ಟ್ಯೂಷನ್‍ಗೆ ಹೋದ ಬಾಲಕಿ ಶವ ನಿರ್ಮಾಣ ಹಂತದ ಮನೆಯ ಸಂಪ್‍ನಲ್ಲಿ ಪತ್ತೆ
ಮಂಡ್ಯ

ಟ್ಯೂಷನ್‍ಗೆ ಹೋದ ಬಾಲಕಿ ಶವ ನಿರ್ಮಾಣ ಹಂತದ ಮನೆಯ ಸಂಪ್‍ನಲ್ಲಿ ಪತ್ತೆ

October 13, 2022

ಮಳವಳ್ಳಿ.ಅ.12- ಟ್ಯೂಷನ್‍ಗೆ ತೆರಳಿದ್ದ ಬಾಲಕಿಯ ಶವ ನಿರ್ಮಾಣ ಹಂತದ ಮನೆಯ ಸಂಪ್‍ನಲ್ಲಿ ಪತ್ತೆ ಯಾಗಿರುವ ಘಟನೆ ಮಳವಳ್ಳಿ ಪಟ್ಟಣ ದಲ್ಲಿ ವರದಿಯಾಗಿದೆ.

ಸುರೇಶ್ ಹಾಗೂ ಅಶ್ವಿನಿ ದಂಪತಿಯ ಪುತ್ರಿ, ಹತ್ತು ವರ್ಷದ ದಿವ್ಯಾ ನಿನ್ನೆ ಮಧ್ಯಾಹ್ನ ಕಾಂತರಾಜ್ ಎಂಬುವರ ಬಳಿ ಟ್ಯೂಷನ್‍ಗೆ ಹೋಗು ವುದಾಗಿ ಮನೆಯಿಂದ ಹೋಗಿದ್ದಳು. ಆದರೆ ಸಂಜೆಯಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಟ್ಯೂಷನ್ ನಡೆಯುವ ಸ್ಥಳ ಹಾಗೂ ಇತರೆಡೆ ಪೋಷಕರು ರಾತ್ರಿ ಯಿಡೀ ಹುಡುಕಾಟ ನಡೆಸಿದ್ದರೂ ಬಾಲಕಿಯ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಯಾರೋ ನೀಡಿದ ಸುಳಿವನ್ನು ಆಧರಿಸಿ, ಪೋಷಕರು ಹಾಗೂ ಸಂಬಂಧಿ ಗಳು ಮೈಸೂರು ರಸ್ತೆಯ ನಿರ್ಮಾಣ ಹಂತದ ಮನೆಯ ಸಂಪ್ ಪರಿಶೀಲಿಸಿ ದಾಗ ಅಲ್ಲಿ ಬಾಲಕಿಯ ಶವ ಪತ್ತೆಯಾ ಗಿದೆ. ತಕ್ಷಣ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿವೈಎಸ್ಪಿ ನವೀನ್‍ಕುಮಾರ್ ಹಾಗೂ ಮಳವಳ್ಳಿ ಟೌನ್ ಇನ್ಸ್‍ಸ್ಪೆಕ್ಟರ್ ರಾಜೇಶ್, ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಿದರು. ಜೊತೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸಿದರು.

ಆಸ್ಪತ್ರೆಗೆ ಎಸ್ಪಿ ಯತೀಶ್, ಎಎಸ್ಪಿ ವೇಣುಗೋಪಾಲ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ದಲ್ಲಿ ತಮ್ಮ ಮಗಳನ್ನು ಯಾರೋ ಹತ್ಯೆ ಮಾಡಿದ್ದು, ಅವರನ್ನು ಬಂಧಿಸಿ, ತಮಗೆ ನ್ಯಾಯ ದೊರಕಿಸಿಕೊಡುವಂತೆ ಪೋಷಕರು ಮನವಿ ಮಾಡಿದರು. ಜೊತೆಗೆ ಆರೋಪಿ ಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡು ವಂತೆ ಒತ್ತಾ ಯಿಸಿ, ಪೊಲೀಸ್ ಠಾಣೆ ಮುಂದೆಯೂ ಪ್ರತಿಭಟನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ.ಕೆ. ಅನ್ನದಾನಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಿಕ್ಷಕನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Translate »