ಪ್ರವಾಸಿಗರಿಗೆ ಬೃಂದಾವನ ಮುಕ್ತ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿಕೆ
ಮಂಡ್ಯ

ಪ್ರವಾಸಿಗರಿಗೆ ಬೃಂದಾವನ ಮುಕ್ತ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿಕೆ

October 24, 2022

ಶ್ರೀರಂಗಪಟ್ಟಣ, ಅ.23- ಕೆಆರ್‍ಎಸ್ ಬೃಂದಾವನ ದಲ್ಲಿ ಚಿರತೆ ಶೋಧನೆ ನಂತರ ಇಂದು ಪ್ರವಾಸಿಗರಿಗೆ ಬೃಂದಾವನವನ್ನು ಮುಕ್ತಗೊಳಿಸಲಾಯಿತು.
ಅಣೆಕಟ್ಟೆ ಬಳಿ ಶನಿವಾರ ಚಿರತೆ ಕಾಣಿಸಿಕೊಂಡಿದ್ದ ರಿಂದ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರನ್ನು ನಿರ್ಬಂ ದಿಸಿ, ಕೂಂಬಿಂಗ್ ಆರಂಭಿಸಲಾಗಿತ್ತು. ಅರಣ್ಯಾಧಿಕಾರಿ ಗಳಾದ ಮಹದೇವಸ್ವಾಮಿ ಹಾಗೂ ಅನಿತಾ ನೇತೃತ್ವ ದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಶನಿವಾರ ಸಂಜೆಯಿಂ ದಲೇ ಬೃಂದಾವನದ ಉತ್ತರ ಹಾಗೂ ದಕ್ಷಿಣ ದ್ವಾರ ಗಳು ಸೇರಿದಂತೆ ಅಣೆಕಟ್ಟೆ ಸುತ್ತಮುತ್ತ ಚಿರತೆ ಹೆಜ್ಜೆ ಗುರುತಿನ ಆಧಾರದಲ್ಲಿ ಹುಡುಕಾಟ ನಡೆಸಲಾಗಿತ್ತು.

ಇದೇ ವೇಳೆ ರಾಯಲ್ ಆರ್ಕಿಡ್ ಹೋಟೆಲ್ ಹಿಂಭಾ ಗದ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಮಾಹಿತಿ ತಿಳಿದು ಅಲ್ಲಿಯೂ ಕೂಂಬಿಂಗ್ ನಡೆಸಲಾಯಿತು. ಅಲ್ಲಿ ಬೋನ್ ಇಟ್ಟು ಕಾರ್ಯಾಚರಣೆಯನ್ನು ಚುರುಕುಗೊಳಿಸ ಲಾಗಿತ್ತು. ಶನಿವಾರ ಚಿರತೆ ಪ್ರತ್ಯಕ್ಷಗೊಂಡು ಅಣೆಕಟ್ಟೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಿನ ಸಿಬ್ಬಂದಿ ಹಾಗೂ ಪ್ರವಾಸಿಗರು ಭಯಭೀತಗೊಂಡಿ ದ್ದರು. ನಿರಂತರ ಹುಡುಕಾಟದಲ್ಲೂ
ಚಿರತೆ ಸುಳಿವು ದೊರಕದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಬೃಂದಾವನ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿ ನಿಯೋಜಿಸಿ ತೀವ್ರ ನಿಗಾ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಾವಿರಾರು ಪ್ರವಾಸಿಗರು ನಿರಾತಂಕವಾಗಿ ಬೃಂದಾವನ ವೀಕ್ಷಿಸಿ, ಸಂಭ್ರಮಿಸಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ರಾತ್ರಿ ಮತ್ತೆ ಪ್ರತ್ಯಕ್ಷ: ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಚಿರತೆ ಓಡಾಡಿದ್ದು ಅಣೆಕಟ್ಟೆಯ ಮೇಲೆ ಅಧಿಕಾರಿಗಳು ತಾತ್ಕಾಲಿಕವಾಗಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ವಿಡಿಯೋ ಸ್ಪಷ್ಟವಾಗಿರದ ಕಾರಣ ಯಾವ ಪ್ರಾಣಿ ಎಂದು ನಿಖರವಾಗಿ ಗುರುತಿಸಲಾಗಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದರಿಂದಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಹೊಸ ತಲೆನೋವು ಆರಂಭವಾದಂತಾಗಿದೆ.

ಅಸಮಾಧಾನ: ಇಂತಹ ಪರಿಸ್ಥಿತಿಯಲ್ಲಿ ಬೃಂದಾವನ ವೀಕ್ಷಣೆಗೆ ಅನುವು ಮಾಡಿ ಕೊಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. ಚಿರತೆ ಇರುವಿಕೆ ಸಾಧ್ಯತೆ ಕಡಿಮೆ ಎನ್ನುವ ಮಾತ್ರಕ್ಕೆ ಬೃಂದಾವನ ವೀಕ್ಷಣೆಗಿದ್ದ ನಿರ್ಬಂದವನ್ನು ತೆಗೆದು ತಯರಾತುರಿಯಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದೊಂದು ಅಪಾಯಕಾರಿ ನಿರ್ಧಾರವಾಗಿದ್ದು ಯಾರಾದರೂ ಸಿಬ್ಬಂದಿ ಅಥವಾ ಪ್ರವಾಸಿಗರಿಗೆ ಚಿರತೆಯಿಂದ ತೊಂದರೆಯಾದರೆ ಜವಾಬ್ದಾರರು ಯಾರಾಗುತ್ತಾರೆ? ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

Translate »