ಮಂಡ್ಯ ಜಿಲ್ಲೆ ರೈತರ ಸಮಸ್ಯೆ ಈಡೇರಿಕೆ, ರಸ್ತೆ ದುರಸ್ತಿ, ಸಮಸ್ತ ಅಭಿವೃದ್ಧಿಗಾಗಿ ತುರ್ತು ಕೆಡಿಪಿ ಸಭೆ
ಮಂಡ್ಯ

ಮಂಡ್ಯ ಜಿಲ್ಲೆ ರೈತರ ಸಮಸ್ಯೆ ಈಡೇರಿಕೆ, ರಸ್ತೆ ದುರಸ್ತಿ, ಸಮಸ್ತ ಅಭಿವೃದ್ಧಿಗಾಗಿ ತುರ್ತು ಕೆಡಿಪಿ ಸಭೆ

November 17, 2022

ಮಂಡ್ಯ, ನ.19- ಜಿಲ್ಲೆಯಲ್ಲಿ ರೈತರ ಸಮಸ್ಯೆ, ರಸ್ತೆಗಳ ದುರಸ್ತಿ ಹಾಗೂ ಗುಂಡಿ ಮುಚ್ಚಲು ಕ್ರಮವಹಿಸುವುದು, ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ತೆರೆ ಯುವುದು, ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ, ಹಾಲು ದರ ಪರಿಷ್ಕರಣೆ, ಮೈಸೂರು ಸಕ್ಕರೆ ಕಾರ್ಖಾನೆಗೆ ಬಾಕಿ 20 ಕೋಟಿ ರೂಪಾಯಿ ಬಿಡುಗಡೆ ಸೇರಿದಂತೆ ಸಮಗ್ರ ವಿಷಯ ಗಳನ್ನು ಚರ್ಚೆ ಮಾಡುವ ಹಾಗೂ ಆಡಳಿತ ವ್ಯವಸ್ಥೆಗೆ ಚುರುಕು ನೀಡುವ ಸಂಬಂಧ ತುರ್ತು ಕೆಡಿಪಿ ಸಭೆಯನ್ನು ಕರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರನ್ನು ಭೇಟಿ ಮಾಡಿದ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ರೈತರಿಗೆ ಸಂಬಂಧ ಪಟ್ಟ ಅನೇಕ ಸಮಸ್ಯೆಗಳಿವೆ, ರಸ್ತೆಗಳು ಬಹಳವೇ ಹದಗೆಟ್ಟಿದ್ದು, ಗುಂಡಿಗಳು ಹೆಚ್ಚಿವೆ. ಇದ ರಿಂದ ವೀರಯೋಧರೊಬ್ಬರು ದುರ್ಮರಣ ಆಗುವಂತಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಆಡಳಿತ ವ್ಯವಸ್ಥೆಗೆ ವೇಗ ನೀಡ ಬೇಕಿದ್ದು, ತುರ್ತಾಗಿ ಜಿಲ್ಲಾ ಮಟ್ಟದ ಕೆಡಿಪಿ ಸಭೆಯನ್ನು ಕರೆಯಬೇಕಿದೆ ಎಂದು ಶಾಸಕರು ಮನವಿ ಮಾಡಿದ್ದಾರೆ.

ಅಲ್ಲದೆ, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಭತ್ತ ಕೊಯಿಲಿಗೆ ಬಂದಿದ್ದು, ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕಿದೆ. ಇದರ ಜೊತೆಗೆ ಕಳೆದ ವರ್ಷದಲ್ಲಿದ್ದ ಕೆಲವು ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆಯೂ ಚರ್ಚೆ ನಡೆಸ ಬೇಕಿದೆ ಎಂದು ಶಾಸಕರು ಒತ್ತಾಯಿಸಿದ್ದಾರೆ.

