜಕಾಲುವೆ ತುಂಬಿದ್ದರಿಂದ ಭಾರೀ ಪ್ರಮಾಣದ ನೀರು ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹರಿಯಿತು. ಚರಂಡಿಗೆ ನೀರು ಹರಿದು ಹೋಗದ ಕಾರಣಕ್ಕೆ ಜಿಲ್ಲಾ ಡಳಿತ ಭವನ ನಿರ್ಮಾಣ ಮಾಡಿದ್ದ ಪೈಪ್ ಲೈನ್ ಮೇಲೂ ನೀರು ಹರಿದು ಜಿಲ್ಲಾಡಳಿತ ಭವನ ಆವರಣಕ್ಕೆ ನುಗ್ಗಿತು. ಮಳೆನೀರಿ ನಿಂದ ಕಾಲುವೆ ಉಕ್ಕಿ ಹರಿಯುತ್ತಿದ್ದ ಪರಿಣಾಮ ಶುಕ್ರವಾರ ಬೆಳಗ್ಗೆ ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಯಿತು. ಇದೇ ಕೆಲಸದಲ್ಲಿ ಹತ್ತಾರು ಪೌರಕಾರ್ಮಿಕರು ನಿರತ ರಾಗಿದ್ದರು. ಮಧ್ಯಾಹ್ನ 12 ಗಂಟೆಯಾದರೂ ಜೋಡಿರಸ್ತೆಯಲ್ಲಿ ನೀರು ನುಗ್ಗಿದ ಪರಿಣಾಮ ನಾಗರಿಕರು ಹಾಗೂ ವಾಹನ ಸವಾರರು ಪರದಾಡಿದರು.

ಮನೆಗಳು ಜಲಾವೃತ: ಮಳೆಯಿಂದ ನಗರದ 15ನೇ ವಾರ್ಡ್‍ನ ವ್ಯಾಪ್ತಿಗೆ ಬರುವ ಸೋಮಣ್ಣ ಲೇಔಟ್‍ನಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಇದ ರಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾ ಗಿದೆ. ಜಲಾವೃತಗೊಂಡಿದ್ದ ಮನೆಗಳಲ್ಲಿದ್ದ ವೃಯೋವೃದ್ಧರನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರಿಸಿ ಮುನ್ನೆಚ್ಚರಿಕೆ ವಹಿಸಿದರು. ವಾರ್ಡ್‍ನ ಸದಸ್ಯ ಆರ್.ಪಿ.ನಂಜುಂಡ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಭಟನೆ:ಜಲಾವೃತಗೊಂಡಿದ್ದ ಸೋಮಣ್ಣ ಲೇಔಟ್ ನಿವಾನಿಗಳು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಬೆಳಗ್ಗೆ ಪ್ರತಿಭಟಿಸಿದರು. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಬಡಾವಣೆಯ ಸಮಸ್ಯೆಗಳನ್ನು ಕೊಡಲೇ ಬಗೆಹರಿಸುವಂತೆ ವಾರ್ಡ್‍ನ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಮುಖಂಡ ಚಾ.ಗು.ನಾಗರಾಜು ಸೇರಿದಂತೆ ವಾರ್ಡ್‍ನ ನಿವಾಸಿಗಳು ಆಗ್ರಹಿಸಿದರು.

ಮತ್ತೆ ಕೋಡಿ ಬಿದ್ದ ಕೆರೆಗಳು: ಸತತ ಮಳೆ ಯಿಂದ ಸಂಪೂರ್ಣ ತುಂಬಿದ್ದ ಕೆರೆಗಳು ಇದೀಗ ಮತ್ತೆ ಕೋಡಿ ಬಿದ್ದಿವೆ. ಚಾಮ ರಾಜಗರ ತಾಲೂಕಿನ ಕೋಡಿಮೋಳೆ ಕೆರೆ, ಹರದನಹಳ್ಳಿಯ ಮಗದಕೆರೆ, ಅರಕಲವಾಡಿ ಕೆರೆ ಸೇರಿದಂತೆ ಅನೇಕ ಕೆರೆಗಳು ಭಾರೀ ಮಳೆಗೆ ಮತ್ತೆ ಕೋಡಿ ಬಿದ್ದಿವೆ.

ರಸ್ತೆ ಸಂಪರ್ಕ ಕಡಿತ: ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ಚಾಮರಾಜನಗರ ತಾಲೂಕಿನ ಕಿಲಗೆರೆ-ಮಾದಲವಾಡಿ ಗ್ರಾಮಗಳ ಸಂಪರ್ಕ ಕಡಿv Àವಾಯಿತು. ಈ ಮಾರ್ಗದಲ್ಲಿರುವ ಸೇತುವೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯು ತ್ತಿರುವುದರಿಂದ ಸಂಚಾರ ನಿಷೇಧಿಸಲಾಗಿದೆ.

ಬೆಳೆ ನಷ್ಟ:ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಮಳೆ ಬೀಳುತ್ತಿರುವ ಕಾರಣ ರೈತರ ಬೆಳೆ ನಷ್ಟವಾಗಿದೆ. ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಕೃಷಿ ಚಟುವಟಿಕೆ ಸಾಧ್ಯವಾಗದೇ ರೈತರು ಬೆಳೆದ ಬೆಳೆ ಕೈ ಸೇರದಂತಾಗಿದೆ.

Translate »