ಮೇಲುಕೋಟೆ ಕ್ಷೇತ್ರದ ಬಹುನಿರೀಕ್ಷಿತ ದುದ್ದ ಏತ ನೀರಾವರಿ ಯೋಜನೆಗೆ ಇಂದು ಚಾಲನೆ
ಮಂಡ್ಯ

ಮೇಲುಕೋಟೆ ಕ್ಷೇತ್ರದ ಬಹುನಿರೀಕ್ಷಿತ ದುದ್ದ ಏತ ನೀರಾವರಿ ಯೋಜನೆಗೆ ಇಂದು ಚಾಲನೆ

March 3, 2023

ಮಂಡ್ಯ, ಮಾ.2- ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಬಹುನಿರೀಕ್ಷಿತ ಏತ ನೀರಾವರಿ ಯೋಜನೆಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಇಂದು ಚಾಲನೆ ನೀಡಲಿದ್ದಾರೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದುದ್ದ ಹೋಬಳಿಯ ಹಲವು ಗ್ರಾಮಗಳ 54 ಕೆರೆ ತುಂಬಿಸುವ ಹಾಗೂ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಾಳೇನಹಳ್ಳಿ ಯಿಂದ ಲಿಫ್ಟ್ ಆರಂಭಿಸುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದು, ಬಳಿಕ ಭುಗ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ವೇದಿಕೆ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದರು. ಮೈತ್ರಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವನಾಗಿದ್ದಾಗ ಈ ಯೋಜನೆ ಮಾಡಬೇಕೆಂಬ ಕನಸು ಕಂಡಿದ್ದೆ. ಆ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಈ ಬಗ್ಗೆ ಚರ್ಚಿ ಸಿದಾಗ ತಮ್ಮ ಮೊದಲ ಬಜೆಟ್‍ನಲ್ಲಿ 30 ಕೋಟಿ ಕಾಯ್ದಿರಿಸಿದ್ದರು. ಬಳಿಕ 144 ಕೋಟಿ ಹಂತ ಹಂತವಾಗಿ ಖರ್ಚಾಗಿದ್ದು, ಯೋಜನೆ ಪೂರ್ಣ ಗೊಳ್ಳುವ ವೇಳೆಗೆ 185 ಕೋಟಿ ಖರ್ಚಾಗಿದೆ ಎಂದು ವಿವರಿಸಿದರು. ಕಾವೇರಿ ಹಾಗೂ ಲೋಕ ಪಾವನಿ ನದಿ ಸಂಗಮವಾಗುವ ನಿಮಿಷಾಂಬ ದೇಗುಲದ ಮುಂಭಾಗ ಅಲ್ಲಿಂದ ನೀರೆತ್ತುವ ಯೋಜನೆ ಇದಾಗಿದ್ದು, ಅಲ್ಲಿಂದ ದುದ್ದ ಹೋಬಳಿಗೆ ನೀರು ಸರಬರಾಜಾಗಲಿದೆ ಎಂದರು.