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ಹಾಲಿನ ದರ ಪರಿಷ್ಕರಣೆ ಮಾಡುವಂತೆ ರೈತ ನಾಯಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ಬಗ್ಗೆ ಚರ್ಚಿಸಲು ಮುಖ್ಯ ಮಂತ್ರಿಗಳೊಡನೆ ಸಭೆ ಏರ್ಪಡಿಸಬೇಕಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ತಮಲ್ಲಿ ಚರ್ಚೆ ನಡೆಸಬೇಕು ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಸಚಿವ ಗೋಪಾ ಲಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಮೈಸೂರು ಸಕ್ಕರೆ ಕಾರ್ಖಾನೆ ವಿಷಯಕ್ಕೆ ಸಂಬಂಧಪಟ್ಟಂತೆ ಆಯವ್ಯಯದಲ್ಲಿ ಘೋಷಿ ಸಿದಂತೆ 50 ಕೋಟಿ ರೂಪಾಯಿಯಲ್ಲಿ 30 ಕೋಟಿ ರೂಪಾಯಿ ಮಾತ್ರವೇ ಈವರೆಗೆ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ 20 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರದಿಂದ ತುರ್ತಾಗಿ ಬಿಡುಗಡೆ ಮಾಡಿಸಬೇಕಿದೆ. ಈ ಕುರಿತೂ ಸಹ ಸಭೆಯಲ್ಲಿ ಚರ್ಚೆ ನಡೆಸಬೇಕಿದೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಂಡ್ಯ ನಗರ ಹಾಗೂ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಆಗಬೇಕಿದೆ. ಅಲ್ಲದೆ, ಹಲವು ಕಡೆ ತುರ್ತಾಗಿ ಗುಂಡಿ ಮುಚ್ಚಬೇಕಿದೆ ಎಂದು ಶಾಸಕರು ಜಿಲ್ಲೆಯಲ್ಲಿನ ಸಮಸ್ಯೆಯ ತೀವ್ರತೆ ಬಗ್ಗೆ ಗಮನ ಸೆಳೆದಿದ್ದಾರೆ.

ಕಳೆದ ಹಲವು ತಿಂಗಳಿಂದ ನಿರಂತರವಾಗಿ ಭಾರಿ ಮಳೆ ಸುರಿದಿದ್ದು, ರೈತರು, ಜನ-ಜಾನು ವಾರುಗಳು ಸಂಕಷ್ಟಕ್ಕೀಡಾಗಿವೆ. ಹಲವು ಆತಂಕ ಮತ್ತು ಸಮಸ್ಯೆಗಳನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಅತಿವೃಷ್ಟಿಯಿಂದ ಬಹುತೇಕ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನಸಾಮಾನ್ಯರು ಪ್ರಯಾಣಿಸಲು ಸಾಧ್ಯವಾಗದಷ್ಟು ದುಸ್ತರ ವಾಗಿವೆ. ಇಂತಹ ರಸ್ತೆ ಗುಂಡಿಯಿಂದಾಗಿ ಜಿಲ್ಲೆಯ ಹೆಮ್ಮೆಯ ಸೈನಿಕರೊಬ್ಬರು ಅಪಘಾತದಿಂದ ಮರಣ ಹೊಂದಿದ್ದು ದುರ ದೃಷ್ಟಕರ ಹಾಗೂ ದುಃಖದ ಸಂಗತಿಯಾ ಗಿದೆ. ಜಿಲ್ಲೆಯ ಸಮಸ್ಯೆಗಳನ್ನು ಚರ್ಚಿಸಿ ಜಿಲ್ಲಾ ಡಳಿತವನ್ನು ಚುರುಕುಗೊಳಿಸಿ ಅಭಿವೃದ್ಧಿಯ ವೇಗ ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ಮೂರು ತಿಂಗಳಿಗೆ ಒಮ್ಮೆ ಕೆಡಿಪಿ ಸಭೆ ನಡೆಯ ಬೇಕು. ಆದರೆ, ಕಳೆದ ಜೂನೆ 29 ರಂದು ನಡೆದಿದ್ದೇ ಕೊನೆಯ ಸಭೆಯಾಗಿರುತ್ತದೆ. ಈಗಾಗಲೇ 5 ತಿಂಗಳು ಕಳೆದಿರುವುದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆಯುಂಟಾಗಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಮಂದಗತಿ ಯಲ್ಲಿ ಸಾಗುತ್ತಿರುವುದರ ಜೊತೆಗೆ ಇದು ತುಂಬಾ ಆಘಾತಕಾರಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ತುಂಬಾ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಶೀಘ್ರ ಕೆಡಿಪಿ ಸಭೆ ಕರೆದು ಜನರಲ್ಲಿ ಮೂಡುತ್ತಿರುವ ತಪ್ಪು ಭಾವನೆಯನ್ನು ಹೋಗಲಾಡಿಸುವು ದರ ಜತೆಗೆ ಮಾನ್ಯ ಮುಖ್ಯಮಂತ್ರಿಗಳ ಬಳಿಗೆ ರೈತರು ಮತ್ತು ಜನಪ್ರತಿನಿಧಿಗಳನ್ನೊಳಗೊಂಡ ನಿಯೋಗವನ್ನು ಕೊಂಡೊಯ್ಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ದಿನೇಶ್ ಗೂಳಿಗೌಡ ಮತ್ತು ಮಧು ಮಾದೇಗೌಡ ಮನವಿ ಮಾಡಿದ್ದಾರೆ.

Translate »