ಮಂಡ್ಯ, ಫೆ.12- ಮೈಸೂರು,ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಚಿರತೆ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ವಿಧಾನಪರಿಷತ್ ಸದಸ್ಯ ದಿನೇಶ ಗೂಳಿಗೌಡ ಚಿರತೆ ಟಾಸ್ಕ್‍ಫೆÇೀರ್ಸ್‍ಗೆ ಸೂಚನೆ ನೀಡಿದರು.
ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಟಾಸ್ಕ್ ಫೆÇೀರ್ಸ್ ಮುಖ್ಯಸ್ಥ ಐಎಫ್‍ಎಸ್ ಅಧಿಕಾರಿ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸೌರಭ್ ಕುಮಾರ್ ಅವರನ್ನು ಮಂಡ್ಯದಲ್ಲಿ ಭಾನುವಾರ ಭೇಟಿಯಾಗಿ ಸಂಬಂಧ ಚರ್ಚೆ ನಡೆಸಿದರು.
ಮಂಡ್ಯದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಿದೆ. ಚಿರತೆಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಕೆ.ಆರ್.ಪೇಟೆ, ಮದ್ದೂರು, ಮೇಲುಕೋಟೆ, ಮಳವಳ್ಳಿ, ನಾಗಮಂಗಲ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದು, ಸಾಕುಪ್ರಾಣಿಗಳಾದ ದನ, ನಾಯಿ, ಕುರಿ, ಮೇಕೆಗಳನ್ನು ಹೊತ್ತೊಯ್ಯುತ್ತಿವೆ. ಇದರಿಂದ ರೈತರು, ವಿದ್ಯಾರ್ಥಿಗಳು ಆತಂಕ ಗೊಂಡಿದ್ದಾರೆ. ಜನರ ಭಯ ನಿವಾರಿಸಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಅಗತ್ಯಬಿದ್ದರೆ ಬೋನ್‍ಗಳನ್ನು ಇಟ್ಟು ಚಿರತೆಗಳನ್ನು ಹಿಡಿಯಬೇಕು. ಜನರ ರಕ್ಷಣೆಗೆ ಟಾಸ್ಕ್‍ಫೆÇೀರ್ಸ್ ಸನ್ನದ್ಧವಾಗಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಾಸ್ಕ್ ಫೆÇೀರ್ಸ್ ಮುಖ್ಯಸ್ಥ ಸೌರಭ್ ಕುಮಾರ್, ಚಿರತೆಗಳು ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಕಬ್ಬಿನ ಗದ್ದೆಗಳಿಗೆ ಬರುತ್ತಿವೆ. ಕಬ್ಬು ಕಟಾವಿಗೆ ಬರುವ ಅಥವಾ ಈ ಭಾಗದಲ್ಲಿ ಓಡಾಡುವ ರೈತರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ, ನಗರ ಪ್ರದೇಶ ದಲ್ಲಿ ಮಾಂಸ ತ್ಯಾಜ್ಯಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬೀದಿ ನಾಯಿಗಳು, ಹಂದಿಗಳ ಪ್ರಮಾಣ ಹೆಚ್ಚಿದೆ. ಇದರಿಂದ ಚಿರತೆಗಳು ಆಹಾರ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಬರುತ್ತಿವೆ ಎಂದು ಚಿರತೆಗಳು ನಗರ ಪ್ರದೇಶಕ್ಕೆ ಬರುತ್ತಿರುವ ಬಗ್ಗೆ ವಿವರಿಸಿದರು.
ಚಿರತೆಗಳ ವರ್ತನೆ ಹಾಗೂ ಅವುಗಳ ನಿಯಂತ್ರಣದ ಬಗ್ಗೆ ಗುಜರಾತ್‍ನ ಗಿರ್ ಅರಣ್ಯಾಧಿಕಾರಿಗಳು, ಮುಂಬೈನ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಚಿರತೆಗಳನ್ನು ಸೆರೆ ಹಿಡಿದಲ್ಲಿ ದೂರದ ಕಾಡಿಗೆ ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ಚಿರತೆಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಸೌರಭ್‍ಕುಮಾರ್ ತಿಳಿಸಿದ್ದಾರೆ ಎಂದು ದಿನೇಶ ಗೂಳಿಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.