ಕೊಯಮತ್ತೂರಲ್ಲಿ ಜೆಎಸ್‍ಎಸ್ ಪ್ರಕೃತಿ ಚಿಕಿತ್ಸೆ,  ಯೋಗ ವಿಜ್ಞಾನ ಸಂಸ್ಥೆ ವಿದ್ಯಾರ್ಥಿನಿಲಯಗಳ ಆರಂಭ
News

ಕೊಯಮತ್ತೂರಲ್ಲಿ ಜೆಎಸ್‍ಎಸ್ ಪ್ರಕೃತಿ ಚಿಕಿತ್ಸೆ, ಯೋಗ ವಿಜ್ಞಾನ ಸಂಸ್ಥೆ ವಿದ್ಯಾರ್ಥಿನಿಲಯಗಳ ಆರಂಭ

October 29, 2022

ಕೊಯಮತ್ತೂರು, ಅ.28- ಕೊಯಮತ್ತೂರು ನವಕ್ಕರೈನಲ್ಲಿ ಜೆಎಸ್‍ಎಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ತಮಿಳುನಾಡು ರಾಜ್ಯಪಾಲ ರಾದ ಆರ್.ಎನ್.ರವಿ ಅವರು ಶುಕ್ರವಾರ ಉದ್ಘಾಟಿಸಿದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜೆಎಸ್‍ಎಸ್ ಮಹಾವಿದ್ಯಾಪೀಠವು ಭಾರತದ ಏಕತೆ, ಸೌಹಾರ್ದತೆ, ಸನಾತನ ಧಾರ್ಮಿಕತೆಯನ್ನು ಶತಶತಮಾನಗಳಿಂದಲೂ ಎತ್ತಿಹಿಡಿ ಯುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಬಣ್ಣಿಸಿದರು.
ಮೂರು ಶತಮಾನದ ವಸಾಹತುಶಾಹಿ, ಭಾರತೀಯ ಪರಂಪರೆಯ ಔನ್ನತ್ಯವನ್ನು ನಾಶ ಮಾಡಿತು. ಆದರೆ ಈಗ ಅದೆಲ್ಲವೂ ಮರು ಸ್ಥಾಪಿಸುತ್ತಿವೆ. ಸ್ವಾಮಿ ವಿವೇಕಾ ನಂದರು ಭಾರತವು ಸದೃಢ ಹಾಗೂ ವಿವೇಕಯುತ ಯುವಶಕ್ತಿಯುಳ್ಳ ದೇಶವಾಗಬೇಕೆಂಬ ಕನಸು ಕಂಡಿದ್ದರು. ನಮ್ಮ ದೇಶದ ಮೂಲಶಕ್ತಿಯಾದ ಆಧ್ಯಾತ್ಮಿಕತೆಯನ್ನು ಎಂದೂ ಮರೆಯುವಂತಿಲ್ಲ. ಯೋಗ ಇಡೀ ವಿಶ್ವಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟಿದೆ. ಆಚಾರ, ವಿಚಾರ, ಆಹಾರ ನಮ್ಮ ಬದುಕನ್ನು ರೂಪಿಸುವ ಶಕ್ತಿಗಳಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಜೊತೆಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಭಾರತ ವಿಶ್ವಗುರುವಾಗುವ ದಾರಿಯಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಂಡು ನಾವು ಮುಂದೆ ಸಾಗಬೇಕು ಎಂದು ಕರೆ ನೀಡಿದರು.
ಆಶೀರ್ವಚನ ನೀಡಿದ ಸುತ್ತೂರು ಶ್ರೀಗಳು, ಮನುಷ್ಯನ ಶರೀರ ಪ್ರಾಕೃತಿಕವಾಗಿ ಅತ್ಯುತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಆ ಶಕ್ತಿಯನ್ನು ಸಬಲಗೊಳಿಸ ಬೇಕಾಗಿರುವುದು ವೈದ್ಯರ ಕರ್ತವ್ಯ. ಪ್ರಸ್ತುತ ಪ್ರಕೃತಿಯ ಜೊತೆ ಸಹ ಜೀವನವನ್ನು ಕಡೆಗಣಿಸುತ್ತಿರುವುದೇ ರೋಗಗಳಿಗೆ ಕಾರಣವಾಗಿದೆ. ಭಾರತದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಯಾವುದೇ ಅಡ್ಡಪರಿಣಾಮಗಳಿಲ್ಲದ ವಿಶಿಷ್ಟ ಚಿಕಿತ್ಸಾ ಪದ್ಧತಿಗಳಾಗಿವೆ. ಆಯುರ್ವೇದ ಚಿಕಿತ್ಸೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಿಯಾಶೀಲವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಇತ್ತೀಚೆಗೆ ರಷ್ಯಾ ಇನ್ನಿತರ ಪಾಶ್ಚಾತ್ಯ ರಾಷ್ಟ್ರಗಳೊಡನೆ ಒಡಂಬಡಿಕೆ ಗಳಾಗುತ್ತಿರುವುದು ಸಂತಸದ ವಿಷಯ ಎಂದರು.

ತಮಿಳುನಾಡು ಡಾ.ಎಂಜಿಆರ್ ವೈದ್ಯಕೀಯ ವಿಶ್ವವಿದ್ಯಾಲ ಯದ ಕುಲಪತಿಯಾದ ಡಾ.ಸುಧಾ ಶೇಷಯ್ಯನವರು ಮಾತ ನಾಡಿ, ಮಾನವ ಸಂಸ್ಕøತಿ ಹಾಗೂ ಪ್ರಕೃತಿಯೊಂದಿಗೆ ನಿಕಟ ಸಂಬಂಧ ಕಳಚುತ್ತಿದೆ. ಪ್ರಕೃತಿಯ ಕೊಡುಗೆಯ ಬಗ್ಗೆ ನಿಜಕ್ಕೂ ಕೃತಜ್ಞತೆ ತೋರುವ ಅಗತ್ಯವಿದೆ. ಹೆಚ್ಚಿನ ಸಮಸ್ಯೆಗಳು ಪ್ರಾಕೃತಿಕ ನಿಯಮಗಳ ವಿರುದ್ಧದ ಅಭ್ಯಾಸದಿಂದಲೇ ಬರುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಪ್ರಾಂಶುಪಾಲ ಡಾ.ದಿಲೀಪ್, ಊಟಿ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಧನಬಾಲ ಮತ್ತಿತರರ ಗಣ್ಯರು ಭಾಗವಹಿಸಿದ್ದರು.

Translate »