ಕಳೆದೊಂದು ವಾರದಿಂದ 54 ಕೆರೆಗಳನ್ನು ತುಂಬಿಸುವ ಕುರಿತು ಟ್ರಯಲ್ ನಡೆಸಿ, ಬಹಳ ಉತ್ತಮ ರೀತಿಯಲ್ಲಿ ಯೋಜನೆ ಅನುಷ್ಠಾನವಾ ಗುತ್ತಿದೆ. ಹುಲಿಕೆರೆ ಭುಗದ ಹಲವಾರು ಕೆರೆಗಳಿಗೆ ನಾವು ಈಗಾಗಲೇ ನೀರು ತುಂಬಿಸಿದ್ದು, ಅಲ್ಲಿನ ಮಹದೇಶ್ವರ ದೇಗುಲದ ಬಳಿಯ ಕೆರೆಗೆ ಸಚಿವರು ಬಾಗಿನ ಅರ್ಪಿಸಲಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸಣ್ಣತನದ ರಾಜಕೀಯ ಬೇಡ: ಇನ್ನು ಈ ಯೋಜನೆಯನ್ನು ಕೆ.ಎಸ್.ಪುಟ್ಟಣ್ಣಯ್ಯ ಶಾಸಕ ರಾಗಿದ್ದಾಗ ತಂದಿದ್ದಾರೆ ಎಂಬ ಅವರ ಬೆಂಬಲಿ ಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಎಸ್.ಪುಟ್ಟರಾಜು, ನಾನು ಕೆ.ಎಸ್.ಪುಟ್ಟಣ್ಣಯ್ಯ ಹಲವು ವರ್ಷ ಗಳಿಂದ ವಿರುದ್ಧವಾಗಿ ರಾಜಕಾರಣ ಮಾಡಿ ಕೊಂಡು ಬಂದಿದ್ದು, ಅವರ ಬಗ್ಗೆ ನನಗೆ ಅಭಿಮಾನ ವಿದೆ. ಆದರೆ ಅವರ ಬೆಂಬಲಿಗರು ಸಣ್ಣತನದ ರಾಜಕಾರಣ ಮಾಡುವುದನ್ನು ನಾನು ಒಪ್ಪುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆ ಆರಂಭವಾದ ದಿನಾಂಕ ಹಾಗೂ ಕ್ಯಾಬಿನೆಟ್‍ನಲ್ಲಿ ಯೋಜನೆಗೆ ಅನುಮತಿ ಸಿಕ್ಕ ದಿನಾಂಕ ಹಾಗೂ ಟೆಂಡರ್ ಆಗಿರುವ ದಿನಾಂಕವನ್ನು ದಾಖಲೆ ಸಹಿತ ತೋರಿಸಿದ ಶಾಸಕರು, ಇಷ್ಟೊಂದು ದಾಖಲೆಗಳಿದ್ದರೂ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವ ಅವರುಗಳು ಅದರಿಂದಲೇ ದೊಡ್ಡ ನಾಯಕರಾಗಬಹುದು ಎಂದುಕೊಂಡಿದ್ದರೆ ನಾನು ಏನು ಮಾಡಲು ಆಗುವುದಿಲ್ಲ. ನಾನು ಮಾಡಿರುವ ಕೆಲಸದ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ ಹಾಗೂ ದೇವರಿಗೆ ಗೊತ್ತಿದೆ ಎಂದರು.

ನಾಳೆ ಕಾರ್ಯಕ್ರಮಕ್ಕೆ ಸಚಿವ ಮಾಧುಸ್ವಾಮಿ ಬಂದ ಸಂದರ್ಭ ಯೋಜನೆ ಹೇಗೆ ಆರಂಭವಾಯಿತು. ಯಾವಾಗ ಹಣ ಬಿಡುಗಡೆಯಾಯಿತು ಎಂಬ ಮಾಹಿತಿ ಯನ್ನು ದಿನಾಂಕದ ಸಹಿತ ನಾಳೆ ತಿಳಿಸಲಿದ್ದಾರೆ. ಅದರಂತೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಗೊಂದಲಗೊಳ್ಳುವುದು ಬೇಡ. ನೂರಕ್ಕೆ ಸಾವಿರ ಭಾಗ ಯೋಜನೆಯನ್ನು ನಾನೇ ಮಂಜೂರು ಮಾಡಿಸಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರೇ ಒಪ್ಪಿಗೆ ಸೂಚಿಸಿ, ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಯಾರು ಗೊಂದಲ ಕ್ಕೀಡಾಗದೇ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು. ಬಳಿಕ ಶಾಸಕ ಸಿಎಸ್.ಪುಟ್ಟ ರಾಜು ಯೋಜನೆಗೆ ಚಾಲನೆ ಸಿಗುವ ಕಾಳೇನಹಳ್ಳಿ ಹಾಗೂ ಭುಗ ಗ್ರಾಮಕ್ಕೆ ಭೇಟಿ ನೀಡಿ, ಭರ್ತಿಯಾದ ಕೆರೆ, ವೇದಿಕೆ ಕಾರ್ಯಕ್ರಮ ನಡೆಯುವ ಜಾಗ ಹಾಗೂ ಯೋಜನೆಗೆ ಚಾಲನೆ ಸಿಗುವ ಯಂತ್ರಗಾರಗಳನ್ನು ಪರಿಶೀಲನೆ ನಡೆಸಿದರು.

Translate »