ವೀಕೆಂಡ್ ಕಫ್ರ್ಯೂಗೆ ನರಸೀಪುರದಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರು ಗ್ರಾಮಾಂತರ

ವೀಕೆಂಡ್ ಕಫ್ರ್ಯೂಗೆ ನರಸೀಪುರದಲ್ಲಿ ಉತ್ತಮ ಪ್ರತಿಕ್ರಿಯೆ

April 25, 2021

ತಿ.ನರಸೀಪುರ, ಏ.24 (ಎಸ್‍ಕೆ)- ಕೊರೊನಾ ಎರಡನೇ ಅಲೆ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಯಲ್ಲಿ ಅದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವೀಕೆಂಡ್ ಕಪ್ರ್ಯೂಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸದಾ ಜನಜಂಗುಳಿಯಿಂದ ತುಂಬಿರು ತ್ತಿದ್ದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಮೆಡಿಕಲ್ ಸ್ಟೋರ್ ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ತೆರನಾದ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸರ್ಕಾರದ ಉದ್ದೇಶಕ್ಕೆ ಅಂಗಡಿ ಮಾಲೀಕರು ಸಾಥ್ ನೀಡಿದರು.

ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್‍ಗಳು ಎಂದಿನಂತೆ ಓಡಾಟ ನಡೆಸಲಿವೆ ಎಂದು ಸರ್ಕಾರ ಪ್ರಕಟಿಸಿದ್ದರೂ ಯಾವೊಂದು ಬಸ್‍ಗಳು ಸಂಚಾರ ಆರಂಭಿಸಲಿಲ್ಲ. ಪ್ರಯಾಣಿಕರಿಗೆ ಇಂದು ಕಫ್ರ್ಯೂ ಜಾರಿಯಲ್ಲಿ ರುವ ಬಗ್ಗೆ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಯಾವೊಬ್ಬ ಪ್ರಯಾಣಿಕರು ಬಸ್ ನಿಲ್ದಾಣ ದತ್ತ ಸುಳಿಯಲಿಲ್ಲ. ಅಗತ್ಯ ವಸ್ತು ಖರೀದಿಸಲು ಬೆಳಿಗ್ಗೆ 6 ರಿಂದ 10 ರವರೆಗೆ ನೀಡಿದ್ದ ಸಮ ಯಾವಕಾಶದಲ್ಲಿ ಜನತೆ ಅಗತ್ಯ ವಸ್ತು ಗಳನ್ನು ಖರೀದಿಸಿ ಮನೆ ಸೇರಿಕೊಂಡರು. 10 ಗಂಟೆಯ ನಂತರ ಪಟ್ಟಣ ಸಂಪೂರ್ಣ ಸ್ತಬ್ಧವಾಯಿತು. ಪಟ್ಟಣದಲ್ಲಿ ಅನಗತ್ಯವಾಗಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಯುವಕರನ್ನು ಪೆÇಲೀಸರು ತಡೆದು ಮನೆಗೆ ಹೋಗು ವಂತೆ ಸೂಚನೆ ನೀಡುತ್ತಿದ್ದ ದೃಶ್ಯ ಕಂಡು ಬಂತು. ಕಫ್ರ್ಯೂ ಹಿನ್ನೆಲೆಯಲ್ಲಿ ಸದಾ ಜನರಿಂದ ಗಿಜಿ ಗುಡುತ್ತಿದ್ದ ಲಿಂಕ್ ರಸ್ತೆ, ಕಾಲೇಜು ರಸ್ತೆ, ಮಾರುಕಟ್ಟೆ ರಸ್ತೆ, ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ಜನರಿಲ್ಲದೇ ಭಣಗುಡುತ್ತಿದ್ದವು. ನಾಲ್ಕನೇ ಶನಿವಾರ ಸರ್ಕಾರಿ ರಜಾ ದಿನವಾದ ಹಿನ್ನೆಲೆಯಲ್ಲಿ ಕಪ್ರ್ಯೂ ಮತ್ತಷ್ಟು ಯಶಸ್ವಿಯಾಗಲು ಸಹಕಾರಿಯಾಯಿತು. ಪಟ್ಟಣ ಠಾಣೆಯ ಎಸ್‍ಐ ಹೆಚ್.ಡಿ. ಮಂಜು ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕೊರೊನಾ ಎರಡನೆಯ ಅಲೆ ತೀವ್ರ ಸ್ವರೂಪ ದಾದ್ದರಿಂದ ಸಣ್ಣಪುಟ್ಟ ಮಕ್ಕ ಳಿಗೂ ಸೋಂಕು ತಗುಲುವ ಸಾಧ್ಯತೆಯಿದೆ. ಪೆÇೀಷಕರು ತಮ್ಮ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಕಡ್ಡಾಯವಾಗಿ ಉಚಿತವಾಗಿ ದೊರಕು ತ್ತಿರುವ ಕೊರೊನಾ ವ್ಯಾಕ್ಸಿನ್ ಹಾಕಿಸಿ ಕೊಳ್ಳಿ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ವಯೋಮಾನದವರಿಗೂ ಲಸಿಕೆ ಹಾಕಲಾಗುತ್ತದೆ.

ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸಿ. ಸಾಮಾಜಿಕ ಅಂತರ, ಸ್ಯಾನಿಟೈಸರ್ ನಿಮ್ಮ ದಿನನಿತ್ಯದ ಕಾರ್ಯಗಳಲ್ಲಿ ಒಂದಾಗಿರಲಿ.
– ಪ್ರೇಮಾ ಮರಯ್ಯ,
ಪುರಸಭೆ ಉಪಾಧ್ಯಕ್ಷೆ

Translate »