ಮೊದಲಿಗಿಂತ ಎರಡನೇ ಅಲೆ ಬಹಳ ತೀಕ್ಷ್ಣವಾಗಿದೆ
ಮೈಸೂರು

ಮೊದಲಿಗಿಂತ ಎರಡನೇ ಅಲೆ ಬಹಳ ತೀಕ್ಷ್ಣವಾಗಿದೆ

April 25, 2021

ಬೆಂಗಳೂರು, ಏ.24(ಕೆಎಂಶಿ)- ರೂಪಾಂತರ ಗೊಂಡಿರುವ ವೈರಸ್ ಸ್ವಭಾವ ವೈದ್ಯಕೀಯ ಸಮೂಹವನ್ನೇ ದಾರಿ ತಪ್ಪಿಸಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದ ಲಿನ ಅಲೆಗೆ ಹೋಲಿಸಿದರೆ, ಎರಡನೇ ಅಲೆ ಬಹಳ ತೀಕ್ಷ್ಣವಾಗಿದೆ ಹಾಗೂ ವೇಗವಾಗಿ ಹರಡುತ್ತಿದೆ. ಇದು ರೂಪಾಂತರಗೊಂಡಿರುವ ವೈರಸ್ಸಿನ ಸ್ವಭಾವ ಎಂದರು. ಎರಡನೇ ಅಲೆಯಿಂದ ಹೆಚ್ಚು ಜನರು ಸೋಂಕಿಗೆ ಒಳಗಾಗಿ ದ್ದಾರೆ. ಇದರಿಂದ ಸಾವಿನ ಪ್ರಮಾಣವು ಹೆಚ್ಚಿದೆ. ಯಾವುದೇ ವೈರಸ್ ನಿರಂತರವಾಗಿ ಬದಲಾವಣೆ ಆಗುತ್ತಲೇ ಇರುತ್ತದೆ. ಇದೆಲ್ಲದಕ್ಕೂ ಲಸಿಕೆ ಮದ್ದು. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮೇ 1 ರಿಂದ 18ನೇ ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಕೇಂದ್ರ ತೀರ್ಮಾನಿಸಿದೆ. ರಾಜ್ಯಕ್ಕೆ ಅಗತ್ಯವಿರುವ ಲಸಿಕೆ ಸಂಗ್ರಹದಲ್ಲಿ ಎಲ್ಲಾ ಕ್ರಮ ಕೈಗೊಂಡಿದೆ ಎಂದರು.

ಮೇ 1ರ ನಂತರ 1500 ಟನ್ ಆಕ್ಸಿಜನ್ ಬೇಕಾಗುವ ನಿರೀಕ್ಷೆ ಇದೆ. ಇದನ್ನು ಪೂರೈಕೆ ಮಾಡುವಂತೆ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಹೆಚ್ಚುವರಿ 2000 ಐಸಿಯು ಬೆಡ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದೇ ರೀತಿ ಮೈಸೂರು, ಶಿವಮೊಗ್ಗ ಸೇರಿದಂತೆ ಆರು ನಗರ ಕೇಂದ್ರಗಳಲ್ಲಿ 200 ರಿಂದ 250 ಹಾಸಿಗೆಗಳ ಐಸಿಯು, ವೆಂಟಿಲೇಟರ್ ಬೆಡ್‍ಗಳನ್ನು ಇನ್ನು 15 ದಿನದೊಳಗಾಗಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.

 

 

Translate »