ಕೆಆರ್‍ಎಸ್ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಮಂಡ್ಯ

ಕೆಆರ್‍ಎಸ್ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

October 29, 2022

ಶ್ರೀರಂಗಪಟ್ಟಣ, ಅ.28(ವಿನಯ್ ಕಾರೇಕುರ)- ಮತ್ತೆ ಮತ್ತೆ ಕೆಆರ್‍ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಮಾಡಿದೆ.
ಕಳೆದ ಶನಿವಾರ ಕೆ.ಆರ್.ಎಸ್ ಅಣೆಕಟ್ಟೆ ಮೇಲೆ ಚಿರತೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಇಂದು ಸಂಜೆ 6 ಗಂಟೆ ವೇಳೆಗೆ ಬೃಂದಾವನದ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ ವಾಗಿ ಮತ್ತೆ ಆತಂಕ ಸೃಷ್ಟಿ ಮಾಡಿದೆ.

ಅಣೆಕಟ್ಟೆ ಪಕ್ಕದಲ್ಲಿರುವ ನಾರ್ತ್ ಗೇಟ್‍ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ್ ಗಸ್ತು ತಿರುಗುವಾಗ ಚಿರತೆಯ ಚಲನವಲನ ಗಮನಿಸಿ ಅನುಮಾನಗೊಂಡು ಸಿಸಿಟಿವಿ ಯಲ್ಲಿ ಪರೀಕ್ಷಿಸಿದಾಗ ಚಿರತೆ ತೋಟಗಾ ರಿಕೆಯಿಂದ ಅಣೆಕಟ್ಟೆ ಪಕ್ಕದಲ್ಲಿರುವ ನಾರ್ತ್ ಗೇಟ್ ಹಾದು ಹೋಗಿರುವುದು ಖಚಿತವಾಗಿದೆ. ತಕ್ಷಣ ಅವರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ವಿಷಯ ತಿಳಿಸಿ, ಬೃಂದಾವನದ ಎಲ್ಲಾ ದೀಪಗಳನ್ನು ಆರಿಸಿ ಪ್ರವಾಸಿಗರನ್ನು ಬೃಂದಾವನದಿಂದ ಹೊರ ಕಳುಹಿಸಿದರು.

ಸತತ ಹುಡುಕಾಟ ನಡೆÀಸಿದರೂ ಚಿರತೆಯ ಸುಳಿವು ದೊರೆಯದ ಕಾರಣ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಪ್ರವಾಸಿಗರಿಗೆ ಪ್ರವೇಶವನ್ನು ಮುಕ್ತಗೊಳಿಸಿದ್ದರು. ಈಗ ಮತ್ತೆ ಚಿರತೆ ಕಾಣಿಸಿಕೊಂಡು ಸಾರ್ವ ಜನಿಕರು, ಪ್ರವಾಸಿಗರು ಹಾಗೂ ಸಿಬ್ಬಂದಿ ಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಇಂದು ಸಂಜೆ 6 ಗಂಟೆಯಲ್ಲಿ ಚಿರತೆ ಬಂದ ವಿಷಯ ತಿಳಿಯುತ್ತಿದ್ದಂತೆ ಬೃಂದಾವನ ದಲ್ಲಿದ್ದ ಪ್ರವಾಸಿಗರನ್ನು ಹೊರ ಕಳುಹಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಆದರೆ ರಾತ್ರಿ 8.30 ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಆದ ಕಾರಣ ನಾಳೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಅವರ ರಕ್ಷಣೆ ಮೇರೆಗೆ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿ.ಎನ್.ಎನ್ ಎಇಇ ಫಾರುಕ್ ಅಬು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಒಂದೇ ವಾರದಲ್ಲಿ ಎರಡೆರಡು ಬಾರಿ ಚಿರತೆ ಕಾಣಿಸಿಕೊಂಡರೂ ಅಧಿಕಾರಿಗಳು ಮಾತ್ರ ಇದನ್ನು ಹಿಡಿಯದೆ ಪ್ರವಾಸಿಗರ ಪ್ರವೇಶಕ್ಕೆ ತರಾತುರಿಯ ನಿರ್ಧಾರ ಕೈಗೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

ಹಣ ವಾಪಸ್ ಕೇಳಿದ ಪ್ರವಾಸಿಗರು: ಚಿರತೆ ಕಾಣಿಸಿಕೊಂಡ ತಕ್ಷಣ ಅಧಿಕಾರಿ ಗಳು ಪ್ರವಾಸಿಗರನ್ನು ಬೃಂದಾವನದಿಂದ ಹೊರ ಹೋಗಲು ಸೂಚಿಸಿದ್ದಾರೆ. ಈ ವೇಳೆ ನೂರಾರು ಪ್ರವಾಸಿಗರು ನಮ್ಮ ಟಿಕೆಟ್ ಹಣವನ್ನು ವಾಪಸ್ ಕೊಡುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. ಇದಕ್ಕೆ ಅಧಿಕಾರಿ ಗಳು ನಿರಾಕರಿಸಿದ್ದಾರೆ. ಈ ವೇಳೆ ಅಧಿಕಾ ರಿಗಳು ಹಾಗೂ ಪ್ರವಾಸಿಗರ ನಡುವೆ ಕೆಲ ಕಾಲ ವಾಗ್ವಾದ ನಡೆದು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Translate »