ಮಂಡ್ಯ,ಅ.28- ರಾಜ್ಯದ ಜನರ ಆಶೀರ್ವಾ ದದಿಂದ ಐದು ವರ್ಷ ಮುಖ್ಯಮಂತ್ರಿ ಯಾಗಿ ಆಡಳಿತ ನಡೆಸಿದ ನಾನು ಯಾರೊ ಬ್ಬರಿಂದಲೂ ಛೀ… ಥೂ… ಎನಿಸಿಕೊಂಡು ಅಧಿಕಾರ ನಡೆಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದೆ ತಟ್ಟಿಕೊಂಡು ಹೇಳಿದರು.
ಶುಕ್ರವಾರ ತಾಲೂಕಿನ ಬಸರಾಳು ಹೋಬಳಿಯ ತಿರುಮಲಾಪುರ ಗ್ರಾಮದಲ್ಲಿ ಶ್ರೀ ಹುಲಿಯೂರಮ್ಮದೇವಿ (ಹಳೇ ಊರಮ್ಮ) ದೇವಾಲಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಸ್ಥಾಪಿತವಾಗಿರುವ ಶ್ರೀ ಹುಲಿಯೂರಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಉದ್ಘಾಟನಾ ಮಹೋತ್ಸವದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅದನ್ನೂ ಮೀರಿ 30ಕ್ಕೂ ಅಧಿಕ ಹೆಚ್ಚುವರಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಎಲ್ಲಾ ಜಾತಿಯ ಬಡವರಿಗೂ ಯೋಜನೆಗಳನ್ನು ನೀಡಿದ್ದೇವೆಯೇ ಹೊರತು, ಕೆಲವೇ ಜಾತಿಗಳಿಗೆ ಸೀಮಿತ ವಾಗಿ ಅಧಿಕಾರ ನಡೆಸಲಿಲ್ಲ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಎಲ್ಲವನ್ನು ಹಾಳು ಮಾಡುತ್ತಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಇಂತಹವರು ಮತ್ತೆ ರಾಜ್ಯದಲ್ಲಿ ಅಧಿಕಾರ ನಡೆಸಬೇಕೇ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 2 ವರ್ಷದಿಂದ ಮಕ್ಕಳಿಗೆ ಸ್ಕಾಲರ್‍ಶಿಪ್ ಕೊಟ್ಟಿಲ್ಲ. ವಿದ್ಯಾಸಿರಿ ಯೋಜನೆ ಯನ್ನೂ ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆ. ಎಸ್ಸಿ-ಎಸ್ಟಿಗಳ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ? ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರನ್ನು ಮುಂಬಾಗಿಲಿನಿಂದ ಓಡಿಸೋಣ ಎಂದು ಕರೆ ನೀಡಿದರು.
2023ರಲ್ಲಿ ನಾವು ಅಧಿಕಾರಕ್ಕೆ ಬಂದರೆ ಜನಪರವಾದ ಕೆಲಸ ಮಾಡುತ್ತೇವೆ. ಮೈಷು ಗರ್ ಕಾರ್ಖಾನೆಗೆ ಘೋಷಿಸಿದ್ದ ಅನು ದಾನ ಬಿಡುಗಡೆ ಮಾಡಿ ಕಾರ್ಖಾನೆಯನ್ನು ಮಾದರಿಯಾಗಿ ಅಭಿವೃದ್ಧಿಪಡಿಸುತ್ತೇವೆ. ಜನರಿಗೆ ಉಪಯೋಗವಾಗುವ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಘೋಷಿಸಿದರು.
ದೇವರು ಎಲ್ಲಾ ಕಡೆ ಇದ್ದಾನೆ ಎಂದು ನಾವು ಓದಿದ್ದೇವೆ ಮತ್ತು ತಿಳಿದಿದ್ದೇವೆ. ದೇವರು ನಮ್ಮಲ್ಲೂ ಸಹ ಇದ್ದಾನೆ. ಪ್ರತಿನಿತ್ಯ ಮಾಡುವ ಕೆಲಸಗಳಿಂದ ದೇವರು ನಾವು ಒಳ್ಳೆಯದು ಮಾಡುತ್ತಿದ್ದೀವಾ ಅಥವಾ ಕೆಟ್ಟದ್ದನ್ನು ಮಾಡುತ್ತಿದ್ದೀವಾ ಎಂಬುದನ್ನು ನೋಡುತ್ತಿರುತ್ತಾನೆ. ಜನರಿಗೆ ಶ್ರೇಯಸ್ಸನ್ನು ಬಯಸುವ ಕೆಲಸ ಮಾಡಿದಾಗ ದೇವರು ನಮಗೆ ಒಳಿತನ್ನು ಮಾಡುತ್ತಾನೆ ಎಂದರು.
ಕೇವಲ ದೇವಸ್ಥಾನವನ್ನು ಕಟ್ಟಿದರೆ ಸಾಲದು, ಪ್ರತಿಮೆಗಳನ್ನು ಸ್ಥಾಪಿಸಿದರೆ ಸಾಲದು, ನಾವೆ ಲ್ಲರೂ ಸತ್ಯದಿಂದ ನಡೆದುಕೊಳ್ಳಬೇಕು. ಆಗ ಸತ್ಯವೇ ದೇವರು ಎಂಬುದು ನಮಗೆ ಅರ್ಥವಾಗುತ್ತದೆ. ಸ್ವರ್ಗ ಮತ್ತು ನರಕ ಎರಡೂ ಇಲ್ಲೇ ಇವೆ. ನಾವು ಸತ್ಯದಿಂದ ನಡೆದುಕೊಂಡರೇ ಅದೇ ಸ್ವರ್ಗ. ನಾವು ಸುಳ್ಳು ಹೇಳಿ ಜೀವನ ಮಾಡಿದರೆ ಅದೇ ನರಕ ಎಂದು ಅಭಿಪ್ರಾಯಪಟ್ಟರು.
ದೇವರ ಮುಂದೆ ನೈವೇದ್ಯಕ್ಕೆ ಹಣ್ಣು-ಹಂಪಲು, ಹಣವಿಟ್ಟರೆ ಸಾಲದು, ಮನಸ್ಸಿನಲ್ಲಿ ಭಕ್ತಿ ಹಾಗೂ ಪರಿಶುದ್ಧತೆ ಇರಬೇಕು. ದೇವರು ಬಯಸುವುದು ಸಹ ಅದನ್ನೇ. ನಾವು ಮಾಡುವ ಪ್ರತಿ ಕೆಲಸವನ್ನು ನಮಗೋಸ್ಕರ ಮಾಡದೇ ಪರರಿಗೋಸ್ಕರ ಮಾಡಬೇಕು. ಅದನ್ನು ದೇವರು ಮೆಚ್ಚುತ್ತಾನೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ಎನ್.ಚಲುವ ರಾಯಸ್ವಾಮಿ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾಂಗ್ರೆಸ್ ಮುಖಂಡರಾದ ಗಣಿಗ ರವಿಕುಮಾರ್ ಗೌಡ, ಡಾ.ಕೃಷ್ಣ, ದಡ ದಪುರ ಶಿವಣ್ಣ, ಕೆ.ಕೆ.ರಾಧಾಕೃಷ್ಣ, ಸಿದ್ದರೂಢ ಸತೀಶ್‍ಗೌಡ, ಯು.ಸಿ.ಶಿವಕುಮಾರ್, ಸಿ.ಡಿ.ಗಂಗಾಧರ್, ಟ್ರಸ್ಟ್‍ನ ಗೌರವಾಧ್ಯಕ್ಷ ಜೆ.ಹುಚ್ಚಪ್ಪ, ಅಧ್ಯಕ್ಷ ಆನಂದ್, ಟ್ರಸ್ಟಿಗಳಾದ ಮರೀಗೌಡ, ಜವರಪ್ಪ, ಚಂದ್ರು, ಕಂಬದಹಳ್ಳಿ ಪುಟ್ಟಸ್ವಾಮಿ ಇನ್ನಿತರರಿದ್ದರು.