ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಹತ್ಯೆಗೆ ಖಂಡನೆ ಮೈಸೂರಲ್ಲಿ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ
ಮೈಸೂರು

ಮಳವಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಹತ್ಯೆಗೆ ಖಂಡನೆ ಮೈಸೂರಲ್ಲಿ ಮೊಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ

October 15, 2022

ಮೈಸೂರು, ಅ.14(ಎಸ್‍ಬಿಡಿ)- ಮಂಡ್ಯದ ಮಳವಳ್ಳಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕಾಮುಕ ಶಿಕ್ಷಕ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಘಟನೆಯನ್ನು ಮೈಸೂರಿನ ವಿವಿಧ ಸಂಘಟನೆಗಳು ಖಂಡಿಸಿ, ಮೇಣದ ದೀಪ ಬೆಳಗಿಸುವ ಮೂಲಕ ಮೃತ ಬಾಲಕಿಗೆ ಶ್ರದ್ಧಾಂಜಲಿ ಸಲ್ಲಿಸಿದವು.

`ಟೀಂ ಮೈಸೂರು ಪ್ರತಿಷ್ಠಾನ’ದ ವತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ, ಮೊಂಬತ್ತಿ ಹೊತ್ತಿಸಿ ಬಾಲಕಿ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ಪೈಶಾಚಿಕ ಕೃತ್ಯವೆಸಗಿದ ಕಾಮುಕನನ್ನು ಕೂಡಲೇ ಗಲ್ಲಿಗೇರಿಸಬೇಕು. ಇಂತಹ ಕೃತ್ಯ ಮರುಕಳಿಸದಂತೆ ಶಿಕ್ಷೆಯನ್ನು ಕಠಿಣಗೊಳಿಸ ಬೇಕೆಂದು ಇದೇ ವೇಳೆ ಆಗ್ರಹಿಸಲಾಯಿತು.

ಈ ವೇಳೆ ಟೀಂ ಮೈಸೂರು ಸಂಚಾಲಕ ಗೋಕುಲ್ ಗೋವರ್ಧನ್, ಸಹ ಸಂಚಾಲಕ ಯಶವಂತ, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ಸೋಮಶೇಖರ್ ರಾಜು, ತಂಡದ ಅನಿಲ್ ಜೈನ್, ಕಿರಣ್ ಜೈರಾಮ್ ಗೌಡ, ಆನಂದ್, ಮುರಳಿ, ಲಿಂಗರಾಜು, ಯತೀಶ್, ಸುನೀಲ್, ಸುಮಂತ್, ಗಣೇಶ, ರಘು ಮತ್ತಿತರರಿದ್ದರು.

ವಿದ್ಯಾರ್ಥಿಗಳ ಖಂಡನೆ: ಮೈಸೂರು ವಿಶ್ವವಿದ್ಯಾನಿಲ ಯದ ಸಂಶೋಧಕರ ಸಂಘದ ವತಿಯಿಂದ ಮಾನಸ ಗಂಗೋತ್ರಿ ಗಡಿಯಾರ ಗೋಪುರದ ಬಳಿ ಮೃತ ಬಾಲಕಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಪಾಪಿಗೆ ಕ್ಷಮೆಯೇ ಇಲ್ಲ. ಇಂತಹ ನೀಚ ಘಟನೆಗಳು ಮತ್ತೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸ ಬೇಕೆಂದು ಶ್ರದ್ಧಾಂಜಲಿ ಸಭೆಯಲ್ಲಿದ್ದ ಸಂಶೋಧನಾ ವಿದ್ಯಾರ್ಥಿಗಳು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಮಹೇಶ್ ಸೊಸ್ಲೆ, ಅಧ್ಯಕ್ಷ ನಟರಾಜ್ ಶಿವಣ್ಣ, ಉಪಾಧ್ಯಕ್ಷ ರಾಜೇಶ್, ಸಂಶೋ ಧನಾ ವಿದ್ಯಾರ್ಥಿಗಳಾದ ಪಾರ್ಥ, ರಾಘವೇಂದ್ರ, ನಂಜುಂಡಸ್ವಾಮಿ, ಪ್ರವೀಣ್, ರಂಗನಾಥ್, ನಾಗಮಲ್ಲು, ಮುತ್ತುರಾಜ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